ನನ್ನ ಅನುಭವ
GHPS MANGALAGATTI
ನಾನು ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗಾಗಿ ವಿಶೇಷ ಕಳಕಳಿಯಿಂದ ಕೆಲಸ ಮಾಡುತ್ತಿದ್ದೇನೆ. ಈ ಮಕ್ಕಳು ಗಣಿತವನ್ನು ಅರ್ಥಮಾಡಿಕೊಳ್ಳುವುದು ಸುಲವಾಗಿ ಅವರಿಗೆ ಉತ್ತೇಜನೆ ನೀಡುವ ಹಲವು ಕ್ರಮಗಳನ್ನು ಅನುಸರಿಸಿದ್ದೇನೆ.ಅವರಲ್ಲಿ ಶಿಸ್ತು, ಸಹಕಾರ ಮತ್ತು ದೈನಂದಿನ ಅಭ್ಯಾಸವನ್ನು ಬೆಳೆಸಲು, ನಾನು ವಿದ್ಯಾರ್ಥಿಗಳನ್ನು ಐದು ಗುಂಪುಗಳಾಗಿ ಹಂಚಿದೆ. ಪ್ರತಿಯೊಂದು ಗುಂಪಿಗೆ ಒಬ್ಬ ಲೀಡರ್‌ನ್ನು ನೇಮಕ ಮಾಡಲಾಗಿದೆ. ಈ ನಾಯಕರು ಪ್ರತಿದಿನವೂ ತಮ್ಮ ಗುಂಪಿನ ಸದಸ್ಯರಿಗೆ "ನಿತ್ಯ ಲೆಕ್ಕಗಳು" ಮಾಡುವ ಪ್ರೇರಣೆಯನ್ನು ನೀಡುತ್ತಿದ್ದಾರೆ.ನಾನು ಲೀಡರ್‌ಗಳಿಗೆ ಪ್ರತ್ಯೇಕವಾಗಿ ಬೋಧನೆ ನೀಡಿ, ಅವರು ತಮ್ಮ ಗುಂಪಿನ ಮಕ್ಕಳಿಗೆ ಸಹಾಯ ಮಾಡುವಂತೆ ಪ್ರೋತ್ಸಾಹಿಸುತ್ತಿದ್ದೇನೆ. ಇದರ ಪರಿಣಾಮವಾಗಿ, ಈಗಾಗಲೇ ಮಕ್ಕಳಲ್ಲಿ ಲೆಕ್ಕ ಮಾಡುವ ಹುಮ್ಮಸ್ಸು ಕಂಡುಬರುತ್ತಿದೆ. ಇತ್ತೀಚೆಗೆ ಅವರು ಸ್ವಲ್ಪವಾದರೂ ನಿತ್ಯ ಲೆಕ್ಕಗಳನ್ನು ತಾವೇ ಮಾಡಿಕೊಂಡು ಬರುತ್ತಿರುವುದು ನನಗೆ ತುಂಬಾ ಸಂತೋಷ ನೀಡುವ ವಿಚಾರವಾಗಿದೆ.
ಧನ್ಯವಾದಗಳು
Comments
Post a Comment