ನನ್ನ ವಿದ್ಯಾರ್ಥಿಗಳೊಂದಿಗೆ ಹೊಸ ವರ್ಷದ ಸಂಭ್ರಮ
GHPS ದೇವರಹುಬ್ಬಳ್ಳಿ ಶಾಲೆಯಲ್ಲಿ ನಾವು ವಿದ್ಯಾರ್ಥಿಗಳೊಂದಿಗೆ ಸಂತೋಷದಿಂದ ಹೊಸ ವರ್ಷವನ್ನು ಆಚರಿಸಿದೆವು. ಪ್ರಾರ್ಥನಾ ಸಮಯದಲ್ಲಿ ನಮ್ಮ HM ಸರ್ ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಲ್ಲಿ ಶಿಸ್ತು, ಓದುವ ಅಭ್ಯಾಸ, ಮತ್ತು ಹೊಸ – ಹೊಸ ವಿಷಯಗಳನ್ನು ಕಲಿಯುವ ಮನೋಭಾವ ಬೆಳೆಸಿಕೊಳ್ಳುವಂತೆ ಮನವಿಯುತವಾಗಿ ಜಾಗೃತಿ ನೀಡಿದರು.
ವಿದ್ಯಾರ್ಥಿಗಳು ಪರಸ್ಪರ ಹೊಸ ವರ್ಷದ ಶುಭಾಶಯಗಳನ್ನು ಹಂಚಿಕೊಂಡರು. ಅವರು ಗುರುಗಳಿಗೆ ತಮ್ಮ ಕ್ಯೂಟ್ ಸಂದೇಶಗಳು ಮತ್ತು ಚಾಕೊಲೇಟ್‌ಗಳನ್ನು ನೀಡಿದ್ದು ಬಹಳ ಮನಮೋಹಕವಾಗಿತ್ತು. ನಂತರ ಮಕ್ಕಳು ಕುಣಿದು, ಆಟಗಳನ್ನು ಆಡುತ್ತಾ ತುಂಬಾ ಮೋಜಿನಿಂದ ಸಮಯ ಕಳೆಯಿದರು.
ಈ ಹೊಸ ವರ್ಷದ ಆಚರಣೆ ವಿದ್ಯಾರ್ಥಿಗಳಿಗೆ ಸಂತೋಷ, ಪ್ರೇರಣೆ ಮತ್ತು ಹೊಸ ಉತ್ಸಾಹವನ್ನು ತುಂಬಿತು.
Comments
Post a Comment