ನಮ್ಮ ಸೇನೆ ನಮ್ಮ ಹೆಮ್ಮೆ
ನಮ್ಮ ಸೇನೆ ನಮ್ಮ ಹೆಮ್ಮೆ
ನಮ್ಮ ಸೇನೆ ನಮ್ಮ ಹೆಮ್ಮೆ ಇದೊಂದು ಉತ್ತಮ ಚಿತ್ರಕಲೆ ಹಾಗೂ ಪ್ರಭಂದ ಸ್ಪರ್ಧೆ ನಮ್ಮ ಶಾಲೆ GHPS ಹಳ್ಳಿಗೇರಿ ಶಾಲೆಯ ಮಕ್ಕಳು ತುಂಬಾ ಉತ್ಸಹಹದಿಂದ ಈ ಸ್ಪರ್ಧೆಯಲ್ಲಿ ಭಾಗವಹಿಸಲು ತುಂಬಾ ಕಾಯುತ್ತ ಇದ್ದರು ಏಕೆಂದರೆ ಈ ಸ್ಪರ್ಧೆಯ ಬಗ್ಗೆ ನಾನು ಮೊದಲಿನಿಂದಲೂ ವಿದ್ಯಾರ್ಥಿಗಳಿಗೆ ಹೇಳುತ್ತಾ ಬಂದಿದ್ದೆ ಹಾಗೆ ಒಂದು ದಿನ ನಾನು ಈ ಸ್ಪರ್ಧೆಯನ್ನು ಏರ್ಪಡಿಸಿದಾಗ ಬಹಳ ವಿದ್ಯಾರ್ಥಿಗಳು ಭಾಗವಹಿಸಿದರು ಹಾಗೂ ಬಹಳ ಉತ್ತಮವಾದ ಪ್ರದರ್ಶನ ನೀಡಿದರು, ಹೇಗೆಂದರೆ ಆಯ್ಕೆ ಪ್ರಕ್ರಿಯೆಯಲ್ಲಿ ಕೂಡ ನಮಗೆ ಕಷ್ಟವಾಗಿತ್ತು ಪ್ರಥಮ ಬಹುಮಾನ ನೀಡಲು ಆ ತರಹದ ಪ್ರದರ್ಶನ ಮತ್ತು ಪ್ರಭದದ ವಿಷಯವು ಕೂಡ ಅಷ್ಟೇ ಚನ್ನಾಗಿ ಬರೆದಿದ್ದರು.
ಈ ಉತ್ತಮ ಪ್ರದರ್ಶನದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಪ್ರಶಂಸೆ ನೀಡುತ್ತಾ ಎಲ್ಲ ಚಿತ್ರಕಲೆ ಹಾಗೂ ಪ್ರಭಂದವನ್ನು ಹಿಂಪಡೆದುಕೊಂಡು, ನಮ್ಮ ಶಾಲೆಯ ಬೇರೆ ಶಿಕ್ಷಕರ ಜೊತೆ ಚಿತ್ರಕಲೆ ಮತ್ತು ಪ್ರಭಂದ ಸ್ಪರ್ಧೆಯ ಬಗ್ಗೆ ಚರ್ಚೆ ಮಾಡಿ ಪ್ರಥಮ, ದ್ವಿತೀಯ ಹಾಗೂ ತ್ರಿತೀಯ ಸ್ಥಾನ ಯಾವ ಉತ್ತಮ ಚಿತ್ರಕಲೆಗೆ ಕೊಡಬೇಕು ಎಂದು ಚರ್ಚೆ ನಡೆಸಿ ಕೊನೆಗೆ ಒಂದು ಉತ್ತಮ ಚಿತ್ರಕಲೆಗೆ ಪ್ರಥಮ ಬಹುಮಾನ ನೀಡಿದೆವು. ಈ ಒಂದು ಆಯ್ಕೆ ಪ್ರಕ್ರಿಯೆ ನಮಗೆ ತುಂಬಾ ಕಷ್ಟಕರವಾಗಿತ್ತು ಏಕೆಂದರೆ ಯಲ್ಲ ವಿದ್ಯಾರ್ಥಿಗಳು ಆ ರೀತಿಯ ಪ್ರದರ್ಶನ ನೀಡಿದ್ದರು.
ಈ ಒಂದು ಸ್ಪರ್ಧೆಯನ್ನು ನಡೆಸಿಕೊಡಲು ಶಾಲೆಯ ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕರು ಬಹಳ ಸಹಾಯ ಮಾಡಿದರು ಹಾಗೆಯೆ ಈ ಸ್ಪರ್ಧೆಯ ಆಯ್ಕೆ ಪ್ರಕ್ರಿಯೆಯಲ್ಲೂ ನನಗೆ ಸಹಾಯ ಮಾಡಿದರು. ಹಾಗೆಯೆ ಪ್ರಥಮ ದ್ವಿತೀಯ ಮತ್ತು ತ್ರಿತೀಯ ಬಹುಮಾನ ಬಂದ ವಿದ್ಯಾರ್ಥಿಗಳ ಬಹುಮಾನ ಹೇಗೆ ನೀಡುವುದು ಎನ್ನುದರ ಬಗ್ಗೆ ಕೂಡ ಒಂದು ಚರ್ಚೆ ನಡಿಸಿದೆವು. ಈ ಸ್ಪರ್ಧೆ ತುಂಬಾ ಚನ್ನಾಗಿ ನಡೆಯಿತು.
ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಮೂಡಿಸುವುದು ವಿದ್ಯಾರ್ಥಿಗಳ ಬೆಳವಣಿಗೆಗೆ ಉತ್ತಮ ದಾರಿ ..................
Comments
Post a Comment