GHPS Mangalagatti
ನಾನು 5ನೇ ತರಗತಿಗೆ ಪಾಠ ಮಾಡುತ್ತಿರುವಾಗ ಮಕ್ಕಳ ಕಲಿಕೆ ಹಾಗೂ ಪರಸ್ಪರ ಸಹಕಾರವನ್ನು ಹೆಚ್ಚಿಸುವ ಉದ್ದೇಶದಿಂದ ಸೀಟಿಂಗ್ ವ್ಯವಸ್ಥೆಯಲ್ಲಿ ಒಂದು ಸಣ್ಣ ಬದಲಾವಣೆ ಮಾಡಿದೆ. ಪ್ರತಿಯೊಂದು ಬೆಂಚಿನ ಮೇಲೆ ಒಬ್ಬ ಹುಡುಗ ಮತ್ತು ಇಬ್ಬರು ಹುಡುಗಿಯರು ಒಟ್ಟಿಗೆ ಕೂತು ಪಾಠ ಕೇಳುವಂತೆ ವ್ಯವಸ್ಥೆ ಮಾಡಿದೆ.ಈ ಬದಲಾವಣೆಯಿಂದ ತರಗತಿಯಲ್ಲಿ ಒಳ್ಳೆಯ ಪರಿಣಾಮ ಕಂಡುಬಂದಿತು. ಮಕ್ಕಳು ಪರಸ್ಪರ ಸಹಾಯ ಮಾಡಿಕೊಂಡು ಪಾಠ ಕಲಿಯಲು ಪ್ರಾರಂಭಿಸಿದರು. ಹುಡುಗ ಹುಡುಗಿಯರ ನಡುವೆ ಇರುವ ಸಂಕುಚನೆ ಕಡಿಮೆಯಾಗಿ, ತಂಡವಾಗಿ ಕೆಲಸ ಮಾಡುವ ಮನೋಭಾವ ಬೆಳೆದಿತು. ಈ ರೀತಿಯ ಸೀಟಿಂಗ್ ವ್ಯವಸ್ಥೆ ಮಕ್ಕಳಲ್ಲಿ ಸಮಾನತೆ, ಸಹಕಾರ ಮತ್ತು ಸ್ನೇಹಭಾವನೆಗಳನ್ನು ಬೆಳೆಸಲು ಸಹಾಯ ಮಾಡುತ್ತದೆ ಎಂಬುದು ನನಗೆ ಅನುಭವದಿಂದ ತಿಳಿಯಿತು.
.jpeg)

Thank you
Comments
Post a Comment