GHPS MANGALAGATTI
ನಮ್ಮ ಶಾಲೆಯ ಪ್ರಿಯ ಶಿಕ್ಷಕರಾದ ರಾಮನಗೌಡ ಭರಮ್ಮಗೌಡ ಸರ್ ಅವರನ್ನು ಇಲಾಖೆಯ ಆದೇಶದಂತೆ ಮತ್ತೊಂದು ಶಾಲೆಗೆ ವರ್ಗಾವಣೆ ಮಾಡಲಾಗಿದೆ. ಅವರ ವರ್ಗಾವಣೆಯ ಸುದ್ದಿ ನಮ್ಮಲ್ಲಿ ನೋವಿನೊಂದಿಗೆ ಹೆಮ್ಮೆಗೂ ಕಾರಣವಾಯಿತು. ನಾನು ಅವರ ಬಗ್ಗೆ ಮಾತನಾಡಿದೆ ಅವರು ನಮ್ಮ ಶಾಲೆಗೆ ನೀಡಿದ ಮಹತ್ವದ ಸೇವೆ, ಮಕ್ಕಳ ಮೇಲಿನ ಪ್ರೀತಿ ಮತ್ತು ಶಾಲಾ ಚಟುವಟಿಕೆಗಳ ಬೆಳವಣಿಗೆಗೆ ಕೊಟ್ಟ ಸಹಕಾರದ ಬಗ್ಗೆ ಹೃದಯಪೂರ್ವಕವಾಗಿ ಕೃತಜ್ಞತೆ ವ್ಯಕ್ತಪಡಿಸಿದೆ. ಶಾಲೆಯ ಸಮಸ್ತ ಸಿಬ್ಬಂದಿ ಮತ್ತು ಮಕ್ಕಳು ಸೇರಿ ಅವರಿಗೆ ಶುಭಹಾರೈಕೆಗಳನ್ನು ತಿಳಿಸಿದರು. ಸರ್ ತಮ್ಮ ಪ್ರೀತಿಯ ಸೂಚಕವಾಗಿ ಎಲ್ಲ ಶಿಕ್ಷಕರಿಗೂ ಉಡುಗೊರೆ ನೀಡಿದರು. ಮುದ್ದು ಮಕ್ಕಳಿಗೆ ಸಿಹಿಗಳು ಹಾಗೂ ಸುಂದರ ಉಡುಗೊರೆಗಳನ್ನು ಹಂಚಿ, ಅವರ ಮುಖದಲ್ಲಿ ನಗು ಚೆಲ್ಲಿಸಿದರು. ಆ ಕ್ಷಣಗಳು ಎಲ್ಲರ ಮನದಲ್ಲೂ ಮಧುರ ನೆನಪಾಗಿ ಉಳಿಯುವಂತಿದ್ದವು.

ಸರ್ ಅವರ ಸರಳತೆ, ಸೇವಾ ಮನೋಭಾವ ಮತ್ತು ಸ್ನೇಹಪೂರ್ಣ ನಡವಳಿಕೆ ನಮ್ಮ ಶಾಲೆಗೆ ಸದಾ ಬೆಳಕಾಗಿವೆ. ಅವರು ಹೊಸ ಶಾಲೆಯಲ್ಲೂ ಇದೇ ರೀತಿ ತಮ್ಮ ಪ್ರತಿಭೆಗಳಿಂದ ಹೊಳೆಯಲಿ ಎಂದು ನಾವು ಹಾರೈಸುತ್ತೇವೆ.
Thank you

.jpeg)

Comments
Post a Comment