ಧ್ರುವತಾರೆ
ಧ್ರುವತಾರೆ
ನಾನು ದೀಪಾ ಕಿತ್ತೂರು ಹುಟ್ಟಿ ಬೆಳೆದಿದ್ದು ಧಾರಾವಾಡದಲ್ಲಿ, ಶಾಲೆ ಪದವಿಗಳನ್ನು ನಾನು ಧಾರವಾಡದಲೇ ಮುಗಿಸಿದೆ.ಅಕ್ಕನ ಸ್ಪೂರ್ತಿಯಿಂದ ಶಿಕ್ಷಕಿಯಾಗುವ ಹಂಬಲವಿತ್ತು ಅದೇ ಸಮಯದಲ್ಲಿ ಶಿಕ್ಷಕಿ ವೃತ್ತಿಯನ್ನು ವಿದ್ಯಾಪೋಷಕ ಸಂಸ್ಥೆ ಯಲ್ಲಿ ಪ್ರಾರಂಭಿಸಿದೆ. ಈ ಎರಡು ವರ್ಷದ ಶಿಕ್ಷಕಿಯ ವೃತ್ತಿ ಅದ್ಭುತ ಸಮಯವಾಗಿತ್ತು ಎಲ್ಲ ತರಬೇತಿ ಮುಗಿದ ನಂತರ ನನಗೆ ಒಂದು ಹಳ್ಳಿಯಲ್ಲಿ ಶಿಕ್ಷಕಿಯಾಗಿ ಎರಡು ವರ್ಷ ಕಾರ್ಯನಿರ್ವಹಿಸಲು ಹೇಳಿದರು, ಅದೊಂದು ಸುಂದರವಾದ ಊರು , ಅಲ್ಲಿ ಗಿಡ ಮರಗಳಿಂದ ತುಂಬಿದ ವಾತಾವರಣ ಇತ್ತು. ಎಲ್ಲೆಲ್ಲೂ ನೋಡಿದರು ಮಕ್ಕಳ ಕಲರವ , ಶಾಲೆಯಲ್ಲಿ ಶಿಕ್ಷಕರ ಧ್ವನಿ, ಅದು ನಿಗದಿ ಊರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಿಗದಿ ಈ ಶಾಲೆಯನ್ನು ಎರಡು ವರ್ಷ ಸುಂದರವಾದ ಸಮಯವನ್ನು ಪ್ರಾರಂಭಿಸಿದೆ.
ಎರಡು ವರ್ಷ ಶಿಕ್ಷಣ ವೃತ್ತಿಯಲ್ಲಿ ನಾನು ಕಳಿಸಿದ್ದು ತುಂಬಾ ವಿಷಯಗಳು , ತಾಯಿ ಮೊದಲ ಗುರು ಎನ್ನುವ ಹಾಗೆ ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಪಾತ್ರವು ಅಷ್ಟೇ ಎಂದು ನನಗೆ ಮೊದಲಿನಿಂದಲೇ ಹಿರಿಯರ ಅನುಭವದಿಂದ ಅರ್ಥವಾಗಿತ್ತು.
ನಾನು ಕಂಡ ಒಬ್ಬ ವಿದ್ಯಾರ್ಥಿಯ ಸುಂದರ ಬದಲಾವಣೆ ಇಲ್ಲಿದೆ ,
ಎರಡು ವರ್ಷದ ವೃತ್ತಿ ಆರಂಭಿಸಿದ್ದಾಗ ನಾನು ಆರು ಮತ್ತು ಏಳನೇ ತರಗತಿಯ ಮಕ್ಕಳಿಗೆ ಪಾಠವನ್ನು ಹೇಳುತ್ತಿದ್ದೆ. ಶಾಲೆಯ ಇತರ ಚಿಕ್ಕ ಚಿಕ್ಕ ಮಕ್ಕಳು ಸಹ ಕುತೂಹಲದಿಂದ ಪಾಠವನ್ನು ಕೇಳಿ ಅವರು ಸಹ ನಮಗೂ ಪಾಠ ತೆಗೆದುಕೊಳ್ಳಿ ಎಂದು ಹೇಳಿದಾಗ ಆಗುವ ಖುಷಿಯೇ ಬೇರೆ.
