ಬೀಜಗಣಿತದ ಚಟುವಟಿಕೆ .....
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕನವಿ ಹೊನ್ನಾಪುರ
ಬೀಜಗಣಿತದ ಚಟುವಟಿಕೆ
ನಮ್ಮ ಶಾಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನವಿ ಹೊನ್ನಾಪುರದಲ್ಲಿ 6ನೇ ತರಗತಿಯ ಮಕ್ಕಳಿಗೆ ಬೀಜಗಣಿತ ಪಾಠವನ್ನು ಹೇಳುವಾಗ ಅವರಿಗೆ ಮೊದಲು ಅಂಕಗಣಿತ ರೇಖಾಗಣಿತ ಮತ್ತು ಬೀಜಗಣಿತ ಅರ್ಥಗಳನ್ನು ಹೇಳುತ್ತಾ ಬೀಜಗಣಿತವನ್ನು ತಿಳಿಸಲು ಮಕ್ಕಳಿಗೆ ಸಣ್ಣ ಚಟುವಟಿಕೆಯನ್ನು ಮಾಡಿಸಲಾಯಿತು ಏಕೆಂದರೆ ಬೀಜಗಣಿತವನ್ನು ನಾವು ಹೇಗೆ ಲೆಕ್ಕ ಮಾಡಬಹುದು ಮತ್ತು ಕೋಷ್ಟಕವನ್ನು ಹೇಗೆ ತಯಾರಿಸಬಹುದು ಮತ್ತು ಸೂತ್ರಗಳನ್ನು ಹೇಗೆ ವಿನ್ಯಾಸ ಮಾಡಬಹುದೆಂದು ಒಂದು ಸಣ್ಣ ಚಟುವಟಿಕೆ ಮುಖಾಂತರ ಮಕ್ಕಳಿಗೆ ತಿಳಿಸಿಕೊಡಲಾಯಿತು ಇದರಿಂದ ಮಕ್ಕಳು ಬೀಜಗಣಿತವನ್ನು ಸಲೀಸಾಗಿ ತಿಳಿದುಕೊಂಡರು ಇದು ನನಗೆ ತುಂಬಾ ಸಂತೋಷವನ್ನು ನೀಡಿತು ಮಕ್ಕಳು ಸಹ ತುಂಬಾ ಖುಷಿಯಿಂದ ಬೀಜಗಣಿತದ ಲೆಕ್ಕಗಳನ್ನು ಮಾಡತೊಡಗಿದರು..
ಧನ್ಯವಾದಗಳು...
Comments
Post a Comment