ಬದಲಾದ ನನ್ನ ವಿದ್ಯಾರ್ಥಿ 😍 ವಿದ್ಯಾರ್ಥಿಯ ಜೀವನವು ಸಂಪೂರ್ಣವಾಗಿ ರೂಪಗೊಳ್ಳಬೇಕು ಆದರೆ ಅತಿ ಅಮೂಲ್ಯವಾದವು ತಂದೆ-ತಾಯಿ ಮತ್ತು ಗುರುಗಳ ಹೇಗೆ ಒಬ್ಬ ಬೇಟೆಗಾರ ವಾಲ್ಮೀಕಿ ಮಹರ್ಷಿಯಾಗಿ ಬರೆದು ಜಗತ್ತ ಪ್ರಸಿದ್ದ ಆದರೂ ಕಾರಣ ಅವರ ಗುರುಗಳು ಆಡಿದ ಮಾತುಗಳು ಅವರ ಜೀವನವೇ ಬದಲಾಯಿತು.

  ನಾನು ದೀಪಾ ಕಿತ್ತೂರ ವಿದ್ಯಾಪೋಷಕ ಸಂಸ್ಥೆಯಲ್ಲಿ ಸಹ ಸರಿಯಾಗಿ ಕಾರ್ಯ ನಿರ್ವಹಿಸುತ್ತ ಇದ್ದೇನೆ ಮಕ್ಕಳಿಗೆ ಕಳಿಸುವುದು ಎಂದರೆ ನನಗೆ ಹಂಬಲ ಮಕ್ಕಳಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಬೇಕು ಎಂಬುದು ನನ್ನ ಆಸೆ. ಅವರು ತಮ್ಮ ಜೀವನವನ್ನು ಸುಂದರವಾಗಿ ರೂಪಿಸಿ ಒಳ್ಳೆಯ ವ್ಯಕ್ತಿ ಯಾಗಬೇಕೆಂದು ಮತ್ತು ಬಡತನದ ಸಲುವಾಗಿ ಶಿಕ್ಷಣವನ್ನು ನಿಲ್ಲಿಸಬಾರದು ಹಾಗೂ  ಶಿಕ್ಷಣದಿಂದ ದೂರವಿರಬಾರದೆಂದು ನಮ್ಮ ಸಂಸ್ಥೆಯ ಗುರಿಯಾಗಿದೆ.

      ನಾನು ಇಂದು ನನ್ನ ಜೀವನದಲ್ಲಿ ಆದ ಒಂದು ಅದ್ಭುತವಾದ ಘಟನೆಯನ್ನು ಹೇಳಲು ಬಯಸುತ್ತೇನೆ. ಧಾರವಾಡ ಜಿಲ್ಲೆ ಗ್ರಾಮದಲ್ಲಿ ನನಗೆ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿದಾಗ ಬಹಳ ಖುಷಿಯಾಯಿತು ಹಾಗೆ ಅದು ಆಗಸ್ಟ ತಿಂಗಳು ಮಳೆ ಯ ವಾತಾವರಣ ಶಾಲೆಯಲ್ಲಿ ಮಕ್ಕಳ ಸಂಖ್ಯೆಯೂ ಬಹಳ ಕಡಿಮೆ ಇತ್ತು.  ಶಿಕ್ಷಕಿಯಾಗಿ ಹೋದೆ ಅದು ನನ್ನ ಮೊದಲ ದಿನ ಹಳ್ಳಿಯ ವಾತಾವರಣ ಬಹಳ ಸುಂದರವಾಗಿತ್ತು ಮರಗಿಡ ಗಿಡಗಳಿಂದ ತುಂಬಿದ ತಂಪಾದ ವಾತಾವರಣ  ರಸ್ತೆ ಬದಿಯಲ್ಲಿರುವ ಶಾಲೆ, ಶಾಲೆಯ ಸುತ್ತ ದೇವಾಲಯದ ಗಂಟೆಯ ಶಬ್ದ.ಮಕ್ಕಳು ಮತ್ತು ಶಿಕ್ಷಕರನ್ನು ಬಹಳ ಸಂತೋಷದಿಂದ ಆಹ್ವಾನಿಸಿದರು. ನಾನು ಶಾಲೆ ಯ ಯಲ್ಲ ಸಿಬಂದಿಯೊಡನೆ ಸ್ವಲ್ಪ ಸಮಯ ವನ್ನು ಕಳೆ ದೇನು. ಅಂದು ಶಾಲೆ ಯಲ್ಲಿ ಮಕ್ಕಳ ಸಂಖ್ಯೆ ಬಹಳ ವಿರಳ ಕಾರಣ ಕೊರೋನಾ ರೋಗದ ಬಯ.. 

