"ಮಗುವಿಗೊಂದು ಸಸಿ" 🪴🪴
Go Green Drive
🌿🌿🌿🌿🌿🌿🌿🌿🌿🌿🌿🌿🌿🌿🌿🌿
ಇಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಿಮ್ಮಾಪುರದಲ್ಲಿ ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ಧಾರವಾಡ ವತಿಯಿಂದ ಗೋ ಗ್ರೀನ್ ಡ್ರೈವ್ /"ಮಗುವಿಗೊಂದು ಸಸಿ" ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಮ್ಮ ಶಾಲೆಯ ಶಿಕ್ಷಕರು ಮಾತನಾಡಿ ಈ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು. ನಂತರ ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಟಿಸಲಾಯಿತು. "ವೃಕ್ಷೋ ರಕ್ಷತಿ ರಕ್ಷಿತಃ" ಅಂದರೆ ಮರವನ್ನು ನಾವು ರಕ್ಷಿಸಿದರೆ ನಮ್ಮನ್ನು ವೃಕ್ಷ ಕಾಯುವುದು ಎಂಬ ಸಂದೇಶವನ್ನು ಮಕ್ಕಳಿಗೆ ನೀಡಲಾಯಿತು. ಜೊತೆಗೆ ಸಸ್ಯಗಳಿಂದಾಗುವ ಪ್ರಯೋಜನಗಳನ್ನು 5f ಗಳ ರೂಪದಲ್ಲಿ ವಿವರಿಸಲಾಯಿತು. 5f- Food, fodder, fuel, fertilizer and fibre.
ಶ್ರೀಮತಿ ಗೌರಿ ಮಾದಲಭಾವಿ ಅಧ್ಯಕ್ಷರು, ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ಧಾರವಾಡ, ಸದಸ್ಯರಾದ ಶ್ರೀಮತಿ ತೃಪ್ತಿ, ಶ್ರೀಮತಿ ಶೀತಲ್ ಮೇಡಂರವರು ಪರಿಸರವನ್ನು ಹೇಗೆ ರಕ್ಷಿಸಬೇಕು, ಗಿಡ ಮರಗಳಿಂದಾಗುವ ಪ್ರಯೋಜನಗಳನ್ನು ಮಕ್ಕಳಿಗೆ ಅರ್ಥೈಸಿದರು. ಜೊತೆಗೆ ನಮ್ಮ ಪರಿಸರವನ್ನು ಸ್ವಚ್ಚವಾಗಿಟ್ಟು ಕೊಳ್ಳುವುದರ ಮೂಲಕ ನಾವು ರೋಗಗಳನ್ನು ತಡೆಗಟ್ಟುವ ಬಗ್ಗೆ ತಿಳಿಸಿದರು. ಜೊತೆಗೆ ಅಮ್ಮಿನಭಾವಿ ಕ್ಲಸ್ಟರ್ ನ CRP ಶ್ರೀ ಬಸವರಾಜ ಕುರಗುಂದ ಸರ್ ಅವರು ಮಾತನಾಡಿ ಕೊಟ್ಟಿರುವ ಸಸಿಗಳನ್ನು ನೆಟ್ಟು ಹೇಗೆ ರಕ್ಷಿಸಿ ಬೆಳೆಸಬೇಕೆಂದು ಮಾರ್ಗದರ್ಶನ ನೀಡಿದರು. ನಂತರ ಪ್ರತಿ ಮಗುವಿಗೆ "ಹಣ್ಣಿನ ಸಸಿ"ಯನ್ನು ವಿತರಿಸಲಾಯಿತು. ಜೊತೆಗೆ ಆರೋಗ್ಯದ ಕಾಳಜಿಯ ದೃಷ್ಟಿಯಿಂದ "ಬೇವಿನ ಎಣ್ಣೆ"ಯನ್ನು ವಿತರಿಸಿದರು.
🌿🌿🌿🌿🌿🌿🌿🌿🌿🌿🌿🌿🌿🌿🌿🌿🌿
Comments
Post a Comment