The greatness of a community is most accurately measured by the compassionate actions of its members.Our Yuva Fellows visited community to understand the challenges and need of the community. Fellows reflected that it was wonderful meeting young minds.
ನಮ್ಮ ಶಾಲೆಯ ಕನ್ನಡ ರಾಜ್ಯೋತ್ಸವ ಆಚರಣೆ – ಸ್ಮರಣೀಯ ದಿನ 🌟 ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಲೋಕೂರ ನಲ್ಲಿ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಭಕ್ತಿ, ಉತ್ಸಾಹ ಮತ್ತು ಹೆಮ್ಮೆಯಿಂದ ಆಚರಿಸಲಾಯಿತು. ಬೆಳಿಗ್ಗೆ 7:30ಕ್ಕೆ ನಾನು ಶಾಲೆಗೆ ಆಗಮಿಸಿದೆ. ದಿನದ ಕಾರ್ಯಕ್ರಮಗಳಿಗೆ ತಯಾರಿ ಮಾಡುವುದನ್ನು ಆರಂಭಿಸಿದರು. ಮೊದಲು ನಾವು ಪೂಜೆ ವ್ಯವಸ್ಥೆ ಮಾಡಿ, ದೇವರ ಆಶೀರ್ವಾದದೊಂದಿಗೆ ದಿನವನ್ನು ಶುರು ಮಾಡಿದೆವು. ನಂತರ ನಾನು ದಿನದ ಕಾರ್ಯಕ್ರಮಕ್ಕೆ ಹೊಂದುವಂತೆ ಬೋರ್ಡ್ ಬರೆಯುವ ಕೆಲಸ ಮಾಡಿಕೊಂಡೆ. ಪೂಜೆ ನಂತರ ಮುಖ್ಯ ಕಾರ್ಯಕ್ರಮ ಆರಂಭವಾಯಿತು. ಇಂದಿನ ದಿನದ ಅತ್ಯಂತ ಹೆಮ್ಮೆಗೊಳಿಸುವ ಕ್ಷಣ ಎಂದರೆ ನಮ್ಮ 7ನೇ ತರಗತಿಯ ವಿದ್ಯಾರ್ಥಿಗಳು ಸಂಪೂರ್ಣ ಕಾರ್ಯಕ್ರಮವನ್ನು ಸ್ವತಃ ಯೋಜಿಸಿ, ನೇತೃತ್ವ ವಹಿಸಿ, ನಿರ್ವಹಿಸಿದರು. ಶಿಕ್ಷಕರ ಮಾರ್ಗದರ್ಶನ ಇರುವುದಿದ್ದರೂ, ವಿದ್ಯಾರ್ಥಿಗಳಲ್ಲಿ ಕಂಡ ಜವಾಬ್ದಾರಿ, ಶಿಸ್ತು ಮತ್ತು ನಾಯಕತ್ವವು ನಿಜವಾಗಿಯೂ ಶ್ಲಾಘನೀಯ. ಕಾರ್ಯಕ್ರಮವು ನಾಡಗೀತೆ ರಾಷ್ಟ್ರಗೀತೆ ಯನ್ನು ಹೇಳುವುದರ ಮುಖಾಂತರ ಆರಂಭವಾಗಿ ವಿದ್ಯಾರ್ಥಿಗಳ ಭಾಷಣಗಳು, ಕನ್ನಡ ನಾಡನ್ನು ಕೊಂಡಾಡುವ ಗೀತೆಗಳು, ಹಾಗೂ ರಾಜ್ಯೋತ್ಸವದ ಕುರಿತು ...




Comments
Post a Comment