        ಸ್ವಲ್ಪ ಸಮಯದ ನಂತರ ಶಾಲೆ ಯೂ ಸಂಪೂರ್ಣ ವಾಗಿ ಪ್ರಾರಂಭ ವಾಯಿತು. ನಾನು 6 ಮತ್ತು 7ನೇ ತರಗತಿ ವಿದ್ಯರ್ಥಿಗಳಿಗೆ ಪಾಠ ವನ್ನೂ ಹೇಳಲು ಆರಭಿಸಿದೆ. ನಾನು ಬಹಳ 7ನೇ ತರಗತಿ ಸಮಯವನ್ನು ಕಳೆಯುತ್ತಿದೆ. ಹಾಗೆ ಶಾಲೆ ಯ ಎಲ್ಲ ಚಿಕ್ಕ ಚಿಕ್ಕ ಮಕ್ಕಳು ಸಹ ನಮಗೆ ಪಾಠ ತಾಗೊಳಿ  ಎಂದಾಗ ಆಗುವ ಖುಷಿಯೇ ಬೇರೆ. ಒಬ್ಬ ವಿದ್ಯಾರ್ಥಿನೀ ಅವಳು ಯಾವಾಗಲೂ ತರಗತಿಯಲ್ಲಿ ತುಂಬಾ ಮೌನದಿಂದ ಇರುತ್ತಿದ್ದಳು ಆದರೆ ತರಗತಿಯ ನಂತರ ಆಕೆ ಆಕೆಯ ಸ್ನೇಹಿತರ ಜೊತೆ ಜಗಳ ಆಡುವುದರಲ್ಲಿ ಎತ್ತಿದ ಕೈ ಮತ್ತು ಹುಡುಗರ ಜೊತೆ ಮಾತನಾಡುವಾಗ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಳು. ಎಲ್ಲ ತನ್ನ ಕಿಂತ ದೊಡ್ಡ ವಿದ್ಯಾರ್ಥಿಗಳು ಸಹ ಆಕೆಗೆ ಯಾವುದೇ ರೀತಿಯಿಂದ ಆಕೆಯನ್ನು ಒಳ್ಳೆಯ ಮಾತುಗಳಿಂದ ಆಡಿದ ದೀನವೆ ಇಲ್ಲ..

   ಒಂದು ದಿನ ತರಗತಿ ನಡೆಯುವಾಗ ನಾನೊಂದು ಪ್ರಶ್ನೆಯನ್ನು ಕೇಳಿದೆ ಆಗ ಎಲ್ಲ ವಿದ್ಯಾರ್ಥಿಗಳು ಆಸಕ್ತಿಯಿಂದ ಉತ್ತರಿಸಿದರು ಆಕೆ ಮಾತ್ರ ಯಾವುದೇ ಉತ್ತರವನ್ನು ನೀಡಲಿಲ್ಲ ನಾನು ಏಕೆಂದು ಕೇಳಿದಾಗ ನನಗೆ ತಿಳಿಯುತ್ತಿಲ್ಲ ನಾನು ಏನು ಮಾಡಲಿ ನಾನು ಆಕೆಗೆ ಹೇಳಿದೆ ಬಿಡುವಿನ ಸಮಯದಲ್ಲಿ ಬಂದು ನಿನ್ನ ಪ್ರಶ್ನೆಗಳನ್ನು ಕೇಳು ಎಂದು ನಾನು ಹೇಳಿದೆ ಆಕೆ ok ಟೀಚರ್ ಎಂದು ಹೇಳಿದಳು 

