GHPS MANGALAGATTI ನಮ್ಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ* 🤾⛹️🫶🥰 ನಮ್ಮ ಶಾಲೆಯಲ್ಲಿ ಈ ವರ್ಷದ ಮಕ್ಕಳ ದಿನಾಚರಣೆ ಸಂತೋಷದಿಂದ ತುಂಬು ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆ ವಿದ್ಯಾರ್ಥಿಗಳು ಬಣ್ಣಬಣ್ಣದ ಉಡುಪಿನಲ್ಲಿ ಶಾಲೆಗೆ ಆಗಮಿಸಿ, ಕಾರ್ಯಕ್ರಮಕ್ಕೆ ಹೊಸ ಹೊಳಪು ತಂದರು. ಪ್ರಾರ್ಥನೆ ನಂತರ ಮುಖ್ಯಾಧ್ಯಾಪಕರವರು ಮಕ್ಕಳ ದಿನದ ಮಹತ್ವ ಹಾಗೂ ಮಕ್ಕಳ ಭವಿಷ್ಯದ ಬಗ್ಗೆ ಪ್ರೇರಣಾದಾಯಕ ಸಂದೇಶ ನೀಡಿದರು. ಈ ಕಾರ್ಯಕ್ರಮದ ವಿಶೇಷ ಆಕರ್ಷಣೆ ಎಂದರೆ ಶಿಕ್ಷಕರರಿಂದ ನಡೆಸಲಾದ ಮನರಂಜನಾ ಆಟಗಳು. ವಿದ್ಯಾರ್ಥಿಗಳು ತುಂಬಾ ಖುಷಿಯಿಂದ ವಿವಿಧ ಆಟಗಳಲ್ಲಿ ಭಾಗವಹಿಸಿದರು.ನಾವು ಮಕ್ಕಳಿಗೆ ಕೆಳಗಿನ funny games ಗಳನ್ನು ನಡೆಸಿದೆವು. ಬಲೂನ್ ಬ್ಯಾಲೆನ್ಸ್, ಬಕೇಟ್‌ನಲ್ಲಿ ಚೆಂಡು ಎಸೆಯುವ ಆಟ, ಪುಸ್ತಕ ಬ್ಯಾಲೆನ್ಸ್, ಜಂಪಿಂಗ್ ಆಟ ಮುಂತಾದವುಗಳನ್ನು ಆಟಗಳನ್ನು ಆಡಿದರು. ಈ ಎಲ್ಲ ಆಟಗಳಲ್ಲಿ ಮಕ್ಕಳು ತುಂಬಾ ಉತ್ಸಾಹದಿಂದ ಭಾಗವಹಿಸಿ, ನಗುತ್ತಾ, ಚಪ್ಪಾಳೆ ಹೊಡೆಯುತ್ತಾ ಸಂತೋಷದಿಂದ ದಿನವನ್ನು ಕಳೆಯುವಂತಾಯಿತು. ಕಾರ್ಯಕ್ರಮದ ಕೊನೆಯಲ್ಲಿ ನಾವು ವಿಶೇಷವಾಗಿ ಕೇಕ್ ಕಟ್ ಮಾಡಿ ಮಕ್ಕಳಿಗೆ ಸಿಹಿತಿಂಡಿ, ಚಾಕೊಲೇಟ್ ಹಾಗೂ ಹಣ್ಣು ವಿತರಣೆ ಮಾಡಿದೆವು. ಮಕ್ಕಳು ಕೇಕ್ ಕಟಿಂಗ್ ನೋಡಿದಾಗ ತುಂಬಾ ಖುಷಿಪಟ್ಟರು. ಶಿಕ್ಷಕರೂ ಮಕ್ಕಳ ಜೊತೆಗೆ ಸೇರಿ ಈ ಕ್ಷಣವನ್ನು ಇನ್ನಷ್ಟು ಹರ್ಷೋದ್ಗಾರದಿಂದ ಆಚರಿಸಿದರು. ದಿನ ಶಾಲೆ ಸಂತೋಷದ ನಗೆ, ಮಕ್ಕಳ ಮೋಜುಮಸ್ತಿ ಮತ್ತು ಆಟಗ...
Comments
Post a Comment