ಅರಳಿದ ಹೂವು

                           

   ಅರಳಿದ ಹೂವು

 

ನಾನು ನನ್ನ  ಎರಡು ವರ್ಷದ ಶಿಕ್ಷಣ ವೃತಿ ಜೀವನದಲ್ಲಿ ಕಂಡ ಒಂದು ಅದ್ಬುತವಾದ ಒಬ್ಬ ವಿದ್ಯಾರ್ಥಿಯ ಬದಲಾವಣೆ ಬಹಳ ಅರ್ಥಪೂರ್ಣ ವಾಗಿದೆ.

             ನನ್ನ ಮೊದಲನೇ ವರ್ಷದ ಶಿಕ್ಷಣ ವೃತ್ತಿಯಲ್ಲಿ ನಾನು ಕಂಡತಹ ಒಬ್ಬ ವಿದ್ಯಾರ್ಥಿ, ಆತ ಬಹಳ ಪ್ರತಿಭಾವಂತ ವಿದ್ಯಾರ್ಥಿ, ಆತ ಮನೆಯಲ್ಲಿ ಚಿಕ್ಕ ಹುಡುಗ ಅವರು ಇಡಿ ನಿಗದಿ ಊರಿನಲ್ಲಿ ಬಹಳ ಪ್ರಸಿದ್ಧರು. ಆತ ೬ನೇ ತರಗತಿಗೆಆತ ೬ನೇ ತರಗತಿಗೆ ಯಲ್ಲಿ ಓದುತ್ತಿದ್ದಾಗ ತರಗತಿಯಲ್ಲಿ  ಎಲ್ಲ ವಿದ್ಯಾರ್ಥಿಗಳ ಪೈಕಿ ಈತನ ಗಮನ ಮತ್ತು ಶ್ರದ್ಧೆ ಪಾಠದಲ್ಲಿ ಬಹಳ ವಿರುತ್ತಿತು. ಆತನ ಜ್ಞಾಪಕ ಶಕ್ತಿ ಬಹಳ ಅದ್ಭುತವಾಗಿತ್ತು. ಪ್ರಾರಂಭದಲ್ಲಿ ಆತ ಪಾಠ ಮಾಡುವಾಗ ಆತನ ಪ್ರತಿಕ್ರಿಯೆ ಗಮನಾರ್ಹವಾಗಿತ್ತು. ಎಲ್ಲಾ ಸಹ ಶಿಕ್ಷಕರಿಗೂ ಸಹ ಆತ ಒಳ್ಳೆಯ ರೀತಿ ನಡೆದುಕೊಳ್ಳುತ್ತಿದ್ದ ನಂತರ ಆತ ಏಳನೇ ತರಗತಿ ಬಂದಾಗ ಮೊದ ಮೊದಲು ಆತ ತರಗತಿಗೆ ಬರುತ್ತಿದ್ದ, ನಂತರ ಸ್ವಲ್ಪ ಸಮಯದ ನಂತರ ಆತ ತರಗತಿಯಲ್ಲಿ ಆತನ ಪ್ರತಿಕ್ರಿಯೆ ಹಾಗೂ ಆತನ ಗಮನ ಕಡಿಮೆಯಾಗಲಾರಂಭಿಸಿತು ನಾನು ಆತನ ತರಗತಿಗೆ ಹೋದಾಗಲೆಲ್ಲ   ಆತನ ಬಗ್ಗೆ ಹೆಚ್ಚಿನ ಗಮನವಹಿಸುತ್ತಿದೆ. ಬರುಬರುತ್ತಾ ಆತ ತರಗತಿಯಲ್ಲಿ ಗಮನವನ್ನು  ಕಡಿಮೆ ಮಾಡಲಾರಂಬಿಸಿದ, ಮತ್ತು ಶಾಲೆಗೆ ಬರುವುದನ್ನು ನಿಲ್ಲಿಸಿದ, ನಂತರ ನಾನು ಆತನ ಸ್ನೇಹಿತರಿಗೆ ಮತ್ತು ಆತನು ತರಗತಿಯ ಶಿಕ್ಷಕರಿಗೆ ಆತನ ಬಗ್ಗೆ ವಿಚಾರಿಸಿದಾಗ ಅವರ ಪ್ರತಿಕ್ರಿಯೆ ಅಷ್ಟೊಂದು ಪರಿಣಾಮಕಾರಿ ಆಗಿರಲಿಲ್ಲ. ನಂತರ ಒಂದು ದಿನ ಆತನ ತಾಯಿಗೆ ಕರೆಯನ್ನು ಮಾಡಿದಾಗ ಆತನ ಬಗ್ಗೆ ಕೇಳಿದಾಗ ಅವರು ಆತ ಶಾಲೆಗೆ ಬಂದಿದ್ದಾನೆ ಎಂದು  ಹೇಳಿದಾಗ ನನಗೆ ಬಹಳ ವಿಚಿತ್ರವೆನಿಸಿತು. ನಂತರ ನಾನು ಆತನ ತರಗತಿಯ ಶಿಕ್ಷಕರಿಗೆ ಹೋಗಿ ಮಾಹಿತಿ ನೀಡಿದೆ, ಅವರು ಆತನ ತಂದೆಗೆ ವಿಚಾರಿಸಿದರು, ಅವರ ತಂದೆ ಆತನನ್ನು ಹುಡುಕುತ್ತಾ ಊರನ್ನು ಸುತ್ತಿದರು, ಆತ ಕಾಲೇಜು ಹುಡುಗರ ಜೊತೆ ಸುತ್ತಾಡುವುದನ್ನು ನೋಡಿ ಆತನ ತಂದೆ ಅವನಿಗೆ ಬೈದು ಹೊಡೆದು ಮನೆಗೆ ಕರೆದುಕೊಂಡು ಬಂದರು, ಆತನನ್ನು ಬಹಳ ದಿನಗಳವರೆಗೆ ಮನೆಯಲ್ಲಿ ಇಟ್ಟಿದ್ದರು.