ಮತ್ತು ಆಕೆಯ ಶಾಲೆಯಲ್ಲಿ ಆಗುತ್ತೆ ಸ್ಪರ್ಧೆಗಳಲ್ಲಿ ಭಾಗವಹಿಸುವ ಆಸಕ್ತಿಯನ್ನು ತೋರಿಸುತಿರಲ್ಲಿಲ್ಲ. ಆಕೆ ಬಿಡುವಿನ ಸಮಯದಲ್ಲಿ ಬಂದಾಗ ಆಕೆಯನ್ನು ನಾನು ಬಹಳ ಪ್ರೀತಿಯಿಂದ ಮಾತನಾಡಿಸಿ ಆಕೆಗೆ ಒಳ್ಳೆಯ ಮಾರ್ಗಗಳನ್ನು ತಿಳಿಸಿದೆ. ಶಾಲೆಯ ಇತರ ಶಿಕ್ಷಕರು ಆಕೆಯನ್ನು ಬಹಳ ಕೆಟ್ಟದಾಗಿ ನೋಡುತ್ತಿದ್ದರು ಮತ್ತು ಆಕೆಯನ್ನು ಬೇರೆ ಬೇರೆ ಕೆಲಸದಲ್ಲಿ ತೊಡಗಿದ್ದರು ಅವರು ತಮ್ಮ ಕೊಠಡಿಯನ್ನು ಸ್ವಚ್ಛಗೊಳಿಸುವುದು ಶಾಲೆ ಮಾತನ್ನು ಸ್ವತಃ ಬಳಸಿಕೊಳ್ಳುತ್ತಿದ್ದರು.

ಆಕೆಯ ವರ್ತನೆಯಿಂದ ನಾನು ಒಂದು ದಿನ ಆಕೆಯ ಮನೆಗೆ ಹೋಗಿದ್ದೆ ಅಲ್ಲಿ ಅವರ ಮನೆಯಲ್ಲಿರುವ ವಾತಾವರಣ ಬೇರೆಯೆ ಆಗಿತು ಆಕೆಯ ಪೋಷಕರು ಬಹಳ ಪ್ರೀತಿಯಿಂದ ಮಾತನಾಡಿಸಿದ್ದರು. ಅವರು ತಮ್ಮ ಮಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಎಂದು ಹೇಳಿದರು.

