ನಮ್ಮ ಶಾಲೆಯ ಗಣಪ 💦💦

                                                            ನಮ್ಮ ಶಾಲೆಯ ಗಣಪ  💦💦

ನಮ್ಮ ಶಾಲೆಯಲ್ಲಿ ಶುಕ್ರವಾರದಿಂದಲೂ ನಾವು ಗೌರಿ ಗಣೇಶ ಹಬ್ಬಕ್ಕೆ  ತಯಾರಿ ನಡೆಸುತ್ತಿದ್ದೇವೆ ನಮ್ಮ ಏಳನೇ ತರಗತಿ ,ಮತ್ತು ಆರನೇ ತರಗತಿಯ ಮಕ್ಕಳು, ನಮ್ಮ ಶಿಕ್ಷಕರು ಗಣೇಶ ಹಬ್ಬದ ಆ ಮಂಟಪವನ್ನು ಬೇಕಾದ ಸಾಮಗ್ರಿಗಳಿಂದ ಅಲಂಕಾರಗೊಳಿಸಿದರು ಮತ್ತು ನಾನು ಕಪ್ಪು ಹಲಗೆ ಮೇಲೆ ಸುಂದರವಾದ ನವಿಲುಗಳನ್ನು ಬಿಡಿಸಿದ್ದೀನಿ ಮರುದಿನ ನಮ್ಮ ಶಾಲೆಯ ಎಲ್ಲಾ ಶಿಕ್ಷಕರು ಬೇಗ ಬಂದು ಗಣೇಶನ ಮುಂದೆ ರಂಗೋಲಿಯನ್ನು ಹಾಕಿ ಉಳಿದಂತಹ ಎಲ್ಲಾ ಕೆಲಸಗಳನ್ನು ಮುಗಿಸಿ ತದನಂತರ ನಾವು ಊರಿನೊಳಗೆ ಹೋಗಿ ಗಣಪತಿಯನ್ನು ಪೂಜಿಸಿ ಅದನ್ನು ಶಾಲೆಗೆ ಬರಮಾಡಿಕೊಂಡೆವು ತದನಂತರ ಅದನ್ನು ಸರಿಯಾದ ಸ್ಥಾನದಲ್ಲಿ ಕುಳ್ಳಿರಿಸಿ ಅದನ್ನು ಅಲಂಕಾರಗೊಳಿಸಿ ಪ್ರಾರ್ಥನಾ ಗೀತೆಯೊಂದಿಗೆ ಗಣಪತಿ ಮೂರ್ತಿಗೆ ಪೂಜೆಯನ್ನು ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳು ಸಲ್ಲಿಸಿದವು ಇದೊಂದು ಸುಂದರ ಸಂಭ್ರಮ ನಮ್ಮ ಶಾಲೆಯಲ್ಲಿ ಗಣಪತಿ ಇಡುವ ಸುಂದರ ನಮ್ಮ ಶಾಲೆಯಲ್ಲಿ ಶನಿವಾರದಂದು ಜರುಗಿತು ಗಣೇಶನಿಗೆ ನಮ್ಮ ಶಾಲೆಯ ಎಲ್ಲಾ ಕಾರ್ಯ ಚಟುವಟಿಕೆಗಳು ಮತ್ತು ನಮ್ಮ ಶಾಲೆಯ ಎಲ್ಲಾ ಮಕ್ಕಳು ಪಠ್ಯೆತರ ಚಟುವಟಿಕೆಗಳಲ್ಲಿ  ಅವರು ಮುಂದೆ ಬರಲಿ ಓದು ಬರಹ ಲೆಕ್ಕಾಚಾರದಲ್ಲಿಯೂ ಕೂಡ ಮುಂದೆ ಬರಲೆಂದು ಸರ್ವ ಶಕ್ತಿಶಾಲಿ ವಿಘ್ನೇಶನಿಗೆ ನಮ್ಮ ನುಡಿ ನಮನಗಳನ್ನು ಸಲ್ಲಿಸಿದೆವು









































Comments