ಜಾನಪದ ಜಾತ್ರೆ
ಹೆಬ್ಬಳ್ಳಿ ಗ್ರಾಮದಲ್ಲಿ ನೆಹರು ಕಾಲೇಜಿನಲ್ಲಿ ಜಾನಪದ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಲವಾರು ಕಲಾವಿದರು ಪಾಲ್ಗೊಂಡಿದ್ದರು. ಹಾಗೆ, ನಮ್ಮ ಶಾಲೆಯಿಂದ ಮಕ್ಕಳನ್ನು ಹಳ್ಳಿ ಸೊಗಡಿನಲ್ಲಿ ಕಲಾವಿದರ ರೂಪದಲ್ಲಿ ತಯಾರಿ ಮಾಡಿ ಕರೆದುಕೊಂಡು ಹೋಗಬೇಕಾಗಿತ್ತು. ಮತ್ತು ತಯಾರಿಯನ್ನು ತುಂಬಾ ವಿಜೃಂಭಣೆಯಿಂದ ಮಾಡಲಾಗಿತ್ತು.
ಚಕ್ಕಡಿಯನ್ನು ತೆಗೆದು ಅದಕ್ಕೆ ಅಲಂಕಾರ ಮಾಡಲಾಗಿತ್ತು. ಹಾಗೆ, ಮಕ್ಕಳಿಗೆ ಸೀರೆಯನ್ನು ಉಡಿಸಿ ಕೆಲವು ಮಕ್ಕಳಿಗೆ ಪಂಚೆ ಮತ್ತು ಶಾಲು ಹಾಕಿ, ಮಕ್ಕಳನ್ನು ಸಜ್ಜು ಮಾಡಲಾಗಿತ್ತು. ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ನಮ್ಮ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮವು ತುಂಬಾ ಚೆನ್ನಾಗಿ ನಡೆಯಿತು. ಈ ಕಾರ್ಯಕ್ರಮದ ಉದ್ದೇಶ ಜಾನಪದ ಕಲೆಯನ್ನು ಮರೆಯಬಾರದು ಮತ್ತು ಮಕ್ಕಳಿಗೆ ಅದರ ಬಗ್ಗೆ ಅರಿವು ಮೂಡಿಸುವುದು.
Comments
Post a Comment