GHPS Mangalagatti
ನಾನು ಪ್ರತಿದಿನ 5ನೇ ತರಗತಿ ವಿದ್ಯಾರ್ಥಿಗಳಿಗೆ ‘ಓದು ಕರ್ನಾಟಕ’ ತರಗತಿಗಳನ್ನು ತೆಗೆದುಕೊಳ್ಳುತ್ತೇನೆ. ಈ ತರಗತಿಗಳ ಮೂಲಕ ಮಕ್ಕಳ ಕಲಿಕೆ ಮಟ್ಟವನ್ನು ದಿನನಿತ್ಯ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.‘ಓದು ಕರ್ನಾಟಕ’ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಯಾವ ರೀತಿಯಲ್ಲಿ ಕಲಿಸಬೇಕು ಎಂಬುದನ್ನು ಸ್ಪಷ್ಟವಾಗಿ ವಿವರಿಸಲಾಗಿದೆ. ಅದರಲ್ಲಿ ತಿಳಿಸಿದ ವಿಧಾನಗಳನ್ನು ಅನುಸರಿಸಿ ನಾನು ಮಕ್ಕಳಿಗೆ ಓದಿಸುವುದು, ಬರೆಯಿಸುವುದು ಮತ್ತು ಲೆಕ್ಕಗಳನ್ನು ಮಾಡಿಸುವಂತಹ ಕಲಿಕಾ ಚಟುವಟಿಕೆಗಳನ್ನು ನಡೆಸುತ್ತೇನೆ.ಈ ರೀತಿಯ ತರಗತಿಗಳನ್ನು ತೆಗೆದುಕೊಳ್ಳುವುದರಿಂದ ಮಕ್ಕಳ ಕಲಿಕೆ ಮಟ್ಟ ಮಾತ್ರವಲ್ಲ, ಅವರ ಜೊತೆ ನನ್ನ ಬಾಂಧವ್ಯವೂ ಹೆಚ್ಚಿನ ರೀತಿಯಲ್ಲಿ ಬೆಳೆಯುತ್ತಿದೆ. ಮಕ್ಕಳು ತಮ್ಮ ಅನುಮಾನಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವೆ ಒಳ್ಳೆಯ ಸಂಬಂಧ ಬೆಳೆದಾಗ ಕಲಿಕೆಯೂ ಇನ್ನಷ್ಟು ಸುಲಭ ಮತ್ತು ಆನಂದಕರವಾಗುತ್ತದೆ.5ನೇ ತರಗತಿ ಮಕ್ಕಳೊಂದಿಗೆ ಈ ತರಹದ ತರಗತಿಗಳನ್ನು ನಡೆಸುವುದು ನನಗೆ ಸಂತೋಷ ಮತ್ತು ತೃಪ್ತಿಯನ್ನು ನೀಡುತ್ತದೆ.

Thank you



Comments
Post a Comment