ಕಥೆಯಲ್ಲಿ ಅರಳಿದ ಹೂವು
ಕಥೆಯಲ್ಲಿ ಅರಳಿದ ಹೂವು🥀
ನಾನು ಶಾಲೆಗೆ ಬಂದು ಎರಡು ವಾರಗಳು ಕಳೆದಿದ್ದವು. ಹೀಗೆ ಒಂದು ದಿನ ತರಗತಿಯಲ್ಲಿ ಪಾಠ ಮಾಡುತ್ತಿರುವಾಗ ನನಗೆ ಎಲ್ಲರಿಗಿಂತ ಭಿನ್ನವಾಗಿ ಕಂಡಿದ್ದು ಒಬ್ಬ ಮುದ್ದಾದ ಹುಡುಗ, ನೋಡಲು ಎತ್ತರವಾದ ಮೈಕಟ್ಟು ಗುಂಡು ಗುಂಡಾದ ಮುಖವನ್ನು ಹೊಂದಿದ ಹುಡುಗನ ಹೆಸರು ನಾಗರಾಜ .ನಾನು ಪ್ರತಿಸಲ ಎಲ್ಲಾ ಮಕ್ಕಳನ್ನು ನೋಡುವಾಗ ಈ ಹುಡುಗನು ಕಣ್ಣಿಗೆ ಬಿದ್ದ ಎಲ್ಲರೂ ಸದಾ ಆಟವನ್ನಾಗಲಿ, ಪಾಠವನ್ನಾಗಲಿ ಓದುತ್ತಿರುವಾಗ ಈ ಹುಡುಗ ಮಾತ್ರ ತನ್ನ ಪಾಡಿಗೆ ತಾನು ತರಗತಿಯಲ್ಲಿ ಒಬ್ಬನೇ ಕುಳಿತಿರುತ್ತಿದ್ದ ,ಏಕೆ ಎಂದು ವಿಚಾರಿಸಿದಾಗ ನನಗೆ ತಿಳಿದದ್ದು ಆ ಹುಡುಗನಿಗೆ ಸ್ವಲ್ಪ ಮಾತಿನಲ್ಲಿ ತೊದಲುವಿಕೆ ಆದ್ದರಿಂದ ತರಗತಿಯಲ್ಲಿ ಎಲ್ಲರೂ ಅವನನ್ನು ಗೇಲಿ ಮಾಡುತ್ತಿದ್ದರು ತೊದಲ ಎಂದು ರೇಗಿಸುತ್ತಿದ್ದರು ಆದ್ದರಿಂದ ಅವನು ಯಾರೊಂದಿಗೂ ಬರೆಯುತ್ತಿರಲಿಲ್ಲ.
ಒಂದು ದಿನ ನಾನು ಆ ಹುಡುಗನನ್ನು ಕರೆದು ಪ್ರತ್ಯೇಕವಾಗಿ ವಿಚಾರಿಸಿದೆ ಆ ಹುಡುಗ ತನಗಾದ ನೋವನ್ನು ಹೇಳಿಕೊಂಡ ನಾನು ಕೂಡ ಅವನ ನೋವಿಗೆ ಸ್ಪಂದಿಸಿ ತರಗತಿಯಲ್ಲಿ ಎಲ್ಲಾ ಮಕ್ಕಳಿಗೆ ಹೀಗೆ ಗೇಲಿ ಮಾಡಬಾರದೆಂದು ತಿಳಿ ಹೇಳಿದೆ. ಹೀಗೆ ಒಂದು ದಿನ ಬಿಡುವಿನ ವೇಳೆಯಲ್ಲಿ ನಾನು ಹೃತಿಕ್ ರೋಷನ್ ರವರ ಬಾಲ್ಯದ ಕಥೆಯನ್ನು ತರಗತಿಯಲ್ಲಿ ತೋರಿಸಿದೆ. ಹೃತಿಕ್ ರೋಷನ್ ಅವರಿಗೆ ಆರನೇ ವಯಸ್ಸಿನಲ್ಲಿ ಮಾತಿನಲ್ಲಿ ತೊದಲುವಿಕೆ ಇದೆ ಎಂದು ತಿಳಿಯಿತು. ಅವರಿಗೂ ಸಹ ಚಿಕ್ಕಂದಿನಲ್ಲಿ ಮಾತನಾಡಲು ತೊಂದರೆಯಾಗುತ್ತಿತ್ತು. ತರಗತಿಯ ಗೆಳೆಯರೆಲ್ಲರೂ ಗೇಲಿ ಮಾಡುತ್ತಿದ್ದರು ನಂತರ ಅವರು ಆ ತೊಂದರೆಯನ್ನು ಮೀರಿ ಯಶಸ್ಸು ಸಾಧಿಸಿ ಈಗ ಅತ್ಯುತ್ತಮ ನಟನಾಗಿ ಮೆರೆಯುತ್ತಿದ್ದಾರೆ. ಈ ಕಥೆಯನ್ನು ಕೇಳಿದ ಬಳಿಕ ಆ ಹುಡುಗನಲ್ಲಿ ಬಹಳಷ್ಟು ಬದಲಾವಣೆ ಕಂಡಿತು, ಅವನು ಹೆಚ್ಚಾಗಿ ನನ್ನ ಜೊತೆ ಸಮಯ ಕಳೆಯಲು ಆರಂಭಿಸಿದ. ದಿನಾಲು ಒಂದೊಂದು ಹೊಸ ಕತೆಯನ್ನು ನನ್ನ ಬಳಿ ಬಂದು ಹೇಳುತ್ತಿದ್ದ ತರಗತಿಯಲ್ಲಿ ಎಂದೂ ಪ್ರಶ್ನೆ ಮಾಡದ ಈ ಹುಡುಗ ಪ್ರತಿದಿನ ಎಲ್ಲಾ ಪಾಠದಲ್ಲಿನ ಗೊಂದಲವನ್ನು ಕೇಳ ತೊಡಗಿದ, ಅವನ ಅಂಜಿಕೆ ಕ್ರಮೇಣ ದೂರವಾಯಿತು. ಈಗ ನಾನು ತರಗತಿಯಲ್ಲಿ ಏರ್ಪಡಿಸಿದ ಎಲ್ಲಾ ಸ್ಪರ್ಧೆಯಲ್ಲೂ ಅವನು ಸದಾ ಭಾಗವಹಿಸುತ್ತಾನೆ .ಈ ಹುಡುಗನ ಇಂತಹ ಬದಲಾವಣೆಗೆ ಎಲ್ಲಾ ಶಿಕ್ಷಕರು ಸಹ ಬೆರಗಾಗಿದ್ದಾರೆ.
ಸಾಧಿಸುವ ಛಲವೊಂದಿದ್ದರೆ ಉತ್ತಮ ಮಾರ್ಗದರ್ಶನವಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಈ ಹುಡುಗನೇ ಸಾಕ್ಷಿ…….
.
ಧನ್ಯವಾದಗಳು.
ಸಾಯಿಗೀತಾ ನಾಯ್ಕ್
Comments
Post a Comment