ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವರಹುಬ್ಬಳ್ಳಿ “ಅರ್ಥಪೂರ್ಣ ತಾಯಂದಿರ ಸಭೆ"

     ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವರಹುಬ್ಬಳ್ಳಿ

                         “ಅರ್ಥಪೂರ್ಣ ತಾಯಂದಿರ ಸಭೆ"



            ದೇವರಹುಬ್ಬಳ್ಳಿ26:2025-26 ನೇ ಸಾಲಿನ ಮೊದಲ ತಾಯಂದಿರ/ಪಾಲಕರ/ಪೋಷಕರ ಸಭೆಯನ್ನು ದಿನಾಂಕ:26-07-2025 ರಂದು ಶನಿವಾರ ಬೆಳಿಗ್ಗೆ11ಗಂಟೆಗೆ ಧಾರವಾಡ ತಾಲೂಕಿನ ದೇವರಹುಬ್ಬಳ್ಳಿಯ .ಹಿ.ಪ್ರಾ. ಶಾಲಾ ಆವರಣದಲ್ಲಿ ಆಯೋಜಿಸಲಾಗಿತ್ತು.

ಕರ್ನಾಟಕ ಸರ್ಕಾರ,ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ಕೇಂದ್ರ ಧಾರವಾಡ ಇವರ ಆದೇಶದನ್ವಯ ಹಮ್ಮಿಕೊಂಡಿದ್ದ ಶಾಲಾ ಮಕ್ಕಳ ತಾಯಂದಿರ,ಪಾಲಕರ,ಪೋಷಕರ  ಸಬಲೀಕರಣವು ಇಲಾಖೆಯ ವಿದ್ಯಾದೀಪ ಯೋಜನೆಯಡಿ ಶಾಲೆಯ ಭೌತಿಕ ಸೌಲಭ್ಯಗಳ ಕೊರತೆ,ಶೈಕ್ಷಣಿಕ ಗುಣಮಟ್ಟ, ವಿದ್ಯಾಂಜಲಿ ಪೋರ್ಟಲ್ ಅಡಿಯಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಮಾಡಬಹುದಾದ ಮಹತ್ಕಾರ್ಯಗಳ ಬಗ್ಗೆ ಶತಮಾನ ಕಂಡ ಶಾಲಾಭಿವೃದ್ಧಿಗಾಗಿ ಶಾಲೆಯ ಪ್ರಧಾನ ಗುರುಗಳಾದ ಶ್ರೀ ಸುರೇಶ ಗೋವಿಂದರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಶಾಲೆಯ ಅಭಿವೃದ್ಧಿಗೆ ಹಾಗೂ ಉನ್ನತಿಗೆ ಮನವಿ ಮಾಡಿದರು.

        ಕಾರ್ಯಕ್ರಮದದಲ್ಲಿ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಶ್ರೀ ಸಂಗಪ್ಪ ಬಳಿಗೇರ,ಶ್ರೀ ನೂರ ಅಹ್ಮದ ಮುಲ್ಲಾ,ಶ್ರೀಮತಿ ನೀಲಮ್ಮ ತಳವಾರ ಮುಂತಾದವರು ಭಾಗವಹಿಸಿದ್ದರು.ಪಾಲಕ ಪ್ರತಿನಿಧಿಗಳು ತಾಯಂದಿರು ಆದ ಶ್ರೀಮತಿ ಅನ್ನಪೂರ್ಣ ಸಂಗಪ್ಪ ಬಳಿಗೇರ,ಶ್ರೀ ಮಂಜುನಾಥ ಬಳಿಗೇರ ಮುಂತಾದವರು ಶಿಕ್ಷಕರ ಸಾರ್ಥಕತೆಗೆ ಪಾಲಕರು, ಪೋಷಕರು,ತಾಯಂದಿರು ತಮ್ಮ ಸಂಪೂರ್ಣ,ಸಹಾಯ ಸಹಕಾರ ನೀಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

     ನೂರಾರು ತಾಯಂದಿರು, ಪಾಲಕರು,ಪೋಷಕರು ಭಾಗವಹಿದ್ದ ಸಭೆಯು ಅರ್ಥಪೂರ್ಣವಾಗಿ ನಡೆಯಿತು.ವಿದ್ಯಾಪೋಷಕ ಸಂಸ್ಥೆಯಿಂದ ಶ್ರೀಮತಿ ವೀಣಾ ಕುರನಕೊಪ್ಪ, ದೇಶಪಾಂಡೆ ಫೌಂಡೇಶನ್ನಿನಿಂದ ಶ್ರೀ ಶರಣಪ್ಪ ಸೂಗೂರ,ಸ್ಕೋಪ್ ಸಂಸ್ಥೆಯ ಶ್ರೀಮತಿ ಬಾಚಗುಂಡಿ ಹಾಗೂ ಶ್ರೀಮತಿ ಅಣ್ಣಿಗೇರಿ ಕೂಡಾ ಭಾಗವಹಿಸಿ ಶಾಲೆ ಮತ್ತು ಮಕ್ಕಳ ಬಗೆಗೆ ಉತ್ತಮ ಅಭಿಪ್ರಾಯ ಹಂಚಿಕೊಂಡರು.ದೈಹಿಕ ಶಿಕ್ಷಕಿ ಶ್ರೀಮತಿ ಎನ್ ತಳ್ಳಳ್ಳಿ ಕ್ರೀಡಾ ಚಟುವಟಿಕೆಗಳ ಕುರಿತು ಮಾತನಾಡಿದರು.ಸಭೆಯಲ್ಲಿ ಶಾಲಾ ಶಿಕ್ಷಕ ಬಳಗ,ಮುದ್ದು ಮಕ್ಕಳು ಕೂಡಾ ಭಾಗವಹಿದ್ದರು.

ವೈಷ್ಣವಿ ಮತ್ತು ಯಕ್ಷಾ ಪ್ರಾರ್ಥಿಸಿದರು.ಶ್ರೀಮತಿ ಜಯಶ್ರೀ ಅರೇಕುರಹಟ್ಟಿ ಸ್ವಾಗತಿಸಿದರು. ಶ್ರೀಮತಿ ಭಾರತಿ ಸರನೋಬತ್ತ ವಂದಿಸಿದರು.



  





Comments

Popular posts from this blog

Vidya Poshak - Yuva Internship 2024 - Application form

Frequently Asked Questions about Internship 2023

ಇತಿಹಾಸದ ಹನುಮ ದೇವಸ್ಥಾನ