ನನ್ನ ಮುದ್ದು ಮಕ್ಕಳ ಉಡುಗೊರೆ
"ನನ್ನ ಮುದ್ದು ಮಕ್ಕಳ ಉಡುಗೊರೆ"
ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಃ ಬ್ರಹ್ಮ ತಸ್ಮೆಶ್ರೀ ಗುರುವೆನಮಃ.
ಈ ಒಂದು ಶ್ಲೋಕವು ನಮ್ಮ ಎಲ್ಲರ ಬದುಕಿನಲ್ಲಿ ಎಷ್ಟೊಂದು ಅರ್ಥಪೂರ್ಣವಾಗಿದೆ. ಗುರು ನಮ್ಮ ಎಲ್ಲರ ಬದುಕಿನಲಿ ತುಂಬಾ ಮುಖ್ಯವಾದ ಪಾತ್ರ ವಹಿಸುತ್ತಾರೆ. ಪ್ರತಿಯೊಬ್ಬರಿಗೂ ಅವರ ಶಾಲೆಯಲ್ಲಿ ಆದರ್ಶ ಗುರುಗಳು ಗುರುಗಳು ಇದ್ದೆ ಇರುತ್ತಾರೆ.
ಅದೇ ರೀತಿ ನಮ್ಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ನನ್ನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅಚ್ಚರಿ ಗೊಳಿಸುವ ಹಾಗೆ ಉಡುಗೊರೆ ಕೊಟ್ಟರು. ಆ ಉಡುಗೊರೆಯಲ್ಲಿ ಬಣ್ಣದ ಬಳೆಗಳು ಕೈ ಇಂದ ತಯಾರಿ ಮಾಡಿದ ಗ್ರೀಟಿಂಗ್ಸ್ ಅದರಲ್ಲಿ ಸುಂದರ ಕವನಗಳು, ಒಂದು ಕ್ಷಣ ನೋಡಿ ನನ್ನ ಕಣ್ಣು ತುಂಬಿ ಬಂದವು.
ನನ್ನ ವಿದ್ಯಾರ್ಥಿಗಳ ಉಡುಗೊರೆ ಗೆ ನನ್ನ ಮನ ಖುಷಿ ಇಂದ ಕಣ್ಣು ತುಂಬಿ ಬಂದವು. ಅವರಿಗೆ ಧನ್ಯವಾದ ಹೇಳಲು ನನಗೆ ಮಾತೆ ಬರಲಿಲ್ಲ. ಅನಂತರ ಮಕ್ಕಳು ನನ್ನ ಅಭಿಪ್ರಾಯ ಕೇಳಲು ಆರಂಭ ಮಾಡಿದರು ನಾನು ನನ್ನ ಒಂದೆರಡು ಮಾತು ಮಕ್ಕಳ ಬಗ್ಗೆ ಹಾಗೂ ನಮ್ಮ ಶಾಲೆಯ ಬಗ್ಗೆ ಮಾತಾಡಿದೆ. ನಂತರ ಒಬ್ಬ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ನಾನಾ ಬಗ್ಗೆ ಮಾತಾಡಿದರು.
Comments
Post a Comment