            ನಂತರ ನಾನು ಮತ್ತು ನನ್ನ ಸಹ ಶಿಕ್ಷಕರು ನನ್ನ ಶಾಲೆಯ ಮುಖ್ಯ ಗುರುಗಳಿಗೆ ಈ ವಿಷಯವನ್ನು ತಿಳಿಸಿದ್ದೇವು. ಆಗ ಅವರು ಅವನ  ಪೋಷಕರೊಂದಿಗೆ ಮಾತನಾಡಿ ಮಾಹಿತಿಯನ್ನು ತಿಳಿದುಕೊಂಡರು, ನಂತರ ಅವರಿಗೆ ಆತನನ್ನು ಶಾಲೆಗೆ ಕರೆದುಕೊಂಡು ಬನ್ನಿ ಎಂದು ಹೇಳಿದ್ದರು.

                    ನಂತರ ಆ ಹುಡುಗ ಶಾಲೆಗೆ  ಬರಲು ಪ್ರಾರಂಭಿಸಿದ್ದನು. ಎಲ್ಲ ಶಿಕ್ಷಕರು ಆತನ ಮೇಲೆ ಗಮನ ಮತ್ತು ಆತನಿಗೆ ಹೆಚ್ಚಿಗೆ ಆಟ ಪಾಠಗಳಲ್ಲಿ ಪ್ರೋತ್ಸಾಹವನ್ನು ನೀಡಲಾರಂಬಿಸಿದರು. ಆಗ ಆತ ಮೊದಲಿನ ಹಾಗೆ ಎಲ್ಲ ಚಟವಟಿಕೆಗಳಲ್ಲಿ ಬಹಳ  ಆಸಕ್ತಿಯಿಂದ ಭಾಗವಹಿಸಲು ಪ್ರಾರಂಭಿಸಿದನು.

ಈ ಒಂದು ಬದಲಾವಣೆ ನಿಜವಾಗಿಯೂ ಅದ್ಭುತವಾಗಿತ್ತು ಮತ್ತು ಗಮನ ಅರ್ಹವಾಗಿತ್ತು ಮತ್ತು ಎಲ್ಲ ಸಹ ಶಿಕ್ಷಕರು ಸಹ ಎಲ್ಲ ವಿದ್ಯಾರ್ಥಿಗಳ ಮೇಲೆ ಕಾಳಜಿ ವಹಿಸಲು ಆರಂಭಿಸಿದ್ದಾರೆ. ಇಂತಹ ಒಂದು ಅದ್ಭುತವಾದ ಘಟನೆಯನ್ನು ನೆನೆಸಿಕೊಂಡಾಗ ನನಗೆ ಬಹಳ ಖುಷಿಯಾಗುತ್ತದೆ ಮತ್ತು ಹೆಮ್ಮೆಯೆನಿಸುತ್ತದೆ…


Comments

Popular posts from this blog

Vidya Poshak - Yuva Internship 2024 - Application form

Vidya Poshak Yuva Internship 2023

TPL - Teachers Premier League🏆🏆