ನಾನು ಎರಡನೇ ವರ್ಷದಲ್ಲಿದಾಗ 6ನೇ ತರಗತಿ ಎಲ್ಲ ಮಕ್ಕಳು ಸಹ ಆಟ ಪಾಠದಲ್ಲಿ ಆಸಕ್ತಿ ತೋರಿಸುತ್ತಿದರು. ಅದರಲ್ಲಿ ಒಬ್ಬ ವಿದ್ಯಾರ್ಥಿ ಆತನ ಹೆಸರು ಮಲ್ಲಿಕಾರ್ಜುನ, ಆತ ಎಲ್ಲರಿಗೂ ಅವಾಚ್ಯ ಶಬ್ದ ಮತ್ತು ಹಿರಿಯರಿಗೆ ಅಗೌರವನ್ನು ನೀಡುತ್ತಿದ್ದ , ಏನಾದರೂ ಕೆಲಸವನ್ನು ನೀಡಿದಾಗ ಆತ ಮಾಡಲು ಹೆದರುತ್ತಿದ್ದ.
ಏನಾದರೂ ಕೆಲಸವನ್ನು ನೀಡಿದಾಗ ಆತ ಸುಮ್ಮನೆ ಇರುತ್ತಿದ. ಶಿಕ್ಷಕರು ಅವನಿಗೆ ಬಹಳ ಹೇಳುತ್ತಿದ್ದರು.ಆತ ಅಭ್ಯಾಸದಲ್ಲು ಸಹ ಹಿಂದೆ, ಆತನಗೆ ತುಂಬಾ ಕೋಪ. ತನ್ನ ಸಹಪಾಠಿ ಗಳ ಜೊತೆ ಆತನ ಬಾಂಧವ್ಯ ಅಷ್ಟೇಕೆ ಅಷ್ಟೇ ಯಾವಾಗಲೂ ಜಗಳ ಒಂದು ದಿನ ನಾನು ಕರೆದು ಆತನ ಜೊತೆ ಮಾತನಾಡಿದೆ ಆತನಿಗೆ ಕೇಳಿದೆ ಮನೆಯಲ್ಲಿ ಏನಾದರೂ ತೊಂದರೆಗಳು ಇವೆಯೇ ಎಂದು ಕೇಳಿದಾಗ ಆತ ಸುಮ್ಮನೆ ಇರುತ್ತಿದ. ಅವರ ತಾಯಿ ಅವನಿಗೆ ಚಿಕ್ಕವನಿದ್ದಾಗಿನಿಂದ ಭಯ ಜಾಸ್ತಿ ಎಂದು ಹೇಳಿದ್ದರು. ನಂತರ ನಾನು ತರಗತಿಯಲ್ಲಿ ಆತನಿಗೆ ಹೆಚ್ಚು ಪ್ರೋತ್ಸಾಹವನ್ನು ನೀಡಲು ಪ್ರಾರಂಭಿಸಿದೆ, ಹಾಗೆ ಸ್ವಲ್ಪ ಚಿಕ್ಕ ಚಿಕ್ಕ ಕೆಲಸಗಳನ್ನು ಆತನಿಗೆ ನೀಡುತ್ತಿದ್ದೆ, ಅವನ ಪ್ರತಿಭೆಗೆ ಹೆಚ್ಚಿಗೆ ಬೆಂಬಲವನ್ನು ನೀಡಲು ಪ್ರಾರಂಭಿಸಿದೆ ಹೀಗೆ ಆತನ ಬಗ್ಗೆ ಹೆಚ್ಚಿಗೆ ಗಮನ ವನ್ನು ನೀಡಲು ಪ್ರಾರಂಭಿಸಿದ ಮೇಲೆ ಆತನಲ್ಲಿ ಹಲವಾರು ಬದಲಾವಣೆ ನೋಡಲು ಪ್ರಾರಂಭಿಸಿದೆ.