ಒಂದು ದಿನ ಶಾಲೆಯಲ್ಲಿ ಚಿತ್ರಕಲೆ ಸ್ಪರ್ಧೆ ಏರ್ಪಡಿಸಿದ್ದು ಆಗ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿ ಆದರೆ ಆ ವಿದ್ಯಾರ್ಥಿನಿಯು ಭಾಗವಹಿಸಬೇಕೆಂದು ನಾನು ಕೇಳಿದಾಗ ಆಕೆ ನನ್ನ ಕಡೆ ಚಿತ್ರಗಳು ಬಿಡಿಸಲು ಬಣ್ಣಗಲೀಲ್ಲ  ಎಂದು ಆಕೆ ಹೇಳಿದಳು ನಾನು ವಾಗ ಅಂಕೆಯನ್ನು ಕರೆದುಕೊಂಡು ಹೋಗಿ ಚಿತ್ರಕಲೆ ಸ್ಪರ್ಧೆಯಲ್ಲಿ ಬಿಡಿಸಲು ಹೇಳಿದೆ ಯಾವಾಗ ಚಿತ್ರವನ್ನು ಸುಂದರವಾಗಿತ್ತು ನಾನು ಆಕೆಗೆ ಒಳ್ಳೆಯ ಮಾತುಗಳಿಂದ ಆಗುವ ಒಳ್ಳೆಯ ಕಾರ್ಯಗಳ ಬಗ್ಗೆ ಹೇಳಿದ ಮಾತುಗಳು ಎಲ್ಲರ ಮನಸ್ಸನ್ನು ಗೆಲ್ಲಬಹುದು ಹೇಗೆ ಯುವ ವಿದ್ಯಾರ್ಥಿನಿ ತನ್ನ ಗುರಿಯನ್ನು ಮುಟ್ಟಲು ತನ್ನಲ್ಲಿರುವ ಶಕ್ತಿಯ ಕಾರಣವೇ ಹಾಗೆ ಒಳ್ಳೆಯ ಮಾತುಗಳಿಂದ ನಾವು ಎಲ್ಲರೂ ಮನಸ್ಸನ್ನು ಬೆಳೆಯಬಹುದು ಹಾಗೂ ಎಲ್ಲರಿಗೂ ಒಬ್ಬ ಒಳ್ಳೆಯ ವ್ಯಕ್ತಿಯಾಗಿರಬಹುದು ಎಂದರು ಒಳ್ಳೆಯದು ಒಳ್ಳೆಯದು ಬಯಸುತ್ತಾರೆ ನಮ್ಮನ್ನು ಪ್ರೀತಿಸುತ್ತಾರೆ ಎಂದು ಹೇಳಿದೆ. ಆಗಾಕೆ ಆಯ್ತು ಟೀಚರ್. ಹೊಸ ವರ್ಷದ ಪ್ರಾರಂಭದ ಮೊದಲ ದಿನ ನಾನು ಕರೆದು ಪ್ರಾರಂಭದಿಂದ ಏನಾದರೂ ಗುರಿಯನ್ನು ಇಟ್ಟಿಕೊ ಒಂದು ಹೇಳಿದೆ. ಆಕೆ ಆಯ್ತು ಟೀಚರ್ ನಾನು ಇನ್ನು ಮುಂದೆ ಈ ವರ್ಷದಿಂದ ಒಳ್ಳೆಯ ಮಾತುಗಳನ್ನು ಮಾತುಗಳನ್ನು ಹೇಳುತ್ತೇನೆ ಹಾಗೆ ವರ್ಷದಿಂದ ನಾನು ಉತ್ತಮವಾಗಿ ನಡೆದುಕೊಳ್ಳುತ್ತೇನೆ ಗುರುಗಳಿಗೆ ಗೌರವದಿಂದ ಮಾತನಾಡುತ್ತೇನೆ. ಹಾಗೆ ನಾನು ನನ್ನ ತಂದೆ ತಾಯಿ ಜೊತೆ ಉತ್ತಮ ರೀತಿಯ ಇರುತ್ತೇನೆ ನನ್ನ ಸಹೋದರ ಸಹೋದರಿಯರ ಜೊತೆ ನಾವು ಉತ್ತಮವಾಗಿ ಮಾತನಾಡುತ್ತೇನೆ ಹಾಗೂ ನಾನು ನನ್ನ ಸಹಪಾಠಿಯೊಂದಿಗೆ ಒಳ್ಳೆಯ ರೀತಿಯಿಂದ ಮಾತನಾಡುತ್ತೇನೆ.. ಮಾತು ಒಳ್ಳೆಯ ನಡುವಳಿಕೆ ಇಂಥ ಇದ್ದರೆ ಎಲ್ಲರೂ ನನ್ನನ್ನು ಪ್ರೀತಿಸುತ್ತಾರೆ ಎಲ್ಲರೂ ಗೌರವ ನೀಡುತ್ತಾರೆ ಮೊದಲು ನಾನು ಸಹ ಪಾರ್ಟಿಯೊಂದಿಗೆ ಜಗಳವಾಡುತ್ತಿದ್ದರು ಮಾತನಾಡಿಸುತ್ತಿರಲಿಲ್ಲ . ನಾನು ನೀನು ಮುಂದೆ ಉತ್ತಮವಾಗಿ ನಡೆದುಕೊಂಡು ನಿಮಗೆ ಧನ್ಯವಾದಗಳು ಎಂದು ಹೇಳಿದಾಗ ಆಕೆ ಮಾತನ್ನು