ಶಾಲೆಯ ಗಣಪತಿ ವಿಸರ್ಜನೆ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಗಳಗಟ್ಟಿ
ನಮ್ಮ ಶಾಲೆಯಲ್ಲಿ ಗಣೇಶ ಚತುರ್ಥಿಯ ಅಂಗವಾಗಿ ಗಣಪತಿ ವಿಸರ್ಜನೆ ಶ್ರದ್ಧಾಪೂರ್ವಕವಾಗಿ ನಡೆಯಿತು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಎಲ್ಲರೂ ಉತ್ಸಾಹದಿಂದ ಭಾಗವಹಿಸಿದರು. ಗಣೇಶನ ಮೂರ್ತಿಯ ವಿಸರ್ಜನೆಯ ಮೊದಲು, ಶಾಲೆಯಲ್ಲಿ ಸಾಂಪ್ರದಾಯಿಕ ಹಬ್ಬದ ವಾತಾವರಣ ಇತ್ತು. ಗಣಪತಿ ಹಬ್ಬದ ಮೊದಲ ದಿನ, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಗಣೇಶನ ಪ್ರತಿಮೆಯನ್ನು ಶಾಲೆಯಲ್ಲಿ ಪ್ರತಿಷ್ಠಾಪಿಸಿದರು. ಹೂವಿನ ಅಲಂಕಾರ, ಹಬ್ಬದ ಹಾಡುಗಳು ಮತ್ತು ಪೂಜಾ ವಿಧಿವಿಧಾನಗಳು ನಮ್ಮ ಸಂಸ್ಕೃತಿಯ ಸಮೃದ್ಧಿಯನ್ನು ತೋರಿಸಿತು. ಎಲ್ಲವಿದ್ಯಾರ್ಥಿಗಳು ಗಣೇಶನನ್ನು ಪೂಜಿಸುವಾಗ ಅವರ ಮುಖಗಳಲ್ಲಿ ಹರ್ಷದಿಂದ ಕಂಗೊಳಿಸುತ್ತಿದ್ದರು. ವಿಸರ್ಜನೆ ದಿನದಂದು, ಶಾಲೆಯಲ್ಲಿ ವಿಶೇಷ ಶೋಭಾಯಾತ್ರೆ ಆಯೋಜಿಸಲಾಗಿತ್ತು. ನಾವು ‘ಗಣಪತಿ ಬಪ್ಪಾ ಮೋರಿಯಾ’ ಘೋಷಣೆಗಳೊಂದಿಗೆ ಮೂರ್ತಿಯನ್ನು ವಿಸರ್ಜನೆಗೆ ತೆಗೆದುಕೊಂಡು ಹೋದೆವು.
Comments
Post a Comment