ಪ್ರತಿಭೆಗೆ ಸೋಲಿಲ್ಲ...

                                             ಪ್ರತಿಭೆಗೆ ಸೋಲಿಲ್ಲ...



ನನ್ನ ಫೆಲೋಶಿಪ್ ನ ಎರಡು ವರ್ಷದ ಅವಧಿಯಲ್ಲಿ ನಾನು ಸಾಕಷ್ಟು ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು ಹಾಗೂ ಪಾಲಕರನ್ನು ಭೇಟಿಯಾಗಿದ್ದೇನೆ. ಅವರಲ್ಲಿ ಕೆಲವರದ್ದು ಎಂದೂ ಮರೆಯಲಾಗದ ವ್ಯಕ್ತಿತ್ವ.


 ನನ್ನ ಆರನೇ ತರಗತಿಯ ವಿದ್ಯಾರ್ಥಿ ಕಿರಣ ಇವನ ಬಗ್ಗೆ ನಾನು ಹೇಳಲೇಬೇಕು.  ಬಹಳ ಮುಗ್ಧ ಸ್ವಭಾವದ ಹುಡುಗ, ವಿಧೇಯ ವಿದ್ಯಾರ್ಥಿ. ಆದರೆ ಆತನಿಗೆ ಸರಿಯಾದ ಮಾರ್ಗದರ್ಶನ  ಸಿಗದೇ ಅಭ್ಯಾಸದಲ್ಲಿ ಹಿಂದುಳಿದಿದ್ದ . ಶಿಕ್ಷಕರ ಮಾತನ್ನು ಚಾಚು ತಪ್ಪದೆ ಕೇಳುತ್ತಿದ್ದ ಹುಡುಗನಿಗೆ ಪ್ರತಿಭೆ ಇತ್ತು ಸಾಧಿಸುವ ಛಲ ಇತ್ತು ಆದರೆ ಅದಕ್ಕೆ ಸರಿಯಾಗಿ ಅವಕಾಶಗಳು ಸಿಕ್ಕಿರಲಿಲ್ಲ. 



 ನಮ್ಮ ವಿದ್ಯಾ ಪೋಷಕ ಸಂಸ್ಥೆಯು  Thinktac ಸಂಸ್ಥೆಯೊಂದಿಗೆ ಒಡಗೂಡಿ ಮಕ್ಕಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಹಾಗೂ ಜ್ಞಾನ ಹೆಚ್ಚಿಸಲು ವಿಜ್ಞಾನದ ಮಾದರಿ ಹಾಗೂ ಆಟಿಕೆಗಳನ್ನು ತಯಾರಿಸುವ ಕಿಟ್ ಗಳನ್ನು ನಮ್ಮ ಶಾಲೆಗೆ ನೀಡಿದ್ದರು.  ಇದರ ಅನುಸಾರ ಶಾಲೆಯಲ್ಲಿ ಮಕ್ಕಳು ಹೆಚ್ಚು ಕ್ರಿಯಾಶೀಲತೆಯಿಂದ ವಿಜ್ಞಾನದ ಪ್ರಯೋಗಗಳಲ್ಲಿ ಭಾಗವಹಿಸುತ್ತಿದ್ದರು.


ಅದರಲ್ಲಿ ಒಬ್ಬ ಹುಡುಗ ಕಿರಣ ನಾನು ಇತರ ಕ್ರಿಯಾತ್ಮಕತೆಗೆ ಬೆರಗಾಗಿದ್ದೆ ಇವನು ಪ್ರಯೋಗಗಳನ್ನು ಮಾಡುವುದರ  ಜೊತೆಗೆ ವಿಜ್ಞಾನದ ಹಿಂದಿನ ವೈಜ್ಞಾನಿಕತೆಯನ್ನು ಕೂಡ ವಿವರಿಸುವಷ್ಟು ಸಾಮರ್ಥ್ಯವುಳ್ಳವನಾಗಿದ್ದ ಅದನ್ನು ಕಂಡ ನನಗೆ ಆಶ್ಚರ್ಯವಾಗಿತ್ತು ಇದನ್ನು ಸದುಪಯೋಗಪಡಿಸಿಕೊಳ್ಳಲು ನಾನು ಆತನಿಗೆ ಹೆಚ್ಚು ಹೆಚ್ಚು ವಿಜ್ಞಾನ ಮಾದರಿಗಳನ್ನು ಮಾಡುವಂತೆ ಪ್ರೋತ್ಸಾಹಿಸಿದೆ.  




ಸಂತೋಷದ ವಿಷಯವೆಂಬಂತೆ ಅವನಿಗೆ Thinktac ಸಂಸ್ಥೆ ಹಮ್ಮಿಕೊಂಡಿದ್ದ ರಾಮನ್ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿತು. ಅಲ್ಲಿ ಈತನು ವಿಜ್ಞಾನದ ಮಾದರಿಗಳನ್ನು ತಯಾರಿಸಿ ಅದರ ಹಿಂದಿನ ವೈಜ್ಞಾನಿಕತೆಯನ್ನು ವಿವರಿಸಿ 27 ವಿದ್ಯಾರ್ಥಿಗಳ ಪೈಕಿಯಲ್ಲಿ ರಾಮನ್  ಅವಾರ್ಡ್ ಗೆಲ್ಲುವ ಮೂಲಕ ತನ್ನ ಪ್ರತಿಭೆಯನ್ನು ಎಲ್ಲೆಡೆ ಸಾರಿದ್ದಾನೆ. ಈತನಿಗೆ ಶಿಕ್ಷಕಿಯಾಗಿ ಮಾರ್ಗದರ್ಶನ ನೀಡಿದ ನನಗೆ ಇದು ಹೆಮ್ಮೆಯ ವಿಷಯವಾಗಿತ್ತು. ಶಾಲೆಯಲ್ಲಿ ಕೂಡ ವಿದ್ಯಾ ಪೋಷಕ ಸಂಸ್ಥೆಯ ಬಗ್ಗೆ ಎಲ್ಲರಲ್ಲೂ ಒಂದು ಹೆಮ್ಮೆ ಹಾಗೂ ಗೌರವ ಮೂಡಿತು.


ಪ್ರತಿಭೆಯ ಜೊತೆಗೆ ಮನಸ್ಸಿದ್ದರೆ ನಾವು ಏನನ್ನು ಬೇಕಾದರೂ ಸಾಧಿಸಬಹುದು. ಶಿಕ್ಷಕರಾದ ನಾವು ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕಷ್ಟೇ.


Comments

Popular posts from this blog

Vidya Poshak - Yuva Internship 2024 - Application form

Vidya Poshak Yuva Internship 2023

TPL - Teachers Premier League🏆🏆