ಚಿತ್ರಕಲೆ ಹಾಗೂ ಪ್ರಭಂದ ಸ್ಪರ್ಧೆಯ ಬಹುಮಾನ ವಿತರಣೆ
ಚಿತ್ರಕಲೆ ಹಾಗೂ ಪ್ರಭಂದ ಸ್ಪರ್ಧೆಯ ಬಹುಮಾನ ವಿತರಣೆ
ಚಿತ್ರಕಲೆ ಹಾಗೂ ಪ್ರಭಂದ ಸ್ಪರ್ಧೆಯ ಪ್ರಶಸ್ತಿ ಪತ್ರಗಳನ್ನು ನಮ್ಮ ಶಾಲೆ GHPS ಹಳ್ಳಿಗೇರಿ ಯಲ್ಲಿ ಎಲ್ಲ ಶಿಕ್ಷಕರ ಸಮ್ಮುಖದಲ್ಲಿ ಹಾಗೂ ವಿದ್ಯಾರ್ಥಿಗಳ ಮುಂದೆ ನೀಡಿ ಸನ್ಮಾನ ಮಾಡಲಾಯಿತು.
ಈ ಒಂದು ಯೋಜನೆಯನ್ನು ಪ್ರಾರ್ಥನಾ ಸಮಯದಲ್ಲಿಇಟ್ಟುಕೊಂಡಿರುವುದು ಈ ಕಾರ್ಯಕ್ರಮಕ್ಕೆ ಇನ್ನು ಹೆಚ್ಚಿನ ಕಲೆ ತಂದಿತು, ಏಕೆಂದರೆ ಎಲ್ಲ ಮಕ್ಕಳಲ್ಲಿ ಕೂಡ ಸ್ಪರ್ಧಾತ್ಮಕ ಮನೋಭಾವ ಬೆಳೆಯುವುದು ಒಂದು ಉತ್ತಮ ಕೆಲಸ.
ಪ್ರಥಮ ದ್ವಿತೀಯ ಹಾಗೂ ತ್ರಿತೀಯ ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ನಮ್ಮ ಶಾಲೆಯ ಎಲ್ಲ ಶಿಕ್ಷಕ ವೃಂದದವರು ನೀಡಿ ಮಕ್ಕಳಿಗೆ ಅಭಿನಂದನೆ ಸಲ್ಲಿಸಿದರು ಹಾಗೆ ಉಳಿದ ಮಕ್ಕಳಿಗೆ ಕೂಡ ಇದರಿಂದ ನೀವು ಸಾಕಷ್ಟು ಕಲಿಯಬೇಕು ಎಂಬುದನ್ನು ತಿಳಿಸಿ ಹೇಳಿದರು.ಪ್ರಶಸ್ತಿ ಪಾತ್ರ ಸ್ವೀಕರಿಸಿದ ಮಕ್ಕಳು ತುಂಬಾ ಖುಷಿ ಪಟ್ಟರು ಹಾಗೆ ಈ ಪ್ರಶಸ್ತಿ ಸ್ವೀಕರಿಸಿದ ಮೇಲೆ ಅವರು ಈ ಒಂದು ಚಿತ್ರಕಲೆ ಮತ್ತು ಪ್ರಭಂದ ಸ್ಪರ್ಧೆಯ ಹೇಗೆ ತಯಾರಿ ಮಾಡಿದರು ಮತ್ತು ಅದರ ಅನುಭವ ಹಂಚಿಕೊಂಡು ನಮ್ಮ ವಿದ್ಯಾಪೋಷಕ್ ಸಂಸ್ಥೆಗೆ ಧನ್ಯವಾದ ತಿಳಿಸಿದರು .
ಅದೇ ರೀತಿ ಈ ಸ್ಪರ್ಧೆಯಲ್ಲಿ ಭಾಗವಸಿದ ಎಲ್ಲ ಮಕ್ಕಳಿಗೂ ಕೂಡ ಬಣ್ಣದ ಪೆನ್ಸಿಲ್ಸ್ ನೀಡಿದರೆ ಮೂಲಕ ಪ್ರೋತ್ಸಾಹ ನೀಡಲಾಯಿತು. ಉಳಿದ ಮಕ್ಕಳು ಕೂಡ ತುಂಬಾ ಖುಷಿ ಪಟ್ಟರು ಅವರಿಗೂ ಇನ್ನು ಹೆಚ್ಚಿನ ಸ್ಪರ್ಧೆಗಳಲ್ಲಿ ಭಾಗವಹಿಸುವ ಆಸಕ್ತಿ ಹೆಚ್ಚಾಯಿತು...
Comments
Post a Comment