ಸ್ವತಂತ್ರ ದಿನಾಚರಣೆಯ ಸಂಭ್ರಮ
ಎಲ್ಲರಿಗೂ ೭೮ ನೇ ಸ್ವತಂತ್ರ ದಿನಾಚರಣೆಯ ಹಾರ್ದಿಕ ಶುಭಾಶಯಗಳು. GHPS ಹಳ್ಳಿಗೇರಿ ಶಾಲೆಯಲ್ಲಿಯೂ ಕೂಡ ಸ್ವತಂತ್ರ ದಿನಾಚರಣೆಯ ತಯಾರಿ ತುಂಬಾ ಜೋರಾಗಿ ನಡೀತು ಎಲ್ಲ ವರ್ಗದ ಶಿಕ್ಷಕರು, ಮುಖ್ಯ ಗುರುಗಳು ಹಾಗೂ ಮುದ್ದು ವಿದ್ಯಾರ್ಥಿಗಳು ಅತಿ ವಿಜೃಂಭಣೆ ಇಂದ ಈ ಒಂದು ಕಾರ್ಯಕ್ರಮವನ್ನು ನಡೆಸಿದರು.
ಈ ಒಂದು ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರು ಹಾಜರಿದ್ದರು, ಹಾಗೂ SDMC ಅಧ್ಯಕ್ಷರು ಮತ್ತು ಯಲ್ಲ ಸದಸ್ಯರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರ ಆಗಮನ ಈ ಕಾರ್ಯಕ್ರಮದ ಕಳೆ ಹೆಚ್ಚಿಸಿದರು. SDMC ಅಧ್ಯಕ್ಷರು ಧ್ವಜಾರೋಹಣ ಮಾಡಿದರು ಎಲ್ಲರು ರಾಷ್ಟ್ರಗೀತೆ ಹಾಡುವುದರ ಮೂಲಕ ಗೌರವ್ ಸಲ್ಲಿಸಿದರು.ಮಲಕ್ಕಳಿಂದ ಭಾಷಣ, ಹಾಡು ಡಾನ್ಸ್ ಪ್ರೋಗ್ರಾಮ್ ನಡೆಯಿತು. ಅವರ ಪಾಲಕರು ತುಂಬಾ ಖುಷಿಯಿಂದ ಪ್ರೋತ್ಸಾಹ ನೀಡಿದರು.
ಈ ಒಂದು ಶುಭ ಸಂದರ್ಭದಲ್ಲಿ ಕಾರ್ಗಿಲ್ ವಿಜಯ್ ದಿವಸದ ಪ್ರಯುಕ್ತ ನಡೆಸಲಾಗಿದ್ದ ಚಿತ್ರಕಲೆ ಮತ್ತು ಪ್ರಭಂದ ಸ್ಪರ್ಧೆಯ ಪ್ರಥಮ ದ್ವಿತೀಯ ಹಾಗೂ ತ್ರಿತೀಯ ಬಹುಮಾನವನ್ನು ವಿತರಿಸಲಾಯಿತು. ಸ್ವತಂತ್ರ ದಿನಾಚರಣೆಯ ದಿನದಂದು ಈ ಪ್ರಶಸ್ತಿ ವಿತರಣೆ ಇನ್ನು ಹೆಚ್ಚಿನ ಕಳೆ ತಂದಿತು ಏಕೆಂದರೆ ಈ ಒಂದು ದಿನ ಎಲ್ಲ ಪಾಲಕರು ಹಾಜರಾಗಿದ್ದರಿಂದ ತಮ್ಮ ಮಕ್ಕಳ ಗೆಲುವಿಗೆ ತುಂಬಾ ಖುಷಿ ಪಟ್ಟರು. ಮಕ್ಕಳು ಕೂಡ ತುಂಬಾ ಖುಷಿ ಇಂದ ಪ್ರಶಸ್ತಿ ಪಡೆದರು ಹಾಗೆ ಈ ಒಂದು ಬಹುಮಾನ ವಿತರಣೆ ಎಲ್ಲ ಮಕ್ಕಳಲ್ಲಿ ಸ್ಪರ್ಧಾತ್ಮಕ ಭಾವನೆ ಮೂಡಿಸುವುದಂತೂ ನಿಜ.
ಈ ಒಂದು ಬಹುಮಾನ ವಿತರಣೆ SDMC ಅವರಿಂದ ವಿತರಣೆ ಮಾಡಿರುವುದು ಇನ್ನು ಹೆಚ್ಚಿನ ಕಳೆ ತಂದಿತು ಹಾಗೆ ಬಹುಮಾನ ವಿತರಣೆ ನಂತರ SDMC ಅಧ್ಯಕ್ಷರು ನಮ್ಮ ವಿದ್ಯಾಪೋಷಕ್ ಸಂಸ್ಥೆಯ ಬಗ್ಗೆ ಗೌರವದ ಮಾತುಗಳನ್ನಾಡಿದರು. ಇದು ಒಂದು ಖುಷಿ ಪಡುವ ಸಂಗತಿ ಆಗಿತ್ತು.
Comments
Post a Comment