ಶಿಕ್ಷಕರ ದಿನಾಚರಣೆಯ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಎಲ್ಲ ಶಿಕ್ಷಕರು ಭಾಗಿಯಾದ ಕ್ಷಣದ ಸಂತೋಷ ಉತ್ತುಂಗಕ್ಕೇರಿತು. ಈ ದಿನದ ಸಂಭ್ರಮದಲ್ಲಿ ಹಲವಾರು ಶಿಕ್ಷಣ ಪ್ರೇಮಿಗಳು , ಶಿಕ್ಷಣ ಇಲಾಖೆಯ ಆಯುಕ್ತರಾದ ,ಶಿಂತ್ರಿ ಮೇಡಮ್ ,ಉಪನಿರ್ದೇಶಕರಾದ ಕೆಳದಿಮಠ ಸರ್ , ನಿರ್ದೇಶಕರಾದ ಶ್ರೀ ಯುತ,ಸದಲ್ಗಿ ಸರ್ ಕೂಡಾ ಪ್ರಮುಖ ಪಾತ್ರ ವಹಿಸಿದ್ದರು . ಸುಮಾರು 2000 ಶಿಕ್ಷಕರ ಸಮೂಹವನ್ನು ಒಂದುಗೂಡಿಸಿದ ಈ ಸಂಭ್ರಮದಲ್ಲಿ, ಸಮಯಪಾಲನೆ , ಶಿಸ್ತು ಪಾಲನೆ , ನೀತಿ ಕಥೆ,ಹರಟೆ, ಗಾಯಣಗಳು ಇವೆಲ್ಲವುಗಳು ಕೂಡ ಪ್ರಮುಖವಾದ ಮನೋರಂಜನೆ ಕಾರ್ಯಕ್ರಮಗಳು ಸುಗಮವಾಗಿ ನೆರವೇರಿದವು . ಒಟ್ಟಾರೆ ಇದು ಒಂದು ಮಾದರಿಯಾದ ಸಂದೇಶವನ್ನು ನೀಡಿತು .
GHPS Mangalagatti ನಮ್ಮ ಶಾಲೆಯ ಮಕ್ಕಳ ಸಿಹಿ ಸಾಧನೆ GHPS Lokur ನಲ್ಲಿ ಈ ಬಾರಿ ಕ್ಲಸ್ಟರ್ ಲೆವೆಲ್ ಪ್ರತಿಭಾ ಕಾರಂಜಿಯನ್ನು ಹಬ್ಬದ ಸಂಭ್ರಮದಲ್ಲಿ ನಡೆಸಲಾಯಿತು. ಹಲವಾರು ಶಾಲೆಗಳ ಮಕ್ಕಳು ಒಂದೇ ವೇದಿಕೆಯಲ್ಲಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು. ನಮ್ಮ ಶಾಲೆಯ ಮಕ್ಕಳು ಉತ್ಸಾಹದಿಂದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು ಹಾಡು, ನೃತ್ಯ, ಭಜನೆ, ಚಿತ್ರಕಲೆ, ಕಥೆ ಹೇಳುವಿಕೆ ಮತ್ತು ಇನ್ನಷ್ಟು. ಮಕ್ಕಳು ವೇದಿಕೆಯ ಮೇಲೆ ಮಿಂಚಿದ ಕ್ಷಣಗಳು ಎಲ್ಲರಿಗೂ ಹೆಮ್ಮೆ ತಂದವು. ಸ್ಪರ್ಧೆಗಳ ಅಂತ್ಯದಲ್ಲಿ ನಮ್ಮ ಶಾಲೆಯ ಮಕ್ಕಳು ಹಲವಾರು ವಿಭಾಗಗಳಲ್ಲಿ ವಿಜಯ ಸಾಧಿಸಿ ವಿಶೇಷ ಬಹುಮಾನಗಳನ್ನು ಪಡೆದರು. ಮಕ್ಕಳು ಬಹುಮಾನ ಸ್ವೀಕರಿಸಿದಾಗ ಅವರ ಮುಖದಲ್ಲಿ ಹೊಳೆದ ಮುದ್ದಾದ ನಗು ಎಲ್ಲರ ಹೃದಯ ಗೆದ್ದಿತು. thank you

Comments
Post a Comment