ಗಣಿತವು ಕಬ್ಬಿಣದ ಕಡಲೆಯಲ್ಲ; ಅದು ಕಬ್ಬಿನ ರಸದಂತಿದೆ. ಏಕೆಂದರೆ ಗಣಿತವನ್ನು ಭಯದಿಂದಲ್ಲ, ಆನಂದದಿಂದ—ಆಟಗಳು ಹಾಗೂ ವಿವಿಧ ಚಟುವಟಿಕೆಗಳ ಮೂಲಕ ಕಲಿಯಬಹುದಾದ ಏಕೈಕ ವಿಷಯವಾಗಿದೆ.
ನಮ್ಮ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿಗಳ ಗಣಿತ ಪಠ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು. ಇದರ ಮೌಲ್ಯಮಾಪನ ಹಾಗೂ ಪಾಠಗಳ ಪುನರವಲೋಕನಕ್ಕಾಗಿ ಗಣಿತ ರಸಪ್ರಶ್ನೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು.
ಈ ಸ್ಪರ್ಧೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ಸಾಹ ಮತ್ತು ಹರುಷದಿಂದ ಭಾಗವಹಿಸಿ, ವಿವಿಧ ಗಣಿತ ಪ್ರಶ್ನೆಗಳಿಗೆ ಚುರುಕಾಗಿ ಉತ್ತರಿಸಿದರು. ರಸಪ್ರಶ್ನೆಯ ಮೂಲಕ ವಿದ್ಯಾರ್ಥಿಗಳು ಕಲಿತ ಎಲ್ಲಾ ಪಾಠಗಳನ್ನು ಪುನರ್ಬಲಪಡಿಸಿಕೊಂಡರು ಹಾಗೂ ತಮ್ಮ ಲಾಜಿಕ್ ಯೋಚನೆ, ವೇಗ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡರು.
ಈ ಚಟುವಟಿಕೆ ವಿದ್ಯಾರ್ಥಿಗಳಲ್ಲಿ ಗಣಿತದ ಬಗ್ಗೆ ಇರುವ ಭಯವನ್ನು ದೂರ ಮಾಡಿ, ವಿಷಯದ ಮೇಲಿನ ಆಸಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಯಿತು. ಅಂತಿಮವಾಗಿ ಈ ಗಣಿತ ರಸಪ್ರಶ್ನೆ ಸ್ಪರ್ಧೆ ಅತ್ಯಂತ ಯಶಸ್ವಿಯಾಗಿ ನೆರವೇರಿತು.


Comments
Post a Comment