ಗಣಿತ ಮೇಳ – ಕಲಿಕೆಯ ಉತ್ಸವ
ನಮ್ಮ ಶಾಲೆಯಲ್ಲಿ ಗಣಿತ ಮೇಳವನ್ನು ಆಯೋಜಿಸಲಾಯಿತು. 1ರಿಂದ 7ನೇ ತರಗತಿ ತನಕದ ಎಲ್ಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ವಿದ್ಯಾರ್ಥಿಗಳು ವಿವಿಧ ರೀತಿಯ ಗಣಿತ ಮಾದರಿಗಳನ್ನು ತಯಾರಿಸಿ ತಮ್ಮ ಸೃಜನಶೀಲತೆ ಮತ್ತು ಕಲಿಕೆಯನ್ನು ಪ್ರದರ್ಶಿಸಿದರು.
ಕೆಲ ವಿದ್ಯಾರ್ಥಿಗಳು ತಮ್ಮ ಗಣಿತ ಮಾದರಿಗಳನ್ನು ತುಂಬಾ ಚೆನ್ನಾಗಿ ವಿವರಿಸಿ ಪ್ರದರ್ಶಿಸಿದರು, ಇದರಿಂದ ಅವರ ಆತ್ಮವಿಶ್ವಾಸ ಮತ್ತು ವಿಷಯದ ಅರಿವು ಸ್ಪಷ್ಟವಾಗಿ ಕಾಣಿಸಿತು.
ಉತ್ತಮವಾಗಿ ಸಾದರಪಡಿಸಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ ಅವರನ್ನು ಪ್ರೋತ್ಸಾಹಿಸಲಾಯಿತು. ಈ ಗಣಿತ ಮೇಳವು ವಿದ್ಯಾರ್ಥಿಗಳಲ್ಲಿ ಗಣಿತದ ಬಗ್ಗೆ ಆಸಕ್ತಿ, ಆತ್ಮವಿಶ್ವಾಸ ಮತ್ತು practically learning ಅಭಿವೃದ್ಧಿ ಪಡಿಸಲು ಸಹಕಾರಿಯಾಯಿತು.
ಒಟ್ಟಾರೆಯಾಗಿ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು ಮತ್ತು ಮಕ್ಕಳಿಗೆ ಒಂದು ಸ್ಮರಣೀಯ ಕಲಿಕಾ ಅನುಭವವಾಯಿತು.
Comments
Post a Comment