ಮಕ್ಕಳಿಗೆ ಚಟುವಟಿಕೆ ಮೂಲಕ ಪಾಠ ಬೇಗನೇ ಅರ್ಥ ವಾಗುತ್ತದೆ ಎಂಬುದಕ್ಕೆ ಮಳೆಬಿಲ್ಲು ಕಾರ್ಯಕ್ರಮ ಸಾಕ್ಷಿ ನನ್ನ ವಿದ್ಯಾರ್ಥಿಗಳು ಬಹಳ ಆಸಕ್ತಿಯಿಎಂದ ಭಾಗವಹಿಸಿದ್ದರು ಹಾಗೂ ನಮ್ಮ ಸಂಸ್ಕೃತಿಯ ಬಗ್ಗೆ ಅರಿವನ್ನು ಮೂಡಿಸಲು ವಿದ್ಯಾರ್ಥಿಗಳು ಅನೇಕ ರೀತಿಯ ವೇಷಭೂಷಣವನ್ನು ಹಾಕಿಕೊಂಡು ಬಂದಿದ್ದರು ಒನಕೆ ಓಬವ್ವ ಕಿತ್ತೂರಾಣಿ ಚೆನ್ನಮ್ಮ ಅಕ್ಕಮಹಾದೇವಿ ಹೀಗೆ ವಿವಿಧ ರೀತಿಯ ವೇಷಭೂಷಣವನ್ನು ಹಾಕಿ ವಿದ್ಯಾರ್ಥಿಗಳು ಬಹಳ ಸಂತೋಷದಿಂದ ಸ್ವತಂತ್ರ ಹೋರಾಟಗಾರರ ಬಗ್ಗೆ ಹೇಳಿದರು ಅಡುಗೆಮನೆ ಹಲವಾರು ರೀತಿಯ ಅಡುಗೆಗಳನ್ನು ಮಾಡಿಕೊಂಡು ಬಂದು ಹೇಗೆ ನಮಗೆ ಆಹಾರ ಅವಶ್ಯಕ ಎಂದು ಎಲ್ಲರೂ ಮುಂದೆ ತಿಳಿಸಿದರು.
GHPS Mangalagatti ನಮ್ಮ ಶಾಲೆಯ ಮಕ್ಕಳ ಸಿಹಿ ಸಾಧನೆ GHPS Lokur ನಲ್ಲಿ ಈ ಬಾರಿ ಕ್ಲಸ್ಟರ್ ಲೆವೆಲ್ ಪ್ರತಿಭಾ ಕಾರಂಜಿಯನ್ನು ಹಬ್ಬದ ಸಂಭ್ರಮದಲ್ಲಿ ನಡೆಸಲಾಯಿತು. ಹಲವಾರು ಶಾಲೆಗಳ ಮಕ್ಕಳು ಒಂದೇ ವೇದಿಕೆಯಲ್ಲಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು. ನಮ್ಮ ಶಾಲೆಯ ಮಕ್ಕಳು ಉತ್ಸಾಹದಿಂದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು ಹಾಡು, ನೃತ್ಯ, ಭಜನೆ, ಚಿತ್ರಕಲೆ, ಕಥೆ ಹೇಳುವಿಕೆ ಮತ್ತು ಇನ್ನಷ್ಟು. ಮಕ್ಕಳು ವೇದಿಕೆಯ ಮೇಲೆ ಮಿಂಚಿದ ಕ್ಷಣಗಳು ಎಲ್ಲರಿಗೂ ಹೆಮ್ಮೆ ತಂದವು. ಸ್ಪರ್ಧೆಗಳ ಅಂತ್ಯದಲ್ಲಿ ನಮ್ಮ ಶಾಲೆಯ ಮಕ್ಕಳು ಹಲವಾರು ವಿಭಾಗಗಳಲ್ಲಿ ವಿಜಯ ಸಾಧಿಸಿ ವಿಶೇಷ ಬಹುಮಾನಗಳನ್ನು ಪಡೆದರು. ಮಕ್ಕಳು ಬಹುಮಾನ ಸ್ವೀಕರಿಸಿದಾಗ ಅವರ ಮುಖದಲ್ಲಿ ಹೊಳೆದ ಮುದ್ದಾದ ನಗು ಎಲ್ಲರ ಹೃದಯ ಗೆದ್ದಿತು. thank you

Comments
Post a Comment