ಕ್ಲಸ್ಟರ ಮಟ್ಟದ ಕ್ರೀಡಾ ಕೂಟದಲ್ಲಿ ಗಳಿಸಿದ ಬಹುಮಾನಗಳು
ಕ್ಲಸ್ಟರ ಮಟ್ಟದ ಕ್ರೀಡಾ ಕೂಟದಲ್ಲಿ ಗಳಿಸಿದ ಬಹುಮಾನಗಳು
ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬೇನೂರ ನಲ್ಲಿ ಕ್ಲಸ್ಟರ ಮಟ್ಟದ ಕ್ರೀಡಾಕೊಟ ನಡೆದಿತ್ತು. ಅಲ್ಲಿ ಒಟ್ಟು ೧೧ ಶಾಲೆಗಳು ಭಾಗವಹಿಸಿದ್ದವು . ಅದರಲ್ಲಿ ನಮ್ಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾದವಾಡ ಶಾಲೆಯ ಮಕ್ಕಳು ಭಾಗವಹಿಸಿದ್ದರು.ಎಲ್ಲ ಶಾಲೆಯ ಮಕ್ಕಳು ಪ್ರತಿನಿತ್ಯ ಆಟವನ್ನು ಅಡಿ ಪ್ರಯತ್ನಪಟ್ಟು ಹಲವಾರು ರೀತಿಯ ಬಹುಮಾನಗಳನ್ನು ಪಡೆದುಕೊಂಡರು.ಮೊದಲಿಗೆ ಗುಂಪು ಆಟಗಳನ್ನು ಆಡಿದರು. ವಾಲಿಬಾಲ್ ತ್ರೋಬಾಲ್ ಖೋ ಖೋ ಮತ್ತು ಕಬ್ಬಡ್ಡಿ ಗುಂಪು ಆಟಗಳನ್ನು ಆಡಿದರು. .
ನಂತರ ಮದ್ಯಾಹ್ನದಲ್ಲಿ ವೈಕ್ತಿಕ ಆಟಗಳನ್ನು ಆಡಿಸಲಾಯಿತು.ಉದ್ದ ಜಿಗಿತ,ಎತ್ತರ ಜಿಗಿತ , ಗುಂಡು ಎಸೆತ ಮತ್ತು ಚಕ್ರ ಎಸೆತ ಹಾಗೂ ೧೦೦ ಮೀ ಅಂಡ್ ೨೦೦ ಮತ್ತು ೪೦೦ ಮತ್ತು ೬೦೦ ಮೀಟರಓಟವನ್ನು ಓಡಿಸಲಾಯಿತು.ಎಲ್ಲ ಮಕ್ಕಳು ಭಾಗವಿಸಿದ್ದರು.
Government Higher Primary Yadavada School ಅದರಲ್ಲಿ ನಮ್ಮ್ ಯಾದವಾಡ ಶಾಲೆಯಾ ಹೆಣ್ಣು ಮಕ್ಕಳು ವಾಲಿ ಬಾಲ ಮತ್ತು ತ್ರೋಬಾಲ್ ನಲ್ಲೆ ಪ್ರಥಮ ಬಹುಮಾನವನ್ನು ಪಡೆದುಕೊಂಡರು. ಹಾಗು ಗಂಡು ಮಕ್ಕಳು ತ್ರೋಬಾಲನಲ್ಲಿ ಪ್ರಥಮ ಬಹುಮಾನವನ್ನು ಪಡೆದುಕೊಂಡರು.
ಹಾಗೂ ಗಂಡು ಮಕ್ಕಳು ಎತ್ತರ ಜಿಗಿತ ಮತ್ತು ಗುಂಡು ಎಸೆತದಲ್ಲಿ ದ್ವಿತೀಯ ಬಹುಮಾನವನ್ನು ಪಡೆದರು. ಹಲವಾರು ಪದಕಗಳನ್ನೂ ಹಾಗೂ ಪತ್ರಗಳನ್ನು ಪಡೆದುಕೊಂಡರು. ಇದು ನಮ್ಮ ಶಾಲೆಗೆ ಹೆಮ್ಮೆ ಪಡುವಂತಹ ಒಂದು ಒಳ್ಳೆಯ ವಿಷಯವಾಗಿದೆ.ಎಲ್ಲ ಮಕ್ಕಳು ಮತ್ತು ಎಲ್ಲ ಶಿಕ್ಷಕರು ತುಂಬಾ ಸಂತೋಷಪಟ್ಟರು.
Comments
Post a Comment