ಕೇಳಿ ನನಗೆ ತುಂಬಾ ಸಂತೋಷವಾಯಿತು. ಆಕೆ ಹೇಳಿದ ಮಾತು ಕೇವಲ ನನ್ನ ತೃಪ್ತಿಗಾಗಿ ಮಾತ್ರ ಅಲ್ಲ ಸಮಯ ಕಳೆದಂತೆ ಆ ಆಕೆಯ ಸಹಪಾಠಿಗಳು ಆಕೆಯಜೊತೆ ಉತ್ತಮವಾಗಿ ಮಾತನಾಡಲು ಪ್ರಾರಂಭಿಸಿದರು ಹಾಗೆಯೇ ಗುರುಗಳಿಗೆ ಗೌರವದಿಂದ ಮಾತನಾಡಿ ತನ್ನ ಸಹಪಾಠಿಗೆ ಉತ್ತಮ ದಿಂದ ಮಳೆ ಮಾತುಗಳನ್ನು ಆಡುತ್ತಿದ್ದರು ಹಾಗೆ ಗುರುಗಳಿಗೆ ಗೌರವವನ್ನು ನೀಡಲು ಪ್ರಾರಂಭಿಸಿದಳು. ಶಿಕ್ಷಕರು ಆಕೆಯಲ್ಲಿ ಉಂಟಾದ ಬದಲಾವಣೆಯನ್ನು ನೋಡಿ ಶಿಕ್ಷಕರು ಬೇರೆ ವಿದ್ಯಾರ್ಥಿಗಳಿಗೆ ಆಕೆಯನ್ನು ಉದಾಹರಣೆಯಾಗಿ ಹೇಳುತ್ತಿದ್ದರು ಆಕೆಯ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಲು ಪ್ರಾರಂಭಿಸಿದ್ದಾರೆ. ಆಕೆಯಲ್ಲಿ ಆದ ಬದಲಾವಣೆಯನ್ನು ನೋಡಿ ಎಲ್ಲ ಶಿಕ್ಷಕರು ಆಕೆಯನ್ನು ಉದಾಹರಣೆಯೊಂದಿಗೆ ಬೇರೆ ವಿದ್ಯಾರ್ಥಿಗಳ ಮುಂದೆ ಹೇಳುವುದನ್ನು ನಾನು ನೋಡಿದೆ ಆಕೆಯನ್ನು ಶಿಕ್ಷಕರು ಒಂದು ಉದಾಹರಣೆ ಮೂಲಕ ಎಲ್ಲರಿಗೂ ಹೇಳುತ್ತಿದ್ದಾರೆ ಇದರಿಂದ ನನಗೆ ಬಹಳ ಸಂತೋಷವಾಯಿತು. ಆಕೆಯ ಪೋಷಕರು ಸಹ ಆಕೆಯನ್ನು ಬಹಳ ಉತ್ತಮವಾಗಿ ನೋಡಿಕೊಳ್ಳುತ್ತಿದ್ದಾರೆ ನನಗೆ ಇನ್ನೊಂದು ವಿಷಯ ಏನೆಂದರೆ ಆಕೆ ಕೇವಲ ತನ್ನ ನಡುವಳಿಕೆಯಲ್ಲಿ ಸುಧಾರಿಸದಲ್ಲದೆ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದಾಳೆ ಮತ್ತು ಎಲ್ಲಾ ಚಟುವಟಿಕೆ ಸ್ಪರ್ಧೆಗಳಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ ಮತ್ತು ಆಕೆಯ ಸಹಪಾಠಿಗಳು ಎಲ್ಲರೂ ಆಕೆಯೊಂದಿಗೆ ಉತ್ತಮವಾಗಿ ಮಾತನಾಡುತ್ತಿದ್ದಾರೆ ಗೌರವದಿಂದ ಮಾತನಾಡುತ್ತಿದ್ದಾರೆ ಮತ್ತು ಆಕೆ ಎಲ್ಲರಿಗೂ ಗೌರವವನ್ನು ನೀಡುತ್ತಿದ್ದಾಳೆ.

ಈ ಒಂದು ಘಟನೆಯು ನನ್ನ ಜೀವನದ ಬಹಳ ಅಮೂಲ್ಯವಾದ ಘಟನೆಯಾಗಿದೆ. ಕೇವಲ ನನಗೆ ಅಷ್ಟೇ ಅಲ್ಲದೆ ಎಲ್ಲರಿಗೂ ಸಹ  ಆ ವಿದ್ಯಾರ್ಥಿನಿ ಒಳ್ಳೆಯ ನಡುವಳಿಕೆಯ ವಿದ್ಯಾರ್ಥಿನಿಯಾಗಿದ್ದಾಳೆ.

       ಈ ಘಟನೆಯು ನಿನ್ನ ಜೀವನದ ಒಂದು ಉತ್ತಮ ಘಟನೆಯಾಗಿದ್ದು ಎಲ್ಲರ ಮುಂದೆ ಹೇಳಿದರೆ ಸಂತಸವಾಗುತ್ತಿದೆ.


Comments