GHPS Mangalagatti
ನಮ್ಮ GHPS ಮಂಗಳಗಟ್ಟಿ ಶಾಲೆಯಲ್ಲಿ “ಸಮುದಾಯದತ್ತ ಶಾಲೆ” ಕಾರ್ಯಕ್ರಮವನ್ನು ಅದ್ಧೂರಿಯಾಗಿ ಹಾಗೂ ಉತ್ಸಾಹಭರಿತವಾಗಿ ಆಚರಿಸಲಾಯಿತು.ಈ ಕಾರ್ಯಕ್ರಮದ ಮುಖ್ಯ ಉದ್ದೇಶವು ಶಾಲೆ ಮತ್ತು ಸಮುದಾಯದ ನಡುವಿನ ಬಾಂಧವ್ಯವನ್ನು ಬಲಪಡಿಸಿ, ವಿದ್ಯಾರ್ಥಿಗಳ ಸಂಪೂರ್ಣ ವ್ಯಕ್ತಿತ್ವ ವಿಕಾಸಕ್ಕೆ ಸಮುದಾಯದ ಸಹಕಾರವನ್ನು ಪಡೆಯುವುದಾಗಿದೆ.ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಅಮೂಲ್ಯ ಅಭಿಪ್ರಾಯಗಳನ್ನು ಹಂಚಿಕೊಂಡರು.ನಂತರ ಪೋಷಕರು ವಿದ್ಯಾರ್ಥಿಗಳ SA-1 ಪರೀಕ್ಷೆಯ ಪೇಪರ್‌ಗಳು ಮತ್ತು ಗ್ರೇಡ್‌ಗಳನ್ನು ವೀಕ್ಷಿಸಿದರು. ಕೆಲವು ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಮತ್ತು ಅವರ ಅಭ್ಯಾಸದಲ್ಲಿ ಕಂಡುಬಂದ ಸುಧಾರಣೆ ಕುರಿತು ಸಂತೋಷ ವ್ಯಕ್ತಪಡಿಸಿದರು. ಕೆಲವರು “ನೀವು ಶಾಲೆಗೆ ಬಂದ ನಂತರ ನಮ್ಮ ಮಕ್ಕಳಲ್ಲಿ ಹಾಗೂ ಶಾಲೆಯಲ್ಲಿ ಬಹಳ ಬದಲಾವಣೆ ಕಂಡುಬರುತ್ತಿದೆ” ಎಂದು ಹೇಳಿದರು.ಪೋಷಕರ ಮಾತುಗಳನ್ನು ಕೇಳಿ ನನಗೆ ತುಂಬಾ ಸಂತೋಷವಾಯಿತು.
thank you..😊

Comments
Post a Comment