ಹೊಸ ದಾರಿ: ಹೊಸ ಕಂಪ್ಯೂಟರ್ ಲ್ಯಾಬ್‌ಗಾಗಿ ಪೂಜೆ
ನಮ್ಮ ಶಾಲೆಯಲ್ಲಿ ಹೊಸ ಕಂಪ್ಯೂಟರ್ ಲ್ಯಾಬ್‌ನ ನಿರ್ಮಾಣಕ್ಕೆ ಮೊದಲ ಹೆಜ್ಜೆ ಹಾಕಿದ ಕ್ಷಣ. ಈ ಮಹತ್ವಪೂರ್ಣ ಕಾರ್ಯದ ಪ್ರಾರಂಭವನ್ನು ಆಚರಿಸಲು ಹೊಸ ಕಂಪ್ಯೂಟರ್ ಲ್ಯಾಬ್‌ಗೆ ಬಾಗಿಲು ಪೂಜೆ ನಡೆಸಲಾಯಿತು. ಈ ಪೂಜೆಯನ್ನು ನಾವು ನಮ್ಮ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು SDMC ಸದಸ್ಯರು ಸೇರಿ ಆಚರಿಸಿದೆವು. ನಮ್ಮ ಶಾಲೆಯ ವಿದ್ಯಾರ್ಥಿ ಮಂತ್ರ ಪಠಿಸಿ ಪೂಜೆ ಸಲ್ಲಿಸಿದನು. ಎಲ್ಲ ಶಿಕ್ಷಕರು ಕಾಮಗಾರಿ ಬೇಗ ಮುಗಿದು ಹೊಸ ಲ್ಯಾಬ್ ನಿರ್ಮಾಣವಾಗಲಿ ಎಂದು ಪ್ರಾರ್ಥಿಸಿದೆವು.
ಹೊಸ ಕಂಪ್ಯೂಟರ್ ಲ್ಯಾಬ್ ನಮ್ಮ ಶಾಲೆಯ ಅಭಿವೃದ್ಧಿಗೆ ಎತ್ತಿದ ಮಹತ್ವಪೂರ್ಣ ಹೆಜ್ಜೆ. ಇದು ನಮ್ಮ ವಿದ್ಯಾರ್ಥಿಗಳಿಗೆ ಪ್ರಗತಿಶೀಲ ಕಲಿಕೆಯನ್ನು, ಹೊಸ ತಂತ್ರಜ್ಞಾನವನ್ನು ಅನುಸರಿಸಲು ಹಾಗೂ ದೇಶ-ವಿದೇಶಾದಲ್ಲಿನ ಸೃಜನಾತ್ಮಕತೆಯ ಜಗತ್ತಿಗೆ ಹೆಜ್ಜೆ ಹಾಕಲು ಅನುವು ನೀಡಲಿದೆ. ನಮ್ಮ ಮಕ್ಕಳ ಪ್ರತಿಭೆಗಳಿಗೆ ಮೈಲಿಗಲ್ಲು ಹಾಕಲು, ಅವುಗಳನ್ನು ಹೊಸ ಪಥದಲ್ಲಿ ನಡೆಯಲು ಪ್ರೇರೇಪಿಸಲಿದೆ.
Comments
Post a Comment