ನಮ್ಮ ಶಾಲೆಯ ಪ್ರಿಯ ಶಿಕ್ಷಕಿ ಶ್ರೀಮತಿ ಸುಲೋಚನಾ ವಾಗಮೋರೆ ಮೇಡಂ ಇತ್ತೀಚೆಗೆ ಗೌರವಾನ್ವಿತ ನಿವೃತ್ತಿಗೆ ಪಾತ್ರರಾಗಿದ್ದಾರೆ. ಅವರು “ನಲಿ ಕಲಿ” ತರಗತಿಗಳಲ್ಲಿ ಶಿಕ್ಷಣ ನೀಡುತ್ತಾ, ಮಕ್ಕಳ ಹೃದಯದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದ್ದರು. ಹಿರಿಯ ಶಿಕ್ಷಕಿಯಾಗಿ ಅವರು ಶಾಲೆಯಲ್ಲಿ ಪಡೆದಿದ್ದ ಗೌರವ, ಪ್ರತಿ ಹಂತದಲ್ಲೂ ಕಾಣುತ್ತಿತ್ತು. ಅವರ ಶಿಸ್ತಿಗೆ ಹೆಸರಾಗಿದ್ದರೂ, ಅವರು ಮಕ್ಕಳಿಗೆ ಮಾತ್ರವಲ್ಲ, ಎಲ್ಲರಿಗೂ ಪ್ರೀತಿಯ ವ್ಯಕ್ತಿಯಾಗಿದ್ದರು. ಮಕ್ಕಳಿಗೆ ಪಾಠವನ್ನಷ್ಟೇ ಅಲ್ಲದೆ, ಬದುಕಿನ ಮೌಲ್ಯಗಳನ್ನೂ ಅವರು ಬೋಧಿಸುತ್ತಿದ್ದರು. ಅವರ ಶಿಕ್ಷಕತ್ವವು ಮಕ್ಕಳ ಜೀವನದಲ್ಲಿ ಶಾಶ್ವತವಾಗಿ ಬೆರೆತು ಹೋಗಿದೆ. ಸದಾ ನಗುವಿನಿಂದ, ಧೈರ್ಯ ತುಂಬುವ ಶೈಲಿಯಿಂದ, ಮಕ್ಕಳಿಗೆ ಪ್ರೇರಣೆಯಾಗಿದ್ದರು. ನಿವೃತ್ತಿ ಸಮಾರಂಭದ ಸಂದರ್ಭದಲ್ಲಿ ಬಹುತೇಕ ಮಕ್ಕಳು ಕಣ್ಣೀರಿಟ್ಟ ದೃಶ್ಯ ಇನ್ನೂ ನೆನಪಿನಲ್ಲಿದೆ. "ಮಡಂ ಹೋಗ್ಬೇಡಿ ಪ್ಲೀಸ್..." ಎಂದು ಕೆಲ ಮಕ್ಕಳು ಅವರ ಕೈ ಹಿಡಿದು ಬೇಡಿಕೊಳ್ಳುತ್ತಿದ್ದ ದೃಶ್ಯ ಹೃದಯ ಸ್ಪರ್ಶಿಯಾಗಿತ್ತು. ಈ ಎಲ್ಲ ಕ್ಷಣಗಳು ನಮ್ಮ ಮನಸ್ಸಿನಲ್ಲಿ ಉಳಿಯುತ್ತವೆ. ಇಂದು ಮೇಡಂ ಅವರು ಶಾಲೆಯಿಂದ ಹೊರಟ್ಟಿದರೂ, ಅವರು ಬಿತ್ತಿದ ವಿದ್ಯೆಯ ಬಿತ್ತನೆ ಮುಂದುವರಿಯುತ್ತದೆ. ಅವರು ನಮಗೆ ಬೋಧಿಸಿದ ಪಾಠಗಳು ಮತ್ತು ಮೌಲ್ಯಗಳು ಸದಾ ನಮ್ಮೊಂದಿಗೆ ಇರುತ್ತವೆ. ನಾನು ಈ ಶಾಲೆಗೆ ಬರದು ಕೆಲವೇ ದಿನಗಳಾಗಿದ...
Comments
Post a Comment