ವಾರಕ್ಕೊಂದು ವಿಜ್ಞಾನ ಪ್ರಯೋಗ
ಸರಕಾರಿ ಹಿರಿಯ
ಪ್ರಾಥಮಿಕ ಶಾಲೆ ಕಲ್ಲೆ
ನಮ್ಮ ಶಾಲೆಯ ಪ್ರಧಾನ ಗುರುಗಳಾದ ಶ್ರೀಯುತ N.G.ಗುರುಪೂತ್ರನವರ ಮಾರ್ಗದರ್ಶನದ ಮೂಲಕ ವಾರಕ್ಕೊಂದು ವಿಜ್ಞಾನ ಪ್ರಯೋಗವನ್ನು ಮಾಡಿಸಿದ ಸಮಯ . ಎಲ್ಲ ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಪ್ರಯೋಗ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು . 6 ನೇಯ ತರಗತಿಯ ವಿದ್ಯಾರ್ಥಿಗಳಾದ 10 ವಿದ್ಯಾರ್ಥಿಗಳು ಪ್ರಯೋಗ ಮಾಡುವುದರಲ್ಲಿ ಭಾಗವಹಿಸಿದ್ದು " ಮಣ್ಣಿನ ಸಂಸ್ಕರಣೆ ಘಟಕ ಪ್ರಯೋಗವನ್ನು " ಅಚ್ಚುಕಟ್ಟಾಗಿ ಮಾಡಿದರು . ಮಣ್ಣಿನ ಸಂಸ್ಕರಣೆ ಘಟಕ ಪ್ರಯೋಗವನ್ನು ಮಾಡಲು ಆಲಿಕೆ, ಮಣ್ಣು, ನೀರು,ಭೀಕರ ಮತ್ತು ಸಂಶೋಧಕ ಪತ್ರವನ್ನು ಉಪಯೋಗಿಸಿಕೊಂಡು ಬಹಳ ಅಚ್ಚುಕಟ್ಟಾಗಿ ಮಾಡಿದರು . ಇದರಲ್ಲಿ ಸಂತೋಷದ ವಿಷಯ ಏನೆಂದರೆ ಎಲ್ಲ ವಿದ್ಯಾರ್ಥಿಗಳು ಹೊಂದಾಣಿಕೆಯಿಂದ ಭಾಗವಹಿಸಿ ಸ್ವತಃ ತಾವೇ ಅದನ್ನು ಉಳಿದ ಮಕ್ಕಳಿಗೆ ಆ ಪ್ರಯೋಗದ ವಿವರಣೆಯನ್ನು ವಿವರಿಸಿದರು .
ಧನ್ಯವಾದಗಳು
Comments
Post a Comment