ಎಲೆಯ ಮರೆ ಕಾಯಿಯ ಕಥೆ 🌽....
ಎಲೆಯ ಮರೆ ಕಾಯಿಯ ಕಥೆ 🌽....
ತನಲ್ಲಿ ಬಲವಿದ್ದರೂ ಎಷ್ಟೋ ಪ್ರತಿಭೆಗಳು ಎಲೆಯ ಮರೆ ಕಾಯಿಯಂತೆ ಮರೆಮಾಚಿ ಕೊಂಡಿರುತ್ತವೆ ಅಂತಹ ಪ್ರತಿಭೆಯ ಭಯದ ಪರದೆಯನ್ನು ಸರಿಸಿ ಬಲವುಳ್ಳ ಕಾಯಿ ಕಂಗೊಳಿಸುವಂತೆ ಮಾಡುವುದರಲ್ಲಿ ನನ್ನದೊಂದು ಸಣ್ಣ ಪ್ರಯತ್ನ...
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಟಬಾಗಿಯಲ್ಲಿ ಪ್ರತಿದಿನ ಎಲ್ಲ ವಿದ್ಯಾರ್ಥಿಗಳು ಅಂತ್ಯತ ಶಿಸ್ತಿನ ಸಿಪಾಯಿಗಳು ಸುಂದರವಾದ ಪರಿಸರ, ದೊಡ್ಡದಾದ ಮೈದಾನ ಮುದ್ದಾದ ಮಕ್ಕಳು ನಗುಮುಖದ ಶಿಕ್ಷಕರ ಬಳಗ ಇದ್ದಲ್ಲೇರ ಮದ್ಯೆ ನಮ್ಮ ಕಥಾ ನಾಯಕ ಅಶಿಸ್ತಿನ ಸಿಪಾಯಿ ಹಾಗೂ ಅಪಾರ ಸಮರ್ಥನಾಗಿರುವ ಎಲೆಯ ಮರೆ ಕಾಯಿ
ಸಾಗರ ಪಾಗಾದ ಎಂಬ ವಿದ್ಯಾರ್ಥಿ... 👇
ಸಾಗರ 6 ನೇ ತರಗತಿಯ ನಗುಮುಖದ ಕುಳ್ಳ ಹಾಗೂ ತನ್ನದೇ ಆದ ಗೆಳೆಯರ ಬಳಗದ ಮದ್ಯೆ ಮಾತ್ರ ಮುಕ್ತವಾಗಿ ಮಾತನಾಡುವ ಹಾಗೂ ಕ್ರಿಯಾತ್ಮಕವಾಗಿ ವಿಚಾರ ಮಾಡುವ ಬಾಲಕ.
ಗುಂಗುರು ಕೂದುಲು ಉದ್ದನೆಯ ಮೂಗು ಕುಳ್ಳ ಹುಡುಗ ಹಾಗೂ ಮನೆಯಲ್ಲಿ ಎಲ್ಲರ ಮುದ್ದಿನ ಮಗ, ಸಾಮಾನ್ಯ ವರ್ಗದ ಬಾಲಕ ಹಾಗೂ ಕೊನೆಯ ಮಗ.
ಸಾಗರನ ತಂದೆ ರೈತ ಹಾಗೂ ತಾಯಿ ಮನೆಕೆಲಸ ಮಾಡುತ್ತಾರೆ ಹಾಗೂ ಈತನಿಗೆ ಇಬ್ಬರು ಅಕ್ಕಂದಿರು ಹಾಗೂ ಒಬ್ಬ ಅಣ್ಣ ಇದ್ದಾರೆ ಅವರ ಮದ್ಯೆ ಅತಿ ಪ್ರೀತಿಯಿಂದ ಬೆಳೆದಿರುವ ಬಾಲಕ.
ಇವನು ಸಮರ್ಥನಾಗಿದ್ದ ಆದರೆ ಅವನ ನಾಚಿಕೆ ಸ್ವಭಾವ ಹಾಗೂ ಭಯ ಅವನ್ನನು ಮುಂದೆ ಬರಲು ಬಿಡುತಿರಲಿಲ್ಲ ನಾನೂ ಮೊದಲೆ ತಿಳಿಸಿದ ಹಾಗೆ ಈತನು ತನ್ನ ಆಪ್ತ ರೊಂದಿಗೆ ಮಾತ್ರ ಬೆರೆಯುವ ಗುಣದವನು ಆಗಿದ್ದ. ಆ ಆಪ್ತರಲ್ಲಿ ನಾನೂ ಒಬ್ಬಳು ಆಗಿರುವಿದ್ದರಿಂದ ಅವನಲ್ಲಿರುವ ಪ್ರತಿಭೆಯನ್ನು ಗುರುತಿಸಲು ನನಗೆ ಸಹಾಯ ವಾಯಿತು. ಮೊದಲು ನಾನು ತರಗತಿಗೆ ಹೋದಾಗ ಅವನು ಮಾತನಾಡಿರುವುದೆ ನನಗೆ ನೆನಪಿಲ್ಲ ಆದರೆ ದಿನಗಳು ಕಳದಂತೆ ಆತನು ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರಯತ್ನ ಪಟ್ಟನು ಹಾಗೂ ನನ್ನೊಡನೆ ಮುಕ್ತವಾಗಿ ಮಾತನಾಡಲು ಪ್ರಾಂಭಸಿದನು ಇದು ಅವನು ತರಗತಿಯ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸಲು ಸಹಾಯ ಮಾಡಿತು ನಂತರ ಅವನು ಗಣಿತ ವಿಷಯದಲ್ಲಿ ಆಸಕ್ತಿ ವಹಿಸಲು ಪ್ರಾಂಭಸಿದನು ಈಗ ಗಣಿತ ಅವನ ನೆಚ್ಚಿನ ವಿಷಯವಾಗಿದೆ ಹಾಗೂ ಇತನು ಗಣಿತ ವಿಷಯದಲ್ಲಿ ಪ್ರಥಮ ಸ್ಥಾನ ವನ್ನು ಪಡೆದುಕೊಂಡಿದ್ದಾನೆ ಹಾಗೂ ಶಿಸ್ತಿನ ಕಡೆಗೂ ಗಮನ ಹರಿಸುತಿದ್ದಾನೆ.
ಈ ರೀತಿ
ಬದಲಾವಣೆ ಮೂಡಿಸುವಲ್ಲಿ ನನ್ನದೊಂದು ಸಣ್ಣ ಪ್ರಯತ್ನ.....
Comments
Post a Comment