ಮುಗಿಲ ನಕ್ಷತ್ರ

                                                          ಮುಗಿಲ ನಕ್ಷತ್ರ   

ನಾನು ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡಿದ್ದೆ ಒಂದು ಗ್ರಾಮದಲ್ಲಿ ಶಿಕ್ಷಕಿಯಾಗಿ ಕಾರ್ಯವನ್ನು ಸಹ ನಿರ್ವಹಿಸುತ್ತಿದೆ. ಆದರೆ ಅದು ಸುಲಭ ಕೆಲಸವಲ್ಲವೆಂದು ತಿಳಿದದ್ದು ಈ ಹುಡುಗನಿಂದ. ಮಕ್ಕಳೆಂದರೆ ನನಗೆ ಅಚ್ಚು ಮೆಚ್ಚಾಗಿತ್ತು. ಅವರೊಂದಿಗೆ ಸಮಯ ಕಳೆಯುವುದು ಕೂಡ ತುಂಬಾ ಇಷ್ಟವಾದ ಸಂಗತಿ ಯಾಗಿತ್ತು. ನನ್ನ ತರಗತಿಯಲ್ಲಿನ ಎಲ್ಲಾಮಕ್ಕಳು ನನ್ನ ಮಾತನ್ನು ಕೇಳಿದರೆ ಒಂದು ಹುಡುಗ ಮಾತ್ರ ನನ್ನ ಮಾತನ್ನು ಕೇಳುತ್ತಲೇ ಇರಲಿಲ್ಲ. ಅವನ ಹೆಸರು ಪ್ರವೀಣ್ ನಾನು ಏನೇ ಹೇಳಿದರು ಅವನು ಮಾಡುತ್ತಿರಲಿಲ್ಲ. ಹುಡುಗನ ನಡವಳಿಕೆ ವಿಚಿತ್ರವಾಗಿತ್ತು. ಆ ಹುಡುಗನನ್ನು ಬದಲಾಯಿಸಲು ತುಂಬಾ ಸಮಯ ತೆಗೆದುಕೊಂಡಿದ್ದೆ.

ಒಮ್ಮೆ ನಾನು ಕ್ಲಾಸನ್ನು ತೆಗೆದುಕೊಂಡಾಗ ಮಕ್ಕಳ ಗಲಾಟೆ ಹದ್ದು ಮೀರಿದಾಗ ನಾನು ಕ್ಲಾಸಿಂದ ಹೊರಗೆ ಹೋಗುತ್ತೇನೆ ಎಂದು ಹೇಳಿದೆ. ಆಗ ಎಲ್ಲ ಮಕ್ಕಳು ಸುಮ್ಮನಾದರೆ ಈ ಹುಡುಗ ಹೋಗಿ ಅಂದುಬಿಟ್ಟಿದ್ದ ಇದರಿಂದ ನನಗೆ ತುಂಬಾ ಕೋಪ ಬಂದಿತ್ತು. ಆ ಹುಡುಗನನ್ನು ಕರೆದು ಮಾತನಾಡಿದಾಗ ಅವನು ನನ್ನೊಂದಿಗೆ ಏನು ಮಾತನಾಡಲು ಸಿದ್ದನಿರಲಿಲ್ಲ ಅವನಿಗೆ ಅವನ ತಪ್ಪಿನ ಅರಿವೇ ಇರಲಿಲ್ಲ.

