GHPS Mangalagatti
ದಿನಾಂಕ 7 - 7- 2025 ರಂದು GHPS ಮಂಗಳಗಟ್ಟಿ ಶಾಲೆಯಲ್ಲಿ 2025 -26 ನೇ ಶೈಕ್ಷಣಿಕ ಸಾಲಿನ ಮಕ್ಕಳ ಶಾಲಾ ಸಂಸತ್ ಚುನಾವಣೆವು ವಿಜೃಂಭಣೆಯಿಂದ ನೆರವೇರಿತು. ಈ ವರ್ಷದ ಚುನಾವಣೆಯನ್ನು ಪೂರ್ಣವಾಗಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಆಯೋಜಿಸಲಾಯಿತು. ಪ್ರಾಥಮಿಕ ಹಂತದಲ್ಲಿ ಅಭ್ಯರ್ಥಿಗಳಿಂದ ನಾಮಪತ್ರಗಳನ್ನು ಆಹ್ವಾನಿಸಲಾಯಿತು. ನಂತರ ಪ್ರಚಾರ ಕಾರ್ಯ ನಡೆಯಿತು. ಮಕ್ಕಳು ತಮ್ಮ ತಮ್ಮ ಅಭಿಪ್ರಾಯಗಳನ್ನು ಶ್ರೇಣಿಗಳಲ್ಲಿ ಹಂಚಿಕೊಂಡು ಮತದಾರರ ಮನ ಗೆಲ್ಲುವ ಪ್ರಯತ್ನ ಮಾಡಿದರು.
ಚುನಾವಣಾ ದಿನದಂದು, ಶಾಲೆಯಲ್ಲಿ ಮತಚಲಾವಣೆ ಪ್ರಕ್ರಿಯೆ ಬಹಳ ಜವಾಬ್ದಾರಿಯಿಂದ ನಡೆಯಿತು. ಶಿಕ್ಷಕರ ಮಾರ್ಗದರ್ಶನದಲ್ಲಿ ಮಕ್ಕಳೇ ಮತದಾರರಾಗಿ, ಮತದಾನಾಧಿಕಾರಿಯಾಗಿ, ಮತಪೆಟ್ಟಿಗೆ ನಿರ್ವಹಣಾಧಿಕಾರಿಯಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದರು. ಈ ಮೂಲಕ ಮಕ್ಕಳಲ್ಲಿ ಜವಾಬ್ದಾರಿ, ಶಿಸ್ತು, ಪ್ರಜಾಪ್ರಭುತ್ವದ ಮೌಲ್ಯಗಳ ಅರಿವು ಮೂಡಿತು.ಚುನಾವಣಾ ಫಲಿತಾಂಶದ ನಂತರ ಆಯ್ಕೆಯಾದ ಶಾಲಾ ಸಂಸತ್ ಸದಸ್ಯರಿಗೆ ಪ್ರಮಾಣ ವಚನ ಕಾರ್ಯಕ್ರಮವನ್ನೂ ಏರ್ಪಡಿಸಲಾಯಿತು. ಹೊಸವಾಗಿ ಆಯ್ಕೆಯಾದ ಪ್ರಧಾನ ಮತ್ತು ಇತರ ಸಚಿವರು ತಮ್ಮ ಕರ್ತವ್ಯಗಳನ್ನು ನಿಭಾಯಿಸಲು ಸಜ್ಜಾಗಿ ಕಾರ್ಯ ನಿರ್ವಹಣೆಗಾಗಿ ಪ್ರತಿಜ್ಞೆ ಸ್ವೀಕರಿಸಿದರು.
ಧನ್ಯವಾದಗಳು
Comments
Post a Comment