ನಮ್ಮ ಸೇನೆ ನಮ್ಮ ಹೆಮ್ಮೆ
ನಮ್ಮ ವಿದ್ಯಾಪೋಷಕ್ ಸಂಸ್ಥೆಯಿಂದ ಕಾರ್ಗಿಲ್ ವಿಜಯ್ ದಿವಸ ನಿಮಿತ್ತಯಾಗಿ ಶಾಲೆಯಲ್ಲಿ ನಮ್ಮ ಸೇನೆ ನಮ್ಮ ಹೆಮ್ಮೆಎಂಬ ವಿಷಯದ ಮೇಲೆ ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆಯನ್ನು ನಡೆಸಲಾಯಿತು. ನಮ್ಮ ಶಾಲೆಯಿಂದ ೧೪ ವಿದ್ಯಾರ್ಥಿಗಳು ಭಾಗವಸಿದ್ದರು. ೧ ಗಂಟೆಯ ಸ್ಪರ್ಧೆಯನ್ನು ನಾನು ನಡೆಸಿದೆ. ಎಲ್ಲ ನಮ್ಮ ಶಾಲೆಯ ಶಿಕ್ಷಕರು ಈ ಸ್ಪರ್ಧೆಯನ್ನು ಗಮನಿಸಿದರು. ಹಾಗೂ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಎಲ್ಲ ವಿದ್ಯಾರ್ಥಿಗಳು ಸೈನಿಕರ ಬಗೆಗಿನ ಅಭಿಮಾನವನ್ನುಹಾಗೂ ಪ್ರೀತಿಯನ್ನು ಪ್ರಬಂದದ್ ಮೂಲಕ ವ್ಯಕ್ತಪಡಿಸಿದ್ದಾರೆ. ಎಲ್ಲ ವಿದ್ಯಾರ್ಥಿಗಳು ಪ್ರಬಂಧವನ್ನು ಅದ್ಭುತವಾಗಿ ಬರೆದಿದ್ದಾರೆ. ಹಾಗೂ ನಮ್ಮ ಸೈನಿಕರು ಗಡಿಯ ಭಾಗದಲ್ಲಿ ಅನುಭವಿಸುವ ಕಷ್ಟಗಳನ್ನು ವಿದ್ಯಾರ್ಥಿಗಳು ಅರೆತಿದ್ದಾರೆ . ಸೇನೆ ಬಗ್ಗೆ ತುಂಬಾ ವಿವರವಾಗಿ ವಿಶ್ಲೇಷಿಸಿದ್ದಾರೆ. ಮತ್ತು ಅವರ ಅಭಿಪ್ರಾಯಗಳನ್ನು ಸಹ ವಿದ್ಯಾರ್ಥಿಗಳು ವಿವರಿಸಿದ್ದಾರೆ. ಹಾಗೂ ಮುಂದಿನ ದಿನಗಳಲ್ಲಿ ತಾವು ಸಹ ಸೈನಿಕರಾಗಬೇಕೆಂದು ಆಶಿಸುತ್ತಾರೆ. ಕೊನೆಯದಾಗಿ ನಮ್ಮನ್ನು ಕಾಯುವ ಸೈನಿಕರಿಗೆ ನಮನಗಳನ್ನು ತಿಳಿಸಿದ್ದಾರೆ🙏. ಹಾಗೆಯೇ ಎಲ್ಲ ವಿದ್ಯಾರ್ಥಿಗಳು ಸುಂದರವಾಗಿ ಸೈನಿಕರ ಮತ್ತು ರಾಷ್ಟ್ರಧ್ವಜದ್ ಚಿತ್ರವನ್ನು ತೆಗೆದಿದ್ದಾರೆ.
Comments
Post a Comment