ಕ್ಲಸ್ಟರ್ ಮಟ್ಟದ ಕ್ರೀಡಾಕೂಟ
ಕ್ಲಸ್ಟರ್ ಮಟ್ಟದ ಕ್ರೀಡಾಕೂಟವನ್ನು ಉನ್ನತಿಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬೇನೂರ ನಲ್ಲಿ ಏರ್ಪಡಿಸಿದ್ದು ಸುಗಮವಾಗಿ ಮತ್ತು ಸರಾಗವಾಗಿ ಅಲ್ಲಿನ ಶಿಕ್ಷಕ ವೃಂದದವರು ಮತ್ತು ಎಲ್ಲಾ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರು ಅದ್ಭುತವಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಎಲ್ಲರೂ ಉತ್ತಮ ರೀತಿಯಲ್ಲಿ ಭಾಗವಹಿಸುವುದರ ಮೂಲಕ ಕಾರ್ಯಕ್ರಮಕ್ಕೆ ಮೆರಗು ತಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತವನಪ್ಪ ಅಷ್ಟಗಿ ಯವರು ವಹಿಸಿಕೊಂಡಿದ್ದರು ಮತ್ತು ನಮ್ಮ ಶಾಲೆಯ ಗುರುಪುತ್ತನವರ ಗುರುಗಳು ಕಾರ್ಯಕ್ರಮದ ಸದಸ್ಯತ್ವವನ್ನು ವಹಿಸಿಕೊಂಡಿದ್ದರು ಇನ್ನು ಕೆಲವರು ಉಪಸ್ಥಿತರಿದ್ದರು .
ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಶಾಲೆಯ ಮಕ್ಕಳು ವಾಲಿಬಾಲ್, ಕಬ್ಬಡ್ಡಿ, ಅಥ್ಲೆಟಿಕ್ ಆಟದಲ್ಲಿ ಭಾಗವಹಿಸಿದ್ದು ವಾಲಿಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆಯುದರೊಂದಿಗೆ ಕೀರ್ತಿ ತಂದಿದ್ದಾರೆ . ಅವರ ಸತತ 2 ತಿಂಗಳುಗಳ ಪರಿಶ್ರಮದ ಫಲ ಗೆಲುವಾಗಿ ಕಂಡು ಬಂದು ಗೆಲುವಿನ ಸಂಭ್ರಮವನ್ನು ವಿಜೃಂಭಣೆಯಿಂದ ಆಚರಿಸಿದರು . ಮತ್ತು ಕಬ್ಬಡ್ಡಿ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡು , ವಿಭಾಗಮಟ್ಟದಲ್ಲಿ ವಿಜೇತರಾಗಿರುವ ಉರ್ದು ಉಪ್ಪಿನ ಬೆಟಗೇರಿ ಪಂದ್ಯದ ಜೊತೆ ಕಣಕ್ಕಿಳಿದು 2 ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಇದು ನಮ್ಮ ಶಾಲೆಯ ಹೆಮ್ಮೆಯ ಸಂಗತಿಯಾಗಿದ್ದು ನಮಗೆ , ನಮ್ಮ ಶಾಲೆಗೆ ಮತ್ತು ಊರಿನ ಗ್ರಾಮಸ್ಥರಿಗೆ ಅನಂದವನ್ನುಂಟುಮಾಡಿದೆ . ನಮ್ಮ ಶಾಲೆಯ ಮಕ್ಕಳು ಹರುಷದಿಂದ ಪದಕ 🥇 🏅, 🏆 ಮತ್ತು ಪ್ರಮಾಣಪತ್ರಗಳು ಸ್ವೀಕರಿಸಿ ಗ್ರಾಮಕ್ಕೆ ಸಿಹಿ ವಿಷಯವನ್ನು ಉಣಬಡಿಸಿದರು.
ಧನ್ಯವಾದಗಳು
Comments
Post a Comment