ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವರಹುಬ್ಬಳ್ಳಿ “ಅರ್ಥಪೂರ್ಣ ತಾಯಂದಿರ ಸಭೆ" ದೇವರಹುಬ್ಬಳ್ಳಿ 26:2025-26 ನೇ ಸಾಲಿನ ಮೊದಲ ತಾಯಂದಿರ / ಪಾಲಕರ / ಪೋಷಕರ ಸಭೆಯನ್ನು ದಿನಾಂಕ :26-07-2025 ರಂದು ಶನಿವಾರ ಬೆಳಿಗ್ಗೆ 11 ಗಂಟೆಗೆ ಧಾರವಾಡ ತಾಲೂಕಿನ ದೇವರಹುಬ್ಬಳ್ಳಿಯ ಸ . ಹಿ . ಪ್ರಾ . ಶಾಲಾ ಆವರಣದಲ್ಲಿ ಆಯೋಜಿಸಲಾಗಿತ್ತು . ಕರ್ನಾಟಕ ಸರ್ಕಾರ , ಶಾಲಾ ಶಿಕ್ಷಣ ಇಲಾಖೆ , ಕ್ಷೇತ್ರ ಶಿಕ್ಷಣಾಧಿಕಾರಿಗಳು , ಕ್ಷೇತ್ರ ಸಂಪನ್ಮೂಲ ಕೇಂದ್ರ ಧಾರವಾಡ ಇವರ ಆದೇಶದನ್ವಯ ಹಮ್ಮಿಕೊಂಡಿದ್ದ ಶಾಲಾ ಮಕ್ಕಳ ತಾಯಂದಿರ , ಪಾಲಕರ , ಪೋಷಕರ ಸಬಲೀಕರಣವು ಇಲಾಖೆಯ ವಿದ್ಯಾದೀಪ ಯೋಜನೆಯಡಿ ಶಾಲೆಯ ಭೌತಿಕ ಸೌಲಭ್ಯಗಳ ಕೊರತೆ , ಶೈಕ್ಷಣಿಕ ಗುಣಮಟ್ಟ , ವಿದ್ಯಾಂಜಲಿ ಪೋರ್ಟಲ್ ಅಡಿಯಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಮಾಡಬಹುದಾದ ಮಹತ್ಕಾರ್ಯಗಳ ಬಗ್ಗೆ ಶತಮಾನ ಕಂಡ ಶಾಲಾಭಿವೃದ್ಧಿಗಾಗಿ ಶಾಲೆಯ ಪ್ರಧಾನ ಗುರುಗಳಾದ ಶ್ರೀ ಸುರೇಶ ಗೋವಿಂದರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಶಾಲೆಯ ಅಭಿವೃದ್ಧಿಗೆ ಹಾಗೂ ಉನ್ನತಿಗೆ ಮನವಿ ಮಾಡಿದರು . ...