ಒಂದು ಉದಾಹರಣೆ ಎಂದರೆ ಮೊದಲೂ ಆತ ಯಾವುದೆ ಕೆಲಸವನ್ನು ನೀಡಿದಾಗ ಹಿಂದೆ ಸರಿಯುತ್ತಿದ್ದ. ಆದರೆ ಒಂದು ದಿನ ವಿಜ್ಞಾನಿ ಬಗ್ಗೆ ಮಾಹಿತಿ ಅವರ ಹಾಗೆ ವೇಷಭೂಷಣ ಹಾಕಿ ಹೇಳಬೇಕು ಎಂದು ಹೇಳಿದ್ದಾಗ ಆತ ಎಲ್ಲರಿಗಿಂತ ಮೊದಲು ಬಂದು ನಾನು ಮಾಡುತ್ತೇನೆ ಎಂದು ಹೇಳಿದಾಗ , ನನಗೆ ಆದ ಖುಷಿಗೆ ಪಾರವೇ ಇರಲಿಲ್ಲ. ಮತ್ತು ಆತ ಆ ಒಂದು ಸ್ಪರ್ಧೆ ಯಲ್ಲಿ ಬಹಳ ಅದ್ಭುತವಾಗಿ ಭಾಷಣವನ್ನು ಮಾಡಿದ.
ಇನ್ನೊಂದು ಘಟನೆ ಹೇಳಬೇಕಾದರೆ ವಿಜ್ಞಾನ ವಿಷಯದಲ್ಲಿ ಪ್ರಯೋಗಗಳನ್ನು ಮಾಡಬೇಕು ಎಂದು ಹೇಳಿದಾಗ ಆತ ಮನೆಗೆ ಹೋಗಿ ಪೋಷಕರಿಗೆ ಮಾಹಿತಿಯನ್ನು ನೀಡಿದನು, ನಂತರ ತನ್ನದೇ ಆದ ಒಂದು ಚಿಕ್ಕ ಮತ್ತು ಬಹಳ ವಿಷಯವು ಒಂದು ಪ್ರಯೋಗವನ್ನು ಆತ ಪ್ರಾರಂಭಿಸಿದ. ಆ ಒಂದು ಪ್ರಯೋಗದಲ್ಲಿ ನಿರಂತರ ಕೆಲಸವನ್ನು ಮಾಡಲು ಪ್ರಾರಂಭಿಸಿದ ಹಾಗೆ ಬೇರೆ ಶಿಕ್ಷಕರ ಜೊತೆ ಮಾತನಾಡಿ ಆ ಪ್ರಯೋಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡನು, ಆತನ ಆ ಒಂದು ಪ್ರಯೋಗ ಬಹಳ ಅರ್ಥಪೂರ್ಣವಾಗಿತ್ತು. ಹೀಗೆ ಪ್ರಾರಂಭದಲ್ಲಿ ಏನನ್ನು ಅರಿಯದ ಆ ಒಬ್ಬ ವಿದ್ಯಾರ್ಥಿ ನಂತರ ಒಬ್ಬ ಶಿಕ್ಷಕಿಯ ಪ್ರೋತ್ಸಾಹ ಮತ್ತು ಗಮನದಿಂದ ಆತನಲ್ಲಿ ಹಲವಾರು ಬದಲಾವಣೆಯು ಉಂಟಾಯಿತು, ಆತನ ಈ ಒಂದು ಬದಲಾವಣೆಗೆ ನನ್ನದೊಂದು ಚಿಕ್ಕ ಕೊಡುಗೆ ಎಂದು ಹೇಳುವುದಕೇ ನನಗೆ ತುಂಬಾ ಸಂತೋಷವಾಗುತ್ತದೆ. ಆತನಲ್ಲಿ ಈಗ ಸಕಾರಾತ್ಮಕ ಬದಲಾವಣೆಗಳು ಉಂಟಾಗಿವೆ ಎಲ್ಲರಿಗೂ ಗೌರವ ತಮ್ಮ ಸಹಪಾಠಿಗಳ ಜೊತೆ ಬರೆತು ಮತ್ತು ಅವರಿಗೆ ಒಳ್ಳೆಯ ಮಾಹಿತಿಯನ್ನು ನೀಡಲು ಪ್ರಾರಂಭಿಸಿದ್ದಾನೆ ಈ ಒಂದು ನೋಟವನ್ನು ನೋಡಿದಾಗ ನನಗೆ ಬಹಳ ಹೆಮ್ಮೆ ಆಗುತ್ತದೆ.
ಈ ಒಬ್ಬ ವಿದ್ಯಾರ್ಥಿಯ ಬದಲಾವಣೆ ನನಗೆ ಬಹಳ ಹೆಮ್ಮೆ ಎನಿಸುತ್ತದೆ.
Comments
Post a Comment