ನಿಜ ಜೀವನದ ಉದಾಹರಣೆಗಳೊಂದಿಗೆ ವಿಜ್ಞಾನ ಪಾಠ....
ವಿದ್ಯಾರ್ಥಿಗಳಿಗೆ ವಿಜ್ಞಾನ ಪಾಠವನ್ನು ನಿಜ ಜೀವನದ ಉದಾಹರಣೆಗಳೊಂದಿಗೆ ಬೋಧಿಸಿದಾಗ ಅವರ ಗಮನ ಇನ್ನಷ್ಟು ಕೇಂದ್ರೀಕರಿಸುತ್ತದೆ ಹಾಗೂ ವಿಷಯವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ. ಈ ಕಾರಣದಿಂದಾಗಿ ನನ್ನ ತರಗತಿಯಲ್ಲಿ ಇಂದು 6ನೇ ತರಗತಿ ವಿದ್ಯಾರ್ಥಿಗಳಿಗೆ ದೈನಂದಿನ ಜೀವನದಲ್ಲಿ ಬಳಸುವ ಬೇರ್ಪಡಿಸುವಿಕೆ ವಿಧಾನಗಳು ಎಂಬ ವಿಜ್ಞಾನ ಪಾಠವನ್ನು ಬೋಧಿಸಲಾಯಿತು.
ಪಾಠದ ಸಂದರ್ಭದಲ್ಲಿ ವಿವಿಧ ಬೇರ್ಪಡಿಸುವಿಕೆ ವಿಧಾನಗಳನ್ನು ನಿಜ ಜೀವನದ ಉದಾಹರಣೆಗಳೊಂದಿಗೆ ವಿವರಿಸಿ, ಪ್ರತಿಯೊಂದು ವಿಧಾನದ ಪರಿಕಲ್ಪನೆಯನ್ನು ಸ್ಪಷ್ಟವಾಗಿ ತಿಳಿಸಲಾಯಿತು. ಅವುಗಳಲ್ಲಿ ಸೋಸುವಿಕೆ ವಿಧಾನ ಒಂದಾಗಿದ್ದು, ವಿಜ್ಞಾನಕ್ಕೆ ಸಂಬಂಧಿಸಿದ ಕೆಲವು ವಸ್ತುಗಳನ್ನು ಬಳಸಿಕೊಂಡು ಚಟುವಟಿಕೆಯ ಮೂಲಕ ಸೋಸುವಿಕೆ ಬಗ್ಗೆ ವಿದ್ಯಾರ್ಥಿಗಳಿಗೆ ಸಂಪೂರ್ಣವಾದ ತಿಳುವಳಿಕೆಯನ್ನು ನೀಡಲಾಯಿತು.
ಇದರಿಂದ ವಿದ್ಯಾರ್ಥಿಗಳು ಪಾಠದಲ್ಲಿ ಸಕ್ರಿಯವಾಗಿ ಭಾಗವಹಿಸಿ, ವಿಷಯವನ್ನು ಆಸಕ್ತಿಯಿಂದ ಕಲಿತರು.


Comments
Post a Comment