ಕ್ಲಸ್ಟರ್ ಮಟ್ಟದ ಕ್ರೀಡಾ ಕೂಟ
ಕ್ಲಸ್ಟರ್ ಮಟ್ಟದ ಕ್ರೀಡಾ ಕೂಟ
ಈ ಭಾರಿ ನಮ್ಮ ನಿಗದಿ ಕ್ಲಸ್ಟರ್ ಮಟ್ಟದ ಕ್ರೀಡಾ ಕೂಟವನ್ನು ನಮ್ಮ ಶಾಲೆ ಗ್ಪ್ಸ್ ಹಳ್ಳಿಗೇರಿ ಯಲ್ಲಿ ಆಯೋಜಿಸಲಾಗಿತ್ತು. ನಮ್ಮ ಕ್ಲಸ್ಟರ್ ಇಂದ ಸುಮಾರು 10 ಶಾಲೆಯ ಮಕ್ಕಳು ಈ ಒಂದು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಈ ಒಂದು ಕಾರ್ಯಕ್ರಮಕ್ಕೆ CRP ಸರ್ ದೈಹಿಕ ಶಿಕ್ಷಣ ಅಧಿಕಾರಿಗಳು ಹಾಗೂ ಎಲ್ಲ ಶಾಲೆಯ ಶಿಕ್ಷಕರು ಭಾಗವಹಿಸಿದ್ದರು.
ಈ ಒಂದು ಕಾರ್ಯಕ್ರಮ ಬೆಳಗ್ಗೆ ಬೇಗನೆ ಪ್ರಾರಂಭವಾಯಿತು ಸುಮಾರು ೮:೩೦ ಸಮಯಕ್ಕೆಲ್ಲ ಎಲ್ಲ ಶಾಲೆಯ ಮಕ್ಕಳು ಹಾಜರಾಗಿದ್ದರು. ಊರಿನ ಗಣ್ಯಮಾನ್ಯರು SDMC ಅಧ್ಯಕ್ಷರು ಹಾಗೂ ಎಲ್ಲ ಸದಸ್ಯರು ಈ ಒಂದು ಕಾರ್ಯಕ್ರಮ ನಡೆಸಿಕೊಡುದರ ಮೂಲಕ ಉತ್ತಮವಾಗಿ ಜಾರಿಗೊಂಡಿತು. ನಮ್ಮ ಶಾಲೆಯ ಮಕ್ಕಳು ಹಳ್ಳಿಗೇರಿಯಾ ಗ್ರಾಮದೇವಿ ದೇವಸ್ಥಾನದಿಂದ ಕ್ರೀಡಾ ಜ್ಯೋತಿ ಬೆಳಗುವುದರ ಮೂಲಕ ಶಾಲೆಯಲ್ಲಿ ಕಾರ್ಯಕ್ರಮದಲ್ಲಿ ಎಲ್ಲ ಗುರುಹಿರಿಯರ ಸಮ್ಮುಖದಲ್ಲಿ ಕ್ರೀಡಾಜ್ಯೋತಿ ಬೆಳಗಿಸಿ ಕಾರ್ಯಕ್ರಮ ಪ್ರಾರಂಭ ಮಾಡಲಾಯಿತು.
ಕ್ರೀಡಾಜ್ಯೋತಿ ಬೆಳಗಿಸಿದ ನಂತರ ಎಲ್ಲ ಶಾಲೆಯ ಶಿಕ್ಷಕರಿಗೆ ತಿಂಡಿ ಹಾಗೂ ಟೀ ಆಯೋಜಿಸಲಾಗಿತ್ತು ಎಲ್ಲರು ತಿಂಡಿ ತಿಂದ ನಂತರ ಕ್ರೀಡಾಕೂಟ ಪ್ರಾರಂಭಿಸಲಾಗಿತ್ತು.ಮಳೆಯ ಅಭಾವದಿಂದ ಸ್ವಲ್ಪ ತೊಂದರೆ ಉಂಟಾದರೂ ಸಹ ಯಾವುದೇ ಕಾರ್ಯಕ್ರಮಕ್ಕೆ ತೊಂದರೆ ಆಗಲಿಲ್ಲ.ಸ್ಪರ್ಧೆ ತುಂಬಾ ಜೋರಾಗೆ ನಡೆಯಿತು ಯಲ್ಲ ಶಾಲೆಯ ಮಕ್ಕಳು ತುಂಬಾ ಉತ್ಸುಕದಿಂದ ಈ ಒಂದು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು, ಹಾಗೆಯೆ ಹೆಚ್ಚಿನ ಪ್ರಶಸ್ತಿ ಪಡೆದು ತಮ್ಮ ತಮ್ಮ ಶಾಲೆಯ ಹಿರಿಮೆ ಹೆಚ್ಚಿಸಿದರು.
ಅದೇ ರೀತಿ ನಮ್ಮ ಶಾಲೆಯ ಎಲ್ಲ ಶಿಕ್ಷಕ ವೃಂದದವರು ತುಂಬಾ ಅಚ್ಚುಕಟ್ಟಾಗಿ ಈ ಒಂದು ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟರು. ಬೇರೆ ಶಾಲೆಯ ಯಾವುದೇ ಶಿಕ್ಷಕರಿಗೂ ಯಾವ ತೊಂದರೆ ಆಗದೆ ಇರುವ ಹಾಗೆ ತುಂಬಾ ಚನ್ನಾಗಿ ನಡೆಯಿತು.ಈ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ GHPS ಹಳ್ಳಿಗೇರಿ ಶಾಲೆಯ ಮಕ್ಕಳು ಹೆಚ್ಚಿನ ಪ್ರಶಸ್ತಿ ಪಡೆದು ತಮ್ಮ ಊರಿನ ಹಿರಿಮೆ ಹೆಚ್ಚಿಸಿದರು. ಮಕ್ಕಳು ತುಂಬಾ ಚನ್ನಾಗಿ ಭಾವಹಿಸಿ ಆಟದ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಿದರು.
ಈ ಒಂದು ಸಂಧರ್ಭದಲ್ಲಿ ಊರಿನ ಮುಖ್ಯರು CRP ಸರ್ ಗೆ ಗೌರವದಿಂದ ಸನ್ಮಾನ ಮಾಡಿದ್ದೂ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗು ತಂದು ಕೊಟ್ಟಿತು. CRP ಸರ್ ಅವರು ಕೂಡ ನಮ್ಮ ಶಾಲೆಯ ಬಗ್ಗೆ ಮತ್ತು ಹಳ್ಳಿಗೇರಿ ಗ್ರಾಮದ ಬಗ್ಗೆ ಅಪಾರ ಪ್ರೀತಿ ವಿಶ್ವಾಸ ಹೊಂದಿದ್ದು ತಮ್ಮ ಸವಿ ಮಾತುಗಳ ಮೂಲಕ ವ್ಯಕ್ತ ಪಡಿಸಿದರು.
Comments
Post a Comment