ಪ್ರತಿಭಾ ಕಾರಂಜಿ - ನಮ್ಮ ಶಾಲೆಯ ಮಕ್ಕಳ ಪ್ರತಿಭೆ
ಪ್ರತಿಭಾ ಕಾರಂಜಿ - ನಮ್ಮ ಶಾಲೆಯ ಮಕ್ಕಳ ಪ್ರತಿಭೆ
ಪ್ರತಿಭಾ ಕಾರಂಜಿ ಕುರುಬಗಟ್ಟಿ ಶಾಲೆಯಲ್ಲಿ ಅದ್ದೂರಿಯಾಗಿ ಜರುಗಿತು. ಇದು ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸಲು ಮತ್ತು ಅವುಗಳನ್ನು ಮುನ್ನೋಟಕ್ಕೆ ತರುವ ವೇದಿಕೆ. ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕರು ಉದ್ಘಾಟಿಸಿದರು. ನಮ್ಮ ಶಾಲೆಯ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ನಾಟಕ, ಹಾಡು, ನೃತ್ಯ, ಚಿತ್ರಕಲೆ, ಭಾಷಣ ಇತ್ಯಾದಿ ಸ್ಪರ್ಧೆಗಳಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು. ನಮ್ಮ ಶಾಲೆಯ ಸುಮಾರು 40 ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ವಿಶಿಷ್ಟ ಪ್ರತಿಭೆಯನ್ನು ತೋರಿಸಿದರು. ವಿದ್ಯಾರ್ಥಿಗಳು ಪ್ರದರ್ಶಿಸಿದ ಜಾನಪದ ನೃತ್ಯ ಮತ್ತು ಗಾಯನ ಎಲ್ಲರ ಮನ ಗೆದ್ದಿತು. ಕಥಾ ವಾಚನ, ಪಾಠಗಳ ವಾಚನ ಮತ್ತು ಕಿರು ನಾಟಕಗಳ ಮೂಲಕ ಮಕ್ಕಳ ಅರ್ಥಪೂರ್ಣ ಅಭಿವ್ಯಕ್ತಿಗಳು ಎಲ್ಲರ ಗಮನ ಸೆಳೆಯುವಂತಾಗಿತ್ತು.
ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಆತ್ಮವಿಶ್ವಾಸ, ಕಲಾತ್ಮಕತೆ ಮತ್ತು ತಂಡ ಕಾರ್ಯವನ್ನು ವೃದ್ಧಿಸುತ್ತದೆ ಎಂಬ ನಂಬಿಕೆಯನ್ನು ಸಾರಿತು. ಕಾರ್ಯಕ್ರಮದ ಅಂತ್ಯದಲ್ಲಿ ವಿಜೇತರನ್ನು ಘೋಷಿಸಲಾಗಿದ್ದು, ಶಾಲೆಯ ಶಿಕ್ಷಕರು ಮತ್ತು ಪ್ರಾಂಶುಪಾಲರು ಮಕ್ಕಳ ಸಾಧನೆಗಳನ್ನು ಸಂತೋಷ್ ಪಟ್ಟರು.ಕಾರ್ಯಕ್ರಮದ ಯಶಸ್ಸಿಗೆ ಶಿಕ್ಷಕರು ಮತ್ತು ಪಾಲಕರ ಸಹಕಾರವೂ ಬಹಳ ಮುಖ್ಯವಾಗಿತ್ತು. ಅವರ ಸಮರ್ಥನೆ ಮತ್ತು ಪ್ರೋತ್ಸಾಹವು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಪೂರಕವಾಯಿತು
.
ಧನ್ಯವಾದಗಳು
ಧನ್ಯವಾದಗಳು
Comments
Post a Comment