ನಮ್ಮ ಶಾಲೆಯ ಮುದ್ದು ಮಕ್ಕಳ ಕಲಿಕಾ ಹಬ್ಬ 💝👫
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಗಳಗಟ್ಟಿ
ನಮ್ಮ ಶಾಲೆಯ ಮುದ್ದು ಮಕ್ಕಳ ಕಲಿಕಾ ಹಬ್ಬವು ಮಕ್ಕಳಲ್ಲಿ ಹೊಸ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸುವ ಒಂದು ಅದ್ಭುತ ಅವಕಾಶವಾಯಿತು. ಈ ಹಬ್ಬದಲ್ಲಿ ವಿದ್ಯಾರ್ಥಿಗಳು ತಮ್ಮ ಕಲಿತ ವಿಷಯಗಳನ್ನು ಪ್ರದರ್ಶಿಸಲು ಅವಕಾಶ ಪಡೆದರು.
ಹಬ್ಬದ ಆರಂಭದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ವಿದ್ಯಾರ್ಥಿಗಳು ಹಾಡು, ನೃತ್ಯ, ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಿದರು. ಆನಂತರ, ಪಠ್ಯ ವಿಷಯಗಳೊಂದಿಗೆ ಸಂಬಂಧಿಸಿದ ಏಳು ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದರು, ಇದರ ವಿಶೇಷತೆ ಎಂದರೆ, ಮಕ್ಕಳ ತಯಾರಾತಿ. ತಾವು ಕಲಿತ ಗಣಿತದ ಸಂಕಲ್ಪಗಳನ್ನು ಪರಿಕರಗಳ ಮೂಲಕ ವಿವರಿಸಿದರು, ವಿಜ್ಞಾನ ಪರಿಕಲ್ಪನೆಗಳನ್ನು ಸೃಜನಶೀಲ ಪ್ರಯೋಗಗಳ ಮೂಲಕ ತೋರಿಸಿದರು.ಕೆಲವರು ತಾವು ಓದಿದ ಕಥೆಗಳನ್ನು ಚಿತ್ರಗಳ ಮೂಲಕ ವಿವರಿಸಿದರು.ಶಿಕ್ಷಕರು ಮತ್ತು ಪೋಷಕರು ಈ ಹಬ್ಬದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಮಕ್ಕಳ ಕಲಿಕೆಯನ್ನು ಉತ್ತೇಜಿಸುವಂತಹ ಬಹುಮಾನಗಳು ನೀಡಲಾಯಿತು. ಈ ಕಲಿಕಾ ಹಬ್ಬದ ಮೂಲಕ ಮಕ್ಕಳಲ್ಲಿ ಹೊಸ ಅರಿವು ಮೂಡಿತು. ಅವರು ಕಲಿಕೆಯ ಸಂತೋಷದಿಂದ ಅನುಭವಿಸಿದರು. ಈ ರೀತಿಯ ಹಬ್ಬಗಳು ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ಸಹಾಯಕರವಾಗಬಹುದು.
Comments
Post a Comment