ವಿದ್ಯಾರ್ಥಿಗಳು ಗುಂಪುಗಳಲ್ಲಿ ಓದುವ ಅಭ್ಯಾಸ
GHPS MANGALAGATTI
ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳು ಗುಂಪುಗಳಲ್ಲಿ ಓದುವ ಅಭ್ಯಾಸವನ್ನು ನಡೆಸುತ್ತಿದ್ದಾರೆ. ನಾನು ನಮ್ಮ ಶಾಲೆಯ ವಿದ್ಯಾರ್ಥಿಗಳನ್ನು 5-6 ಜನರ ಗುಂಪುಗಳಾಗಿ ಹಂಚಲಾಗುತ್ತದೆ. ