Posts

Showing posts from November, 2024

ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೆನಾದರೂ ಬಲ್ಲಿರಾ. ಕನಕದಾಸರು

Image
 ಕನಕದಾಸ ಜಯಂತಿ ಸಂಭ್ರಮ ನಮ್ಮ ಶಾಲೆಯಲ್ಲಿ ದಿನಾಂಕ 18/11/2024 ರಂದು ಕನಕದಾಸ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ದಿನದಂದು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಪ್ರಾರಂಭವನ್ನು ಬೆಳಗಿನ ಪ್ರಾರ್ಥನೆಯೊಂದಿಗೆ ಮಾಡಲಾಯಿತು. ಅದರ ನಂತರ ಕನಕದಾಸರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರ ಜೀವನ ಮತ್ತು ಸಾಧನೆಗಳ ಕುರಿತು ಮಾತನಾಡಲಾಯಿತು. ನಮ್ಮ ಶಿಕ್ಷಕರು ಮತ್ತು ಕೆಲ ವಿದ್ಯಾರ್ಥಿಗಳು ಕನಕದಾಸರ ಸಾಹಿತ್ಯ ಮತ್ತು ಅವರ ಸಂದೇಶಗಳನ್ನು ನಮ್ಮೆದುರು ಮಂಡಿಸಿದರು. ವಿದ್ಯಾರ್ಥಿಗಳು ಕನಕದಾಸರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅನುಸರಿಸುವ ಶಕ್ತಿ ಪಡೆದರು.

ACTIZEN CLUB

Image
   GHPS MANGALAGATTI                   "ನಮ್ಮ ಶಾಲೆಯಲ್ಲಿ ದಿನಾಂಕ 22/11/2024 ರಂದು ಆಕ್ಟಿಜೆನ್ ಕ್ಲಬ್  ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಯೋಜಿಸಲಾಯಿತು. ಪ್ರಜಾಪ್ರಭುತ್ವದ ಅರಿವು ಮತ್ತು ಸಮಾಜ ಸೇವಾ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಯಿತು." ನಮ್ಮ ವಿದ್ಯಾರ್ಥಿಗಳು ಸಮುದಾಯದ ಸವಾಲುಗಳ ಬಗ್ಗೆ ಚರ್ಚಿಸಿದರು ಮತ್ತು ಅದಕ್ಕೆ ಪರಿಹಾರಗಳನ್ನು ಶೋಧಿಸುವ ಪ್ರಯತ್ನ ಮಾಡಿದರು. ಇದರಿಂದ ಮಕ್ಕಳಲ್ಲಿ ಸಮಾಜದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯಗಳ ಅರಿವು ಬೆಳೆದಿತು. ಈ ಕಾರ್ಯಕ್ರಮವು ಎಲ್ಲರ ಮನಸ್ಸಿನಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಹೊಸ ಸಂವೇದನೆ ಮೂಡಿಸಿತು."  

ಪ್ರಯೋಗಗಳು

Image
    ನಾನು 5ನೆ ತರಗತಿ ಮಕ್ಕಳಿಗೆ ಪರಿಸರ ವಿಷಯದ ವಸ್ತುಗಳ ಸ್ವರೂಪ ಅಧ್ಯಾಯವನ್ನು  ಸಣ್ಣ ಸಣ್ಣ ಪ್ರಯೋಗಗಳನ್ನು ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿದೆ. ಪ್ರಯೋಗಗಳು ಸರಳವಾಗಿದ್ದರು ಕೂಡ ವಿದ್ಯಾರ್ಥಿಗಳಿಗೆ ವಿಷಯವನ್ನು ನೆನೆಪಿಟ್ಟುಕೊಳ್ಳಲು ಅನುಕೂಲಕರವಾದವು .  ಘನ,ದ್ರವ ಹಾಗೂ ಅನಿಲ ವಸ್ತುಗಳಲ್ಲಿ ಕಣಗಳು ಹೀಗೇ ಜೋಡನೆಯಾಗಿರುತ್ತವೇ ಎಂಬುದನ್ನು ವಿದ್ಯಾರ್ಥಿಗಳು ಪ್ರಯೋಗಗಳ ಮೂಲಕ ಸರಳವಾಗಿ ತಿಳಿದುಕೊಂಡರು. ವಿದ್ಯಾರ್ಥಿಗಳಿಗೆ ವಿಷಯವು ಸರಿಯಾಗಿ ಅರ್ಥವಾದಾಗ ಅವರ ಮುಖದಲ್ಲಿ ಮೂಡುವ ನಗುವನ್ನು ನೋಡುವುದೆ ಶಿಕ್ಷಕರಿಗೆ ಆನಂದ😍😍

Awareness about Boys

Image
                                                    Awareness about Boys                           Boys are very pretty guys.Should not like others a very easily .Once they should like they are not forget the like person there is a teacher or there parents and their friends in their childhood their surround environment and their parents and their neighbours those people are very influenced by the boys or girls some places some I can see the boys are blame their friends with very wrong illiterate words a bad word used to  friends and their teachers also it is because of their childhood or there family background is very important in this but we can change of that minded boys. If we know cannot try to change for that type of boys in their future they are suffering and they are get punis...

My Students Drawing

Image
                                                      My Student Drawing                                                My Student Basavaraj hosakeri he is a good students he draw national   Emblem of lion. It was the arted by my students and then they draw the flag of India was a good and another  one  a student is Shri Shailgowda patil draw the India map it is indicated the indicated Ashoka shasanas   it was well and he is also draw the India map with the coloured it was good without colour black and white drw student and with colour India map and India flag draw one student it was a very good images I take a images uploaded I like a very much restaurant drawings our Narendra school students are very spec...

ಮನುಕುಲದ ಶ್ರೇಷ್ಠ ದಾಸ ಕನಕದಾಸರು

Image
  On 18th November we celebrated Kanakadas Jayanthi in our school MPKBS Hebballi. Firstly made the necessary arrangements for the Pooja in front of Kanakadasa's photo to celebrate his life and teachings. The SDMC members, along with all the teachers, students, and cooking helpers, were involved in the event. A teacher sang a prayer song to welcome the guests, setting a spiritual tone for the occasion. Following this, the Pooja was performed with great devotion. One of our teachers then narrated the inspiring life story of Kanakadasa to the students, highlighting his devotion, social reform, and contributions to Kannada literature and Bhakti movement. The students listened attentively, learning about Kanakadasa's unwavering faith, his fight against caste discrimination, and his deep love for Lord Vittala.

ಭೂಮಿ ಪೂಜೆ

Image
                                         ಇಂದು  ನಮ್ಮ ಶಾಲೆಯಲ್ಲಿ ಆಟದ  ಮೈದಾನದ ಭೂಮಿ ಪೂಜೆಯನ್ನು ನೆರವೇರಿಸಲಾಯಿತು.  ಪ್ರಗತಿ ಫೌಂಡೇಶನ್, ಆಡಿಡಾಸ್ & ಕಾಮನ್ ಗೋಲ್ಡ್  ಸಂಸ್ಥೆಗಳ ಸಹಯೋಗದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ  ತಿಮ್ಮಾಪುರದ ಆಟದ ಮೈದಾನದ ದುರಸ್ಥಿ, ಮಳೆ ನೀರು ಹರಿದು ಹೋಗುವ ನಿರ್ವಹಣೆ , ಆಟದ ಮೈದಾನದ ಸುತ್ತಲೂ ಸಸಿ ನೆಡುವಿಕೆ ಕಾರ್ಯಕ್ಕೆ ಇಂದು ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿಲಾಯಿತು.                                           ಸಕಾಲಕ್ಕೆ ಮರೇವಾಡ ಗ್ರಾಮ ಪಂಚಾಯಿತಿಯ ಸದಸ್ಯರು,  ಶಾಲಾ ಎಸ್‌ಡಿಎಂಸಿ ಕಮಿಟಿ,  ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗ,  ಮುದ್ದು ಮಕ್ಕಳು ಹಾಗೂ ಗ್ರಾಮಸ್ಥರು ಹಾಜರಿದ್ದು ಶುಭ ಕೋರಿದರು💐

ನಿನ್ನಂತಾಗಬೇಕು ಕನಕ

Image
                                          ನವೆಂಬರ್ ೧೮ ರಂದು ನಮ್ಮ ಶಾಲೆಯಲ್ಲಿ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು. ಈ ದಿನ ವಿಶೇಷವಾಗಿ ಕನಕದಾಸರ ಜೀವನ ಮತ್ತು ಅವರ ಭಕ್ತಿಯು ಸಮಾಜಕ್ಕೆ ನೀಡಿದ ಸಂದೇಶಗಳನ್ನು ಸ್ಮರಿಸಲಾಯಿತು. ಅಂದು  ಬೆಳಿಗ್ಗೆ 8:30 ಕ್ಕೆ ನಾನು ಶಾಲೆಗೆ ಹಾಜರಾದೆನು. ನಮ್ಮ ವಿದ್ಯಾರ್ಥಿಗಳಲ್ಲಿ ಒಬ್ಬರು ಮಂತ್ರಗಳನ್ನು ಪಠಿಸಿ ಪೂಜೆಗೆ ಚಾಲನೆ ನೀಡಿದರು. ನಮ್ಮ ಹೆಚ್‌ಎಮ್‌ ಸರ್ ಕನಕದಾಸರ ಜೀವನವನ್ನು ವಿವರಿಸಿ, ಅವರ ಭಕ್ತಿಗಣ ಮತ್ತು ಸಮಾಜದಲ್ಲಿ ಉಂಟುಮಾಡಿದ ಬದಲಾವಣೆಗಳನ್ನು ಕುರಿತು ಮಾತನಾಡಿದರು. ನಂತರ, ಕೆಲವು ವಿದ್ಯಾರ್ಥಿಗಳು ಭಾಷಣಗಳನ್ನು ಮಾಡಿದರು ಮತ್ತು ಕನಕದಾಸರ ಭಕ್ತಿಗೀತೆಗಳನ್ನು ಹಾಡಿದರು. ನಂತರ ನಾವೆಲ್ಲರೂ ಸೇರಿ ಕನಕದಾಸರ ಹಾಡುಗಳನ್ನು ಆಲಿಸಿದೆವು. ಇವುಗಳಲ್ಲಿ "ಕುಲ ಕುಲವೆಂದು ಹೊಡೆದಾಡದಿರಿ" , "ದಾಸನಾಗು ವಿಶೇಷನಾಗು " ಮತ್ತು "ನಿನ್ನಂತಗಬೇಕೊ ಕನಕ" ಎಂಬ ಕನಕದಾಸರ ಪ್ರಸಿದ್ಧ ಗೀತೆಗಳನ್ನು ಆಲಿಸಿದೆವು.  ಈ ಹಾಡುಗಳು ಕನಕದಾಸರ ಭಕ್ತಿಯ ಹಾಗೂ ಸಾಮಾಜಿಕ ಸಮಾನತೆಯ ಸಂದೇಶಗಳನ್ನು ಸಾರುತ್ತಿವೆ .

ಮುದ್ದಾಗಿ ರಚಿಸಿದ ಮಕ್ಕಳ ಮನೆಗಳು

Image
                                              ಸರಕಾರಿ ಹಿರಿಯ ಪ್ರಾಥಮಿಕ್  ಶಾಲೆ                                                                        ಯಾದವಾಡ                                                   ಮುದ್ದಾಗಿ ರಚಿಸಿದ ಮಕ್ಕಳ ಮನೆಗಳು                                              ಸರಕಾರಿ ಹಿರಿಯ ಪ್ರಾಥಮಿಕ್  ಶಾಲೆ ಯಾದವಾಡ ದಲ್ಲಿ  ೫ ನೇ ತರಗತಿ ಮಕ್ಕಳಿಗೆ ನಿನ್ನೆ ತರಗತಿಯಲ್ಲಿ ಪರಿಸರ ಅದ್ಯಾನದ ಕುರಿತು  ಜನವಸತಿ ಪಾಠಕ್ಕೆ ಸಂದಿಸಿದ ಕೆಲವು ವಿಷಯಗಳ ಬಗ್ಗೆ ವಿವರಿಸಲಾಗಿತ್ತು. ಮತ್...

ಕರುನಾಡು ಕಂಡ ಅಪ್ರತಿಮ ದಾಸ ನಮ್ಮ ಕನಕದಾಸ

Image
               ನಾವು 18/11/2024 ರಂದು ಕನಕದಾಸರ ಜಯಂತಿಯನ್ನು ಆಚರಿಸಿದೆವು.  ಬೆಳಿಗ್ಗೆ ಮಕ್ಕಳು ಹೂಗಳೊಂದಿಗೆ ಶಾಲೆಗೆ ಬಂದಿದ್ದರು. ಎಲ್ಲ  ಶಿಕ್ಷಕರು ಪೂಜಾ ಸಿದ್ಧತೆಗಳನ್ನು ಮಾಡಿ, ನಂತರ ಪೂಜೆಯನ್ನು ಶುರುಮಾಡಿದೆವು. ಆಮೇಲೆ ಶಿಕ್ಷಕರು ಕನಕದಾಸರ ಬಗ್ಗೆ ಒಂದಿಷ್ಟು ಮಾಹಿತಿ  ನೀಡಿದರು. ನಾನು ಕೂಡ ಅವರ  ಕೀರ್ತನೆಗಳನ್ನು ಹೇಳಿದೆ. ಮಕ್ಕಳು ತುಂಬಾ ಖುಷಿ ಪಟ್ಟರು.         ದಾಸರ ಬಗ್ಗೆ ಹೇಳಲು ತುಂಬಾ ಖುಷಿ ಆಯಿತು. ಪೂಜೆ ಮುಗಿದ ನಂತರ ಎಲ್ಲ ಮಕ್ಕಳು ಉಪಹಾರವನ್ನು ಸೇವಿಸಿದರು. ನಂತರ ಅವರ ಕೀರ್ತನೆಗಳನ್ನು ಎಲ್ಲರು ಹಾಡಿದರು ( ಎಲ್ಲರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ) ಎಂತ ಅದ್ಬುತವಾದ ಸಾಲುಗಳು ಬರೆದ  ದಾಸರಿಗೆ ನಾನು ಶರಣಾದೆ.                            ಕನಕ ಎಂದರೆ ಕರುನಾಡ ಕಣಜ                                          ಕನಕ ಎಂದರೆ ಕರುನಾಡ ಕಣ್ಮಣಿ                        ...

ಮಗುವಿನ ಯಶಸ್ಸಿನ ಪ್ರಪಂಚದ ಮೊದಲ ಕನಸಿನ ಮೆಟ್ಟಿಲು

Image
 ಮಗುವಿನ ಯಶಸ್ಸಿನ ಪ್ರಪಂಚದ ಮೊದಲ ಕನಸಿನ ಮೆಟ್ಟಿಲು  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲೇ ಗ್ರಾಮದಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಗುರುನಾಥ್ ಪೂಜಾರ್, ವಿಶೇಷ ವಿಕಲಚೇತನ ಮಕ್ಕಳ ,ಜಿಲ್ಲಾಮಟ್ಟದ ಚಕ್ರ ಎಸೆತ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದು .ಇದು ಒಂದು ಶಾಲೆಗೆ ,ಊರಿಗೆ ಮತ್ತು ವಿಶೇಷವಾಗಿ ನಮ್ಮ ಶಾಲೆಯ ಪ್ರಧಾನ ಗುರುಗಳಿಗೆ ಮತ್ತು ನಮ್ಮೆಲ್ಲ ಗುರು ಬಳಗದವರಿಗೆ ವಿಶೇಷವಾದ ಸಿಹಿ ವಿಷಯವಾಗಿದೆ.ಧನ್ಯವಾದಗಳು

ಕನಕದಾಸರ ಜಯಂತಿ ಆಚರಣೆ

Image
                          ಕನಕದಾಸರ  ಜಯಂತಿ  ಆಚರಣೆ                                  ಸರಕಾರಿ ಹಿರಿಯ ಪ್ರಾಥಮಿಕ್ ಶಾಲೆ ಯಾದವಾಡ                                                                         ೧೮ -೧೧ -೨೦೨೪  ರಂದು ಸರಕಾರಿ ಹಿರಿಯ  ಪ್ರಾಥಮಿಕ ಶಾಲೆ ಯಾದವಾಡ ದಲ್ಲಿ  ಕನಕದಾಸರ  ಜನ್ಮ ದಿನವನ್ನು ಆಚರಿಸಲಾಯಿತು. ಎಲ್ಲ ಮಕ್ಕಳು ಬೆಳ್ಳಗೆ ಬೇಗ ಬಂದಿದ್ದರು.ಬಂದು ವೇದಿಕೆಯನ್ನು ಅಲಂಕರಿಸಿದ್ದರು. ಮತ್ತು ಫೋಟೋ ಗಳನ್ನೂ ಇತ್ತು  ರೆಡಿ ಮಾಡಿದರು. ಮತ್ತು ನಂತರ ಮಕ್ಕಳು ಭಾಷಣ ಮಾಡಿದರು.  ಮತ್ತು ಶಿಕ್ಷಕರು ಕೂಡ ಮಾತನಾಡಿದರು.ಮತ್ತು ಮಕ್ಕಳು ಕನಕದಾಸರ ಭಾವಚಿತ್ರ ಅಂಟಿಸಿ ಅವರ ಬಗ್ಗೆ ಬರೆದಿದ್ದರು. ಮತ್ತು  ತುಂಬಾ ಸಂತೋಷದಿಂದ್ ನಡೆಸಿಕೊಟ್ಟರು. Thank you.....

Kanakadasar Jayanti

Image
ದಾಸ ಶ್ರೇಷ್ಠ, ಸಂತ ಕವಿ ಕನಕದಾಸರು                     On 18th November 2024 we celebrated Kanakadasa Jayanti. First we decorated the board, then we did pooja for Kanakadasa. After that few students taught about Kanakadasa. Then one of the teachers told about kanakada's life history and also told about the Krishna and Kanakadasa story then we teachers sung songs of Kanakadasa. One of our students wore kanakadasa's dress . He looked very beautiful and he also gave a speech about Kanakadasa. that i got to know more information about Kanakadasa. The day went well.

ಮುಗ್ಧ ಮನಸ್ಸಿನ ಹೂವುಗಳು ತುಂಟತನದ ಕಂಗಳು

Image
 ಮುಗ್ಧ ಮನಸ್ಸಿನ ಹೂವುಗಳು     ತುಂಟತನದ ಕಂಗಳು ಮುಗ್ಧ ಮನಸ್ಸಿನ ಹೂವುಗಳು ತಾನೊಂದು, ತನಗೊಂದು , ತನದೊಂದು ಎಂದು ಆಡುವಾಗ ಗದ್ದಲ ದಂತೆ ಎನಿಸುತ್ತದೆ. ಅದೇ ಮಧುರವಾಗಿ ಹಾಡುತ್ತಾ,ನಲಿಯುತ್ತಾ,ಕುಣಿಯುತ್ತಾ ಆಡಿದಂತೆ ಶಾಲೆಗೆ ಒಂದು ಕಳೆ ಬಂದಂತೆ ಎನಿಸುತ್ತದೆ. ಆಟವಾಡಿ ಪಾಠಮುಗಿದ ನಂತರ ಅವರಾಡುವ ಮಾತು ಸವಿ ಬೆಲ್ಲದಂತೆನಿಸುತ್ತದೆ. ಅವರಾಡುವ ಮಾತೆಲ್ಲ ಮುಗಿದಮೇಲೆ ನಾಚಿಕೆಯಿಂದನೂ ಅಥವಾ ಭಯಂದಿಂದಾನೋ ಸುಮ್ಮನೆ ಕುಳಿತಾಗ ಶಾಲೆಯು ಪೂರ್ಣ ಸ್ತಬ್ದವಾಗುತ್ತದೆ. ಆ ಮೌನದಲಿ ಮುಖವು ಬುದ್ದನಂತೆ ಕಾಣುತ್ತಿರುತ್ತದೆ.

Parents Teacher meeting

Image
  ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆ ಹೆಬ್ಬಳ್ಳಿ .ದಿನಾಂಕ 20-11-2024 ರಂದು ಪಾಲಕ ಪೋಷಕರ ಸಭೆ ನಡೆಯಿತು. ಈ ಒಂದು ಸಭೆಗೆ SDMCಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಾಜರಿದ್ದರು .ಜೊತೆಗೆ ಶಾಲೆಯ ಸಾಮಾನ್ಯ ಸ್ಥಾಯಿ ಸಮಿತಿಯ ಸದಸ್ಯ ರು ಹಾಜರಿದ್ದರು. ಕೆಜಿಎಸ್ ಶಾಲೆಯ ಎಸ್ ಡಿಎಂಸಿ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ವರು ತಾವು ಕಲಿತ ಶಾಲೆಯ ಬಗ್ಗೆ ಅವರ ಅಪಾರ ಕಾಳಜಿ ಗೌರವ ಹೊಂದಿ ಶಾಲೆಗೆ ಆಗಮಿಸಿ, ಶಾಲೆಯ ಅಭಿವೃದ್ಧಿ ಕಾರ್ಯಗಳು ಶೈಕ್ಷಣಿಕ ಪ್ರಗತಿ ಹಾಗೂ ಭೌತಿಕ ಸುಧಾರಣೆಗಳ ಕುರಿತು ಸೂಕ್ತ ಸಲಹೆ ಮಾರ್ಗದರ್ಶನ ನೀಡಿದರು. ಸಭೆಗೆ ಆಗಮಿಸಿದ ಪಾಲಕ ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ವಿಚಾರಿಸಿ ಸೂಕ್ತ ಮಾರ್ಗದರ್ಶನ ಪಡೆದರು. ಶಾಲೆಯ ಸ್ಮಾರ್ಟ್ ಕ್ಲಾಸ್ ನಿಯಮಿತವಾಗಿ ನಡೆಯಲು ಜೊತೆಗೆ ಶಾಲೆಯ ಅಭಿವೃದ್ಧಿ  ಶೈಕ್ಷಣಿಕ ಪ್ರಗತಿ ಕಾರ್ಯಗಳ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು. 

Experiments gives new experience

Image
               Today we did two science experiments on How heat causes air particles to move upward.  This concept was understood making two experiments one is we made 4 groups all students came with experiment materials.  Then I explained procedure of the experiments students follow.  First all students cut the paper round shape then they hanged that paper to the pen then under this paper we put candle in this time paper moves because in that place candle heat the surrounding air so air moves upward in this reason paper rotate.                Another teacher also did another experiments on the same topics but used different materials.  all students are very happy they know how we understood one concept with different ways.  Today experience was amazing...                                     ...

My classroom

Image
 My classroom                         I took 6th class. We all class start with our class motto song. in this class I told about Fractions first unit of math. in this chapter I told about introduction of fractions and fractions of number line . Types of fraction, improper and mixed fractions, Equivalent fraction.  I told solved some problems and some real life examples and we played some fractions reelected activity. all my students understand easily. In this class all my students involved. It was made me very happy. Because the students who were lazy and didn't do their work those students also involved my class . They came to the board and solve the problems. When all this is possible, that is, when we give the students a chance and give examples from their daily lives, then even the students who did not do their works  their students also did their works.  totally that day experience was very we...

ಮಕ್ಕಳು 100 ದಿನದ ಓದುವ ಆಂದೋಲನ ....

Image
  ಸ ಹಿ ಪ್ರಾ ಶಾಲೆ ಕನವಿಹೊನ್ನಾಪುರ ಮಕ್ಕಳು 100 ದಿನದ ಓದುವ ಆಂದೋಲನ..                                                                                       ಮಕ್ಕಳು 100 ದಿನದ ಓದುವ ಆಂದೋಲನ ಕುರಿತು ಶನಿವಾರ ಎಲ್ಲ ರಾಜ್ಯದ ಉಡುಗೆ ತೊಡುಗೆಗಳ ಹಾಕಿ ಕೊಂಡು ಅದರ ಬಗ್ಗೆ ಹೇಳುತ್ತಾ ಶಾಲೆಗೆ ಬಂದಿದ್ದರು ಕರ್ನಾಟಕ ಕೇರಳ ತಮಿಳುನಾಡು ಜಮ್ಮು ಮತ್ತು ಕಾಶ್ಮೀರ ರಾಜಸ್ಥಾನ್ ಗುಜರಾತ್ ಹೀಗೆ ಹಲವು ರಾಜ್ಯಗಳು ಉಡುಗೆ ತೊಡುಗೆಗಳನ್ನು ಹಾಕಿಕೊಂಡು ನಮ್ಮ ಭಾರತ ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿದು ಎಲ್ಲ ಮುದ್ದು ಮಕ್ಕಳು ಸಹ ತುಂಬಾ ಅಂಗವಾಗಿ ಕಾಣುತ್ತಿದ್ದರು ಇದನ್ನು ನೋಡಿ ನಮಗೂ ಸಹ ತುಂಬಾ ಸಂತೋಷವಾಯಿತು ಅವರಿಗೆ ಹಿಂದಿನ ದಿನವೇ ಯಾರಿಗೆ ಹಾಕಿಕೊಂಡು ಬರಬೇಕೆಂದು ಹೇಳಿ ಅದೇ ತರಹ ಮಕ್ಕಳು ಸಹ ತುಂಬಾ ಆಸಕ್ತಿಯಿಂದ ಆಯಾ ರಾಜ್ಯದ ಬಟ್ಟೆಗಳನ್ನು ಧರಿಸಿ. ಧನ್ಯವಾದಗಳೊಂದಿಗೆ....

ಪರಸ್ಪರ ಅವಲಂಬನ ಮೇಲೆ ಚಟುವಟಿಕೆ...

Image
 ಸ ಹಿ ಪ್ರಾ ಶಾಲೆ ಕನವಿಹೊನ್ನಾಪುರ ಪರಸ್ಪರ ಅವಲಂಬನ ಮೇಲೆ ಚಟುವಟಿಕೆ   ಸ ಹಿ ಪ್ರಾ ಶಾಲೆ ಕನವಿ ಹೊನ್ನಾಪುರ  ಪರಸ್ಪರ ಅವಲಂಬನ ಮೇಲೆ ಚಟುವಟಿಕೆ ನಮ್ಮ ಶಾಲೆಯ ಆರನೇ ತರಗತಿಯ ವಿದ್ಯಾರ್ಥಿಗಳು ಅಪನ ದೇಶ ಕಾರ್ಯಕ್ರಮದ ಕುರಿತು ಪರಸ್ಪರ ಅವಲಂಬನೆ ಮೇಲೆ ಒಂದು ಸಣ್ಣ ಚಟುವಟಿಕೆಯನ್ನು ನೀಡಲಾಯಿತು ಇದರಲ್ಲಿ ಮಕ್ಕಳು ರೈತ ಸೈನಿಕ ಟೈಲರ್ ವಕೀಲರು ವೈದ್ಯ ಶಿಕ್ಷಕ ವ್ಯಾಪಾರಿ ಗಳ ಪಾತ್ರ ವಹಿಸಿಕೊಂಡು ಯಾರು ಯಾರ ಮೇಲೆ ಅವಲಂಬಿತರಾಗಿರುತ್ತಾರೆ ಎಂದು ಹೇಳಿ ಎಲ್ಲರೂ ಸಹ ಒಬ್ಬರ ಮೇಲೆ ಒಬ್ಬರು ಅವಲಂಬನೆ ಯಾಗಿರುತ್ತಾರೆ. ಇದರ ಪೂರ್ತಿ ಸಾರಾಂಶವೆಂದರೆ ನಾವು ಮಾಡುವ ಕೆಲಸ ಒಬ್ಬರಿಗೆ ಇನ್ನೊಬ್ಬರು ಪರಸ್ಪರ ಅವಲಂಬಿತರಾಗಿರುತ್ತಾರೆ ಎಂಬುವುದನ್ನು ಈ ಮುಖಾಂತರ ಅಥವಾ ಈ ಚಟುವಟಿಕೆಯ ಮುಖಾಂತರ ತಿಳಿಸಲಾಗಿದೆ ಇದು ಕೂಡ ಅದ್ಭುತ ಚಟುವಟಿಕೆ ಆಗಿದ್ದು ಮಕ್ಕಳ ಆಸಕ್ತಿ ತುಂಬಾ ಖುಷಿ ನೀಡಿತು ಧನ್ಯವಾದಗಳೊಂದಿಗೆ.....

Kanakadasar Jayanti

Image
 Kanakadasar Jayanti                        On 18th November we have celebrated Kanakadasar Jayanti . First I did board decoration. Next we all did pooja for the Kanakadasar photo. Then we talked about the life history of Kanakadasar. and our senior teacher told about his story. In that moment I also learn his story. students also learn many things and his stories. Then we distributed the chikki for all students. Then we all took one group photo. That day experience was very well. Thank you..

ಒನಕೆ ಓಬವ್ವ ಮತ್ತು ಮೌಲಾನ ಅಬುಲ್ ಕಲಾಂ ಆಜಾದ್ ಅವರ ಜನ್ಮ ದಿನಾಚರಣೆ

Image
 ನವೆಂಬರ್ 11 ರಂದು ಒನಕೆ ಓಬವ್ವ ಮತ್ತು ಮೌಲಾನ ಅಬುಲ್ ಕಲಾಂ ಆಜಾದ್ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಒನಕೆ ಓಬವ್ವ ವೀರ ಸಾಹಸಗಾತೆಯನ್ನು ಮತ್ತು ಅವರ್ ಜೀವನ್ ಚರಿತ್ರೆಯನ್ನು ಹೇಳುವುದರ್ ಮೂಲಕ ಅವರ್ ಸವಿ ನೆನಪನ್ನು ನೆನೆದು ಸ್ಮರಣೆ ಮಾಡಲಾಯಿತು. ಮತ್ತು ಮೌಲಾನ ಅಬ್ದುಲ್ ಕಲಾಂ ಆಜಾದ್ ಅವರ ಜೀವನದ ಕೆಲವು ಆದರ್ಶಗಳನ್ನು ನೆನೆದು ಮತ್ತು ಜೀವನದಲ್ಲಿ ಅವರ್ ಆದರ್ಶ ಗುಣಗಳನ್ನು ಪರಿಪಾಲನೆ ಮಾಡುತ್ತೇವೆ ಎಂದು ಮನನ ಮಾಡಿ ಮಕ್ಕಳು ಸಹ ಅವರ್ ಸವಿನೆನಪುಗಳು ಚುಟುಕುಗಳನ್ನು ತೊದಲು ನುಡಿಗಳ ಮೂಲಕ ಹೇಳಿ ಇಂದಿನ ಕಾರ್ಯಕ್ರಮಕ್ಕೆ ಮೆರಗು ತಂದರು. ಧನ್ಯವಾದಗಳು

ಹುಟ್ಟು ಹಬ್ಬ ಆಚರಿಸಿಕೊಳ್ಳುವಲ್ಲೆ ಸಸಿನೆಡುವ ಉತ್ತಮ ವಿಷಯ

Image
 ಹುಟ್ಟು ಹಬ್ಬವನ್ನು ಸಸಿನೆಡುವ ಮೂಲಕ ಆಚರಿಸಿಕೊಳ್ಳುವ ಉತ್ತಮ ವಿಷಯ ✨          ಸರಕಾರಿ ಹಿರಿಯ ಪ್ರಾಥಮಿಕ                 ಶಾಲೆ ಕಲ್ಲೆ ಎಲ್ಲ ಮಕ್ಕಳೂ ತಮ್ಮ ಪ್ರತಿ ಹುಟ್ಟು ಹಬ್ಬವನ್ನು ಸಿಹಿ ತಿಂಡಿ ಮತ್ತು ಕೇಕ್ ಕಟ್ ಮಾಡುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿಕೊಂಡರೆ ,ನಮ್ಮ ಶಾಲೆಯ ಪ್ರತಿ ವಿದ್ಯಾರ್ಥಿಗಳು ಮಾತ್ರ ತಮ್ಮ ಪ್ರತಿ ವರ್ಷ ಹುಟ್ಟು ಹಬ್ಬದ ಪ್ರಯುಕ್ತವಾಗಿ ಪ್ರತಿಯೊಬ್ಬರೂ ಸಸಿಯನ್ನು ನೆಟ್ಟು ತಮ್ಮ ಸಂತೋಷದ ದಿನವನ್ನು ಸವಿಯುತ್ತಾರೆ .ಇಂದು ಎಲ್ಲ ಸಸಿಗಳು ಕಣ್ಣನ್ನು ಕಂಗೊಳಿಸುವ ಹೂ ಅರಳಿ ಕ್ಷಣ ✨ ಇದು ನಮ್ಮ ಶಾಲೆಯ ಪ್ರಧಾನ ಗುರುಗಳಾದ ಶ್ರೀ. N.G. ಗುರುಪುತ್ರನವರವರ್ ಮಾರ್ಗದರ್ಶನದಿಂದ ವಿದ್ಯಾರ್ಥಿಗಳಿಗೆ  ರೂಢಿಕೆಯಾಗಿದ್ದು  , ಊರಿನ ಮೆಚ್ಚುಗೆಗೆ ಪಾತ್ರವಾಗಿದ್ದಾರೆ . ಪ್ರತಿಯೊಂದು ವಿದ್ಯಾರ್ಥಿಯು ಗಿಡ ನೆಡುವುದರ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಾರೆ .  ಇದು ಒಂದು ಒಳ್ಳೆಯ ಮತ್ತು ಉತ್ತಮ ರೀತಿಯಲ್ಲಿ  ಪರಿಸರವನ್ನು ಸಂರಕ್ಷಿಸುವ  ಸಲುವಾಗಿ ಅವರ ತಯಾರಿ ಈಗಿನಿಂದಲೇ ಇದ್ದುದರಿಂದ ನಾಳೆಯ ಭವಿಷ್ಯತ್ತಿನಲ್ಲಿ ಅವರ ಚಿಂತನೆಗಳು ನಿರಂತರವಾಗಿ ಉತ್ತಮವಾದ ಭವಿಷ್ಯ ರೂಪಿಸುವಲ್ಲಿ ಒಂದಾಗುತ್ತಾ ,ಅವರ ಪ್ರಕೃತಿಯ ಕಾಳಜಿಯನ್ನು ತೋರಿಸುತ್ತದೆ.

ಮಕ್ಕಳ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಮನರಂಜನೆ ಕಾರ್ಯಕ್ರಮ

Image
 ಮಕ್ಕಳ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ  ಮನರಂಜನೆ ಕಾರ್ಯಕ್ರಮದಲ್ಲಿ ಎಲ್ಲ ಮಕ್ಕಳೂ ಕೂಡ ತುಂಬಾ ಚೆನ್ನಾಗಿ ಆಟ ಆಡಿ ಆ ಕಾರ್ಯಕ್ರಮಕ್ಕೆ ಮೆರಗನ್ನು ತಂದು ಕೊಟ್ಟರು. ಆ ಆಟದ ಸ್ಪರ್ಧೆಯಲ್ಲಿ ಸಂತೋಷವಾಗಿ ಮತ್ತು ಕೂಲಂಕುಷವಾಗಿ  ಭಾಗವಹಿಸಿ  ವಿದ್ಯಾರ್ಥಿಗಳು ಕೆಲವು ಬಹುಮಾನಗಳನ್ನು ಸಹ ತೆಗೇದುಕೊಳ್ಳುವಲ್ಲಿ ಭಾಜನರಾದರು. ಇಂದು ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನಮ್ಮ ಶಾಲೆಯ ಹಿರಿಯ ಗುರುಗಳು ಮತ್ತು ಊರಿನ ಗಣ್ಯ ಮಾನ್ಯ ವ್ಯಕ್ತಿಗಳು ,ವಿಶೇಷವಾಗಿ ಊರಿನ ಗಣ್ಯ ವ್ಯಕ್ತಿಗಳಲ್ಲಿ ಮುಖ್ಯರದ ವಸಂತ ರಾವ್ ಕುಲಕರ್ಣಿ ಅವರು ಮೊದಲಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಎಲ್ಲ ಮಕ್ಕಳೂ ತುಂಬಾ ಸಂತೋಷದಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು. ಧನ್ಯವಾದಗಳು

ಮಕ್ಕಳ ದಿನಾಚರಣೆ

Image
 ಮಕ್ಕಳ ದಿನಾಚರಣೆಯಲ್ಲಿ ಶಾಲೆಯ ಎಲ್ಲ ಸಂಸತ್ ಅಧ್ಯಕ್ಷರು, ಉಪಾಧ್ಯಕ್ಷರು ,ಮತ್ತು ಸದಸ್ಯರೂ ತಮ್ಮ ತಮ್ಮ ಸ್ಥಾನವನ್ನು ನಾವೆಲ್ಲ ಗುರುವೃಂದದವರು  ಹೂಗುಚ್ಚ  ನೀಡುವುದರ ಜೊತೆಗೆ ತಮ್ಮ ಸ್ಥಾನವನ್ನು ಎಲ್ಲ ಸಂಸತ್ ಅಧೀಕ್ಷಕರು ಅಲಂಕರಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಯು ಸಹ ತಮ್ಮ ಅತಿಥಿ ಭಾಷಣವನ್ನು ಆರಂಭಿಸಿದರು ಮತ್ತು ಕೆಲ ಹಿತ ನುಡಿಗಳನ್ನು ಹೇಳಿದರು. ಮಕ್ಕಳಿಗೆ ಸಿಹಿ ಕೋಡುವುದರ ಮೂಲಕ ಈ ದಿನದ ಆರಂಭವಾಯಿತು ಬಹಳ ಸುಂದರವಾಗಿ ಮತ್ತು ತುಂಬಾ ಸೊಗಸಾಗಿ ಗತ್ತು ಗಾಂಭೀರ್ಯದಿಂದ ಮಕ್ಕಳು ತಮ್ಮ ಪಾತ್ರವನ್ನು ನಿರ್ವಹಿಸಿದರು. ಧನ್ಯವಾದಗಳು

ಕರ್ನಾಟಕ ರಾಜ್ಯೋತ್ಸವ ಸಂಭ್ರಮ

Image
ಕರ್ನಾಟಕ  ರಾಜ್ಯೋತ್ಸವ ಸಂಭ್ರಮ            ಕರ್ನಾಟಕ ರಾಜ್ಯೋತ್ಸವ ಆಚರಣೆ ನಮ್ಮ ಸ ಹಿ ಪ್ರ ಶಾಲೆ ಹಳ್ಳಿಗೇರಿ ಯಲ್ಲಿ ತುಂಬಾ ಚನ್ನಾಗಿ ನಡೆಯಿತು. ಈ ಒಂದು ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಸ್ದಮ್ಚ್ ಸದಸ್ಯರು ಹಾಗೂ ಗ್ರಾಮದ ಹಿರಿಯರು ಮತ್ತು ಪಾಲಕರು ಸಹ ಹಾಜರಿದ್ದರು.         ನಮ್ಮ ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅನೇಕ ಕಾರ್ಯಕ್ರಮಗಳ ತಯಾರಿ ಮಾಡಿಕೊಂಡಿದ್ದರು. ೧ ರಿಂದ ೫ ತರಗತಿಯ ಮಕ್ಕಳು ವೇಶಬೂಶಣ ಮಾಡಿಕೊಂಡರೆ ೬ ರಿಂದ ೮ ತರಗತಿ ಮಕ್ಕಳು ಹಾಡು ನೃತ್ಯದ ಕಾರ್ಯಕ್ರಮವನ್ನು ಹೊಂದಿದ್ದರು.      ಎಲ್ಲ ಕಾರ್ಯಕ್ರಮಗಳು ತುಂಬಾ ಚನ್ನಾಗಿ ನಡೆದವು ಮಕ್ಕಳು ಕೂಡ ತುಂಬಾ ಉತ್ಸುಕಃ ದಿಂದ ಭಾಗವಹಿಸಿದ್ದರು. ಹಾಗೆ ಖುಷಿ ಪಟ್ಟರು.     

100 ದಿನಗಳ ಓದುವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ

Image
೧೦೦ ದಿನಗಳ ಓದುವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ         ಈ ಒಂದು ಕಾರ್ಯಕ್ರಮ ಕರ್ನಾಟಕ ಸರಕಾರದ ಅನುಸಾರ ೧೦೦ ದಿನಗಳ ಅಭಿಯಾನ ಜಾರಿಗೆ ಬಂದಿದೆ. ಈ ಒಂದು ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪುಸ್ತಕಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದು ಮತ್ತು ಪುಸ್ತಕಗಳ ಪ್ರಾಮುಕ್ಯಾತೆ ತಿಳಿಸಿಕೊಡುವುದಾಗಿದೆ.ಈ ಕಾರ್ಯಕ್ರಮದಲ್ಲಿ ನಾವು ಶಿಕ್ಷಕರು ಒಟ್ಟಿಗೆ ಸೇರಿ ಕಾರ್ಯಕ್ರಮವನ್ನು ಚಾಲನೆ ಮಾಡಿದೆವು. ಮಕ್ಕಳಿಗೆ ಪುಸ್ತಕಗಳ ಬಗ್ಗೆ ಅದರ ಪ್ರಾಮುಕ್ಯತೇ ಬಗ್ಗೆ ನಮ್ಮ ಸಹ ಶಿಕ್ಷಕರು ತಿಳಿಸಿ ಕೊಟ್ಟರು.           ಮಕ್ಕ್ಕಳು ಸಹ ಬಹಳ ಆಸಕ್ತಿ ಇಂದ ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಸಿ ಅವರು ಸಹ ಮಾತನಾಡಿದರು. ನಂತರ ಎಲ್ಲ ಮಕ್ಕಳು ಒಂದೊಂದು ಪುಸ್ತಕ ಓದುದರ ಮೂಲಕ ಕಾರ್ಯಕ್ರಮವನ್ನು ಸರಾಗವಾಗಿ ನಡೆಸಿ ಕೊಟ್ಟರು.                         

Cebration of Children's day

Image
                                                        Cebration of Children's day                                     We celebrated the children's day November 15th in our school HPS Narendra in that term we conducted the different game for students later on we celebration of the children's day worship of the Jawaharlal Nehru photo letter on a students will come in the all guest chief remember all sdmc members all teachers or students it was a nice letter on listening the pandit Jawaharlal Nehru life story and their inspiration talks later on letter on our 5th 6th 7th students give speech about the pandit Jawaharlal Nehru and their achievements it was a look good later on our teachers and chief SDMC members also talk about the celebration of the pandit J...

Children's day Games

Image
                                                          Children's day Games                                        November 14 we had conducted the games to our students 12 7th week conducted the different game for a students basically a students like very much the games they like coco Kabaddi running race and playing cricket football and etc so we conducted the games for the purpose of children's day celebration after that we gave the some prices of for winners first standard students played the game froge junmp game. 2nd standard students play the running race. 3rd standard. One  leg running race. First restaurants are the lake and shore, 6th standard students are playing the one leg running back walking, and  fifth students all a...

ಮಕ್ಕಳ ದಿನಚನರಣೆಯ ಸಮಾರಂಭ ಕುಮ್ರವತರ ಚಲನಚಿತ್ರ

Image
 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನವಿಹೊನ್ನಪೂರ  ಮಕ್ಕಳ ದಿನಚನರಣೆಯ ಸಮಾರಂಭ ಕುಮ್ರವತರ ಚಲನಚಿತ್ರ    ಕುಮ್ರವತರ ಚಲನಚಿತ್ರ  ನಮ್ಮ ಶಾಲೆ ಯಲ್ಲಿ ಅಂದರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚಣೆಯನ್ನು ನವೆಂಬರ್ 14 ರಂದು ಮಕ್ಕಳ ದಿನಾಚರಣೆ ಅಂಗವಾಗಿ ಸರಕಾರದಿಂದಲೇ ಕುಮ್ರವಾತರ ಚಲನಚಿತ್ರವನ್ನು ಮಕ್ಕಳಿಗೆ ತಿರಿಸ್ಸಬೇಕಿತ್ತು ಈ ಚಿತ್ರವು ಮಹಾತ್ಮ ಗಾಂಧೀಜಿಯವರು ಮತ್ತು ಜ್ಜವಲಾಲ ನೆಹರು ಅವರು ಕುರಿತು ಇದ್ದು ಮಕ್ಕಳೆಲ್ಲಾ ತುಂಬಾ ಖುಷಿ ಇಂದ ವೀಕ್ಷಿಸಿದರು ಈ ಚಿತ್ರದ ಮೂಲಕ ಜವಲಾಲ ನೆಹರು ಅವರು ಹೇಗೆ ಭಾರತದ ಮೊದಲ ಪ್ರದಾನ ಮಂತ್ರಿ ಆದರೂ ಅಂತ ಮಕ್ಕಳಿಗೆ ತಿಳಿಯಿತು ಹಾಗೆಯೇ ತುಂಬಾ ಖುಷಿಯಾಯಿತು. ಧನ್ಯವಾದಗಳು...

ಶಿಕ್ಷಕರ ಚಿತ್ರಕಲಾ ಸ್ಪರ್ಧೆ.....

Image
  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನವಿಹೊನ್ನಪೂರ  ಶಿಕ್ಷಕರ ಚಿತ್ರಕಲಾ ಸ್ಪರ್ಧ \                                      ನಮ್ಮ ಶಾಲೆ ಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನವಿಹೊನ್ನಪೂರ  ಶಿಕ್ಷಕಿಯರು ಆಗಿರುವರು ಅವರು ತಾಲೂಕು ಮಟ್ಟದ ಶಿಕ್ಷಕರ ಚಿತ್ರಕಲಾ ಸ್ಪರ್ಧೆ ಯಲ್ಲಿ ಸ್ಥಾನವನ್ನು ತೆಗುದುಕೊಂಡಿದಕ್ಕೆ ನಮಗೆಲ್ಲರಿಗೂ ತುಂಬಾ ಸಂತೋಷದಿಂದ ಅವರಿಗೂ ಹೂವನ್ನು ನೀಡುವುದರ ಮೂಲಕ ಅವರಿಗೆ ಹಾರೈಸಿದೇವು ಅವರು ಕೂಡ ತುಂಬಾ ಸಂತೋಷಗೊಂಡು ನಮ್ಮ ಶಾಲೆಯ ಶಿಕ್ಷಕರ ಬಗ್ಗೆ ನಮಗೂ ಕೂಡ ಹೆಮ್ಮೆ ಆಗಿದೆ ಇದು ನಮಗೆಲ್ಲರಿಗೂ ಸಂತೋಷವಾಗಿ ದಿನವಾಗಿತ್ತು.  ಧನ್ಯವಾದಗಳು....