ಶೂಸ್ ವಿತರಣಾ ಕಾರ್ಯಕ್ರಮ
ಶೂಸ್ ವಿತರಣಾ ಕಾರ್ಯಕ್ರಮ
ಶೂಸ್ ವಿತರಣೆ ಕಾರ್ಯಕ್ರಮ ಇದೊಂದು ಸರಕಾರದಿಂದ ಮಕ್ಕಳಿಗಾಗಿ ಜಾರಿಗೆ ಬಂದಂತಹ ಒಂದು ಉತ್ತಮ ಕಾರ್ಯ. ನಮ್ಮ ಸರಕಾರಿ ಶಾಲೆಯ ಎಷ್ಟೋ ಮಕ್ಕಳು ತಮ್ಮ ಕಾಲಿಗೆ ಏನು ಧರಿಸದೇ ಬರುತ್ತಿದ್ದರು, ಪುಟ್ಟ ಪುಟ್ಟ ಮಕ್ಕಳ ಸಣ್ಣ ಕಾಲು ಅದೆಷ್ಟು ನೋವು ಅನುಭವಿಸುತ್ತಿತ್ತೋ ಗೊತ್ತಿಲ್ಲ ಆದರೆ ಈ ಒಂದು ಸೇವೆ ಜಾರಿಗೆ ಬಂದಾಗಿನಿಂದ ಎಲ್ಲ ಮಕ್ಕಳು ಹೊಸ ಶೂಸ್ ಧರಿಸಿ ಖುಷಿಯಾಗಿ ಶಾಲೆಗೆ ಬರುತ್ತಾರೆ.
ನಮ್ಮ ಶಾಲೆ GHPS ಹಳ್ಳಿಗೇರಿ ಯಲ್ಲಿ ಕಳೆದ ಮಂಗಳವಾರ ಶೂಸ್ ವಿತರಣೆ ಮಾಡಲಾಯಿತು ಈ ಒಂದು ಕಾರ್ಯಕ್ರಮದಲ್ಲಿ SDMC ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದರು. ಮೊದಲಿಗೆ ೧ ನೇ ತರಗತಿ ಇಂದ ಪ್ರಾರಂಭ ಮಾಡಿದೆವು, ಆ ಪುಟ್ಟ ಮಕ್ಕಳು ಶೂಸ್ ವಿತರಣೆ ಕಾರ್ಯಕ್ರಮದಲ್ಲಿ ತುಂಬಾ ಕಳೆ ಕಳೆ ಇಂದ ಓಡಾಡುತ್ತಿದ್ದರು ಅವರಿಗೇನೋ ಒಂದು ಖುಷಿ ಒಂತರ ಹುರುಪು ಅವರ ಖುಷಿ ಅವರ ಮುಖದಲ್ಲಿ ಎದ್ದು ಕಾಣುತ್ತ ಇತ್ತು.
ಮೊದಲಿಗೆ ೧ ನೇ ತರಗತಿ ಇಂದ ಪ್ರಾರಂಭ ಮಾಡಿ ಹಾಜರಾತಿ ಪ್ರಕಾರ ಶೂಸ್ ನೀಡಲಾಯಿತು. ನಂತರ ೨ ನೇ ತರಗತಿ ಗೆ ಹೀಗೆ ೧ ರಿಂದ ೮ ತರಗತಿ ವರೆಗೂ ಶೂಸ್ ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ SDMC ಅವರ ಬೆಂಬಲ ತುಂಬಾನೇ ಇತ್ತು ಹಾಗೆ ಅವರೇ ಖುದ್ದು ಈ ಕಾರ್ಯಕ್ರಮ ನಡೆಸಿ ಕೊಟ್ಟರು. ಆ ದಿನ ಗೈರು ಹಾಜರಾತಿ ಇದ್ದ ಮಕ್ಕಳು ಮಾರನೇ ದಿನ ಬಂದು ತಮ್ಮ ತಮ್ಮ ಶೂಸ್ಗಳನ್ನ ಪಡೆದುಕೊಂಡರು. ಇದರಿಂದ ಇನ್ನು ಒಂದು ಹೊಸ ವಿಷ್ಯ ನಡೆಯಿತು ಏನೆಂದರೆ ಯಾವತ್ತೂ ಶಾಲೆಗೆ ಬಾರದ ಮಕ್ಕಳು ಈಗ ದಿನಂಪ್ರತಿ ಶಾಲೆಗೆ ಹಾಜರಾಗುತ್ತಿದ್ದಾರೆ ಈ ಕಾರ್ಯಕ್ರಮ ದಿಂದ ಇನ್ನು ಒಂದು ಹೊಸ ತಿರುವು ಮೂಡಿತು.
Comments
Post a Comment