ಯಾವುದರಲ್ಲಿಯೂ ಸಹ ಆಸಕ್ತಿಯೇ ಇರಲಿಲ್ಲನಾನೆಂದರೆ ಅವನಿಗೆ ಇಷ್ಟವಿಲ್ಲವೇನು ಎಂದುಕೊಂಡು ನಾನು ಸುಮ್ಮನಿದ್ದೆ. ಅವನ ಕುರಿತಾಗಿ ತುಂಬಾ ಕಂಪ್ಲೆಂಟ್ ಗಳು ಬರುತ್ತಿದ್ದವು. ಅವನು ಹುಡುಗಿಯರ ಬಳಿ ತುಂಬಾ ಜಗಳ ಮಾಡುತ್ತಿದ್ದ, ಒಂದು ದಿನವೂ ಜಗಳವಿಲ್ಲದೆ ಮನೆಗೆ ಹೋ ಗುತ್ತಿರಲಿಲ್ಲನನಗೂ ಅವನು ತುಂಬಾ ತಲೆನೋ ವು ಎನಿಸುತ್ತಿದ್ದ. ಇದರ ಬಗ್ಗೆಉಳಿದ ಶಿಕ್ಷಕರಲ್ಲಿಹೇಳಿದರೆ ಅವನು ಸರಿ ಇಲ್ಲಮೇಡಂ. ಅವನ ಬಗ್ಗೆನೀವು ತಲೆಕೆಡಿಸಿಕೊಳ್ಳಬೇಡಿ ಉಳಿದ ಮಕ್ಕಳ ಕಡೆ ಗಮನ ಕೊಡಿ ಅವನನ್ನು ಅವನ ಪಾಡಿಗೆ ಬಿಟ್ಟುಬಿಡಿ ಎಂದು ಹೇಳಿಬಿಟ್ಟರು. ಅವರು ಆ ರೀತಿ ಹೇಳಲು ಕಾರಣವೇನೆಂದರೆ ಅವನು ಯಾವಾಗಲೂ ಶಿಕ್ಷಕರಿಗೆ ಗೌರವ ಕೊಡುತ್ತಿರಲಿಲ್ಲ.ಏನು ಬೇಕಾದರೂ ಅವರ ಮುಂದೆ ಕೆಟ್ಟದಾಗಿ ಮಾತನಾಡುತ್ತಿದ್ದ.

ಆದರೂ ನನಗೆ ಆ ಹುಡುಗನ ಬಗ್ಗೆತಿಳಿದುಕೊಳ್ಳಬೇಕೆನಿಸಿ ಮೊದಲ ಅವನ ಸ್ನೇಹಿತರನ್ನು ವಿಚಾರಿಸಿದೆ. ಆಗ ಅವರು ಅವನಿಗೆ ಹುಡುಗಿಯರೆಂದರೆ ಆಗುವುದಿಲ್ಲಎಂದು ಹೇಳಿದರು.ನಂತರ ಪ್ರವೀಣನನ್ನು ಕರೆಸಿ ಮಾತನಾಡಬೇಕೆಂದು ಹೇಳಿ ಅವರನ್ನು ಕಳಿಸಿದೆ ಆ ಹುಡುಗ ಬಂದನಾದರೂ ಏನನ್ನು ನನ್ನೊ ಂದಿಗೆ ಮಾತನಾಡಲೆ ಇಲ್ಲ. ನಾನೇ ಅವರ ಮನೆಗೆ ಹೋ ಗಿ ವಿಚಾರಿಸಬೇಕೆಂದುಕೊಂಡು ಒಂದು ದಿನ ಸಮಯ ಮಾಡಿಕೊಂಡು ನಾನೇ ಅವರ ಮನೆಗೆ ಭೇಟಿ ನೀಡಿದೆ ಅವನ ಬಗ್ಗೆವಿಚಾರಿಸಿದೆ. 

ಅವರ ತಂದೆ ತಾಯಿ ಬಳಿ ಮಾತನಾಡಿದೆ ಅವನು ಶಾಲೆಯಲ್ಲಿಈ ರೀತಿ ಜಗಳ ಮಾಡುತ್ತಾನೆ ಏನಾದರೂ ಸಮಸ್ಯೆ ಇದೆ ಎಂದು ಕೇಳಿದೆ ಆಗ ಹುಡುಗನ ತಂದೆ ಅವನಿಗೆ ಕೋಪ ಜಾಸ್ತಿ ಅವನು ಮುಂಗೋಪಿ ಎಂದರು. ಅವರು ಏನನ್ನು ಸರಿಯಾಗಿ ಹೇಳುತ್ತಿಲ್ಲವೆಂದು ತಿಳಿದು ಅಲ್ಲಿಂದ ಹೊರಟೆ. ಸ್ವಲ್ಪ ದಿನಗಳ ನಂತರ ಮತ್ತೆ ಅವರ ಮನೆಗೆ ಭೇಟಿ ನೀಡಿದೆ. ಆಗ ಅವನ ತಾಯಿಯ ಬಳಿ ವಿಚಾರಿಸಿದೆ ಆಗ ವಿಷಯ ತಿಳಿದು ನನಗೆ ಆಶ್ಚರ್ಯವಾಯಿತು. ಅವನ ತಾಯಿ ತಾಯಿ ಅಳುತ್ತಾನನ್ನಂದಿಗೂ ಅವನು ಮಾತನಾಡುವುದೇ ಇಲ್ಲಮೇಡಂ ಎಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಆಗ ಅವರ ಅಮ್ಮನಲ್ಲಿ ತಿಳಿದದ್ದು ತನ್ನ ತಾಯಿ ಹಿಂದೆ ಮಾಡಿದ ಯಾವುದೋ ತಪ್ಪಿಗೆ ಇನ್ನೂ ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಅವನು ಅವನ ಅಮ್ಮನೊ ಂದಿಗೆ ಮಾತನಾಡುವುದಿಲ್ಲವೆಂದು. ಇದನ್ನು ಬಗೆಹರಿಸಬೇಕೆಂದುಕೊಂಡು ನಾನು ಮನಸ್ಸಿನಲ್ಲಿ ಅಂದುಕೊಂಡು ದೃಢ ನಿರ್ಧಾರ ಮಾಡಿಕೊಂಡು ಅಲ್ಲಿಂದ ಹೊರಟೆ.

ಸ್ವಲ್ಪ ದಿನಗಳ ನಂತರ ನಮ್ಮ ವಿದ್ಯಾ ಪೋಷಕ ಸಂಸ್ಥೆಯಿಂದ ಒಂದು ಪಾಲಕರ ಸಭೆಯನ್ನು ಇಟ್ಟುಕೊಂಡಿದ್ದೆವು. ಎಲ್ಲಾ ಮಕ್ಕಳಿಗೂ ತಮ್ಮ ತಮ್ಮ ಪಾಲಕರನ್ನು ಕರೆದುಕೊಂಡು ಬರಲು ಹೇಳಿದ್ದೆವು ಹಾಗೆಯೇ ಪ್ರವೀಣನ್ನು ಸಹ ಮನೆಗೆ ಕಳಿಸಿದ್ದೆವು. ಆದರೆ ಎಲ್ಲಾ ಮಕ್ಕಳು ಅವರ ತಂದೆ ತಾಯಿಯೊಂದಿಗೆ ಬಂದಿದ್ದರೆ ಆ ಹುಡುಗ ಮಾತ್ರ ಒಬ್ಬನೇ ಬಂದಿದ್ದ ಕಾರಣವೇನೆಂದು ಕೇಳಿದಾಗ ಮನೆಯಲ್ಲಿ ಯಾರು ಇಲ್ಲವೆಂದು ಸಬೂಬ್ ಹೇಳಿದ್ದ. ನಂತರ ನಾನು ಅವರ ಮನೆಗೆ ಕರೆ ಮಾಡಿ ಕೇಳಿದಾಗ ತಿಳಿದದ್ದು ಅವನ ಅಮ್ಮ ಮನೆಯಲ್ಲಿ ಇದ್ದಾರೆಂದು. ಆದರೆ ಇವನು ಅವರಿಗೆ ವಿಷಯವನ್ನು ಗೊತ್ತಾಗಿತ್ತು ನಂತರ ನಾನು ಅವರಿಗೆ ಕರೆ ಮಾಡಿ ವಿಷಯ ಹೇಳಿದೆ.

ನಂತರ ಅವರು ತಮ್ಮ ಮಗನ ಕಡೆಯಿಂದ ಬರುತ್ತಿರುವೆ ಎಂದು ತುಂಬಾ ಖುಷಿಯಾಗಿ ಬಂದಿದ್ದರು. ಆಗ ಎಲ್ಲಾ ಪಾಲಕರಂತೆಯೇ ತಮ್ಮ ಮಗನ ಬಗ್ಗೆ ವಿಚಾರಿಸಿದರು ಅದನ್ನು ನೋಡಿ ನನಗೆ ಸಂತೋಷವಾಯಿತು. ಆದರೆ ಆ ಹುಡುಗನ ಮುಖದಲ್ಲಿ ಮಾತ್ರ ಕೋಪವಿತ್ತು. ನಂತರ ಪಾಲಕರ ಸಭೆ ಮುಗಿದ ನಂತರ ಆ ಹುಡುಗನನ್ನು ಕರೆಸಿ ನಿನ್ನ ತಾಯಿಯೊಂದಿಗೆ ಮಾತನಾಡಿಂದು ಒತ್ತಾಯಿಸಿದೆ. ನನ್ನ ಒತ್ತಾಯ ಮಾಡಿದ್ದು ಸ್ವಲ್ಪ ಮಾತನಾಡಿದನೇ ವಿನಃ ಸರಿಯಾಗಿ ಪ್ರೀತಿಯಿಂದ ಮಾತನಾಡಲೇ ಇಲ್ಲನಂತರ ವಾರಕ್ಕೆ ಒಂದು ಬಾರಿ ಅವನ ಮನೆಗೆ ಭೇಟಿ ನೀಡುವುದು ಕಾಯಂ ಕೆಲಸವಾಗಿತ್ತು. ಸ್ವಲ್ಪ ಸ್ವಲ್ಪವೇ ಅವನ ಮನಸ್ಸು ತಾಯಿಯ ಕಡೆ ಒಲಿಯುವಂತೆ ಮಾಡುವಲ್ಲಿ ನಾನು ಸಫಲವಾಗಿದ್ದೆ.ಅಂತೂ ತಾಯಿ ಮಗ ಒಂದಾಗಿದ್ದರು ನಂತರದ ದಿನಗಳಲ್ಲಿ ಪ್ರವೀಣನು ನನ್ನೊಂದಿಗೂ ಸರಿಯಾಗಿ ಮಾತನಾಡಲು ಶುರು ಮಾಡಿದ್ದ. ಏನೇ ವಿಷಯವಿದ್ದರೂ ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದ. ಹೀಗೆ ಅವನು ಬದಲಾಗಲು ಸುಮಾರು ಒಂದೂವರೆ ವರ್ಷ ತೆಗೆದುಕೊಂಡಿದ್ದ.

ನಂತರ ದಿನಗಳಲ್ಲಿಆ ಹುಡುಗನ ನಡವಳಿಕೆ ತುಂಬಾ ಬದಲಾಯಿತು. ಎಲ್ಲದರಲ್ಲಿಯೂ ಭಾಗವಹಿಸಲು ಶುರು ಮಾಡಿದ ಅವರ ತರಗತಿಯಲ್ಲಿಏನೇ ಕಾರ್ಯಕ್ರಮವಾದರೂ ತಾನೇ ಮುಂದಾಳತ್ವ ವಹಿಸುತ್ತಿದ್ದಎಲ್ಲಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ. ವಿದ್ಯಾ ಪೋಷಕರಿಂದ ನಡೆಸಿದಂತ ವಿಜ್ಞಾನ ಪ್ರದರ್ಶನದಲ್ಲಿಯೂ ಸಹ ಭಾಗವಹಿಸಿ ರಾಮನ್ ಅವಾರ್ಡ್ ಸ್ಪರ್ಧೆಯಲ್ಲಿಯೂ ಸಹ ಸ್ಪರ್ಧಿಯಾಗಿದ್ದ, ಇದು ಎಲ್ಲಾಶಿಕ್ಷಕರಿಗೂ ಮತ್ತುನನಗೂ ಹೆಮ್ಮೆಯ ವಿಷಯವಾಗಿತ್ತು. ಈಗ ಶಾಲೆಯಲ್ಲಿಪ್ರವೀಣನ ನಡವಳಿಕೆ ತುಂಬಾ ಬದಲಾಗಿದೆ ಎಲ್ಲಶಿಕ್ಷಕರಿಗೂ ಆ ಹುಡುಗನೆಂದರೆ ಅಚ್ಚು ಮೆಚ್ಚು ಏನೇ ಕಾರ್ಯಕ್ರಮವಿದ್ದರೂ ಪ್ರವೀಣನೇ ಮುಂಚೂಣಿಯಲ್ಲಿರುತ್ತಾನೆ. ಅವನ ತಂದೆ ತಾಯಿ ಕೂಡ ಅವನ ಬಗ್ಗೆಹೆಮ್ಮೆ ಪಡುತ್ತಾರೆ. ಹೀಗೆ ಅವನ ಜೀವನದಲ್ಲಿಯೂ ಸಹ ಮುಂದೆ ಬರಲಿ ಒಳ್ಳೆಯ ನಡವಳಿಕೆಗಳನ್ನು ಬೆಳೆಸಿಕೊಳ್ಳಲಿ ಎನ್ನುವುದೇ ನನ್ನ ಆಶಯ.


Comments

Popular posts from this blog

Vidya Poshak - Yuva Internship 2024 - Application form

Vidya Poshak Yuva Internship 2023

TPL - Teachers Premier League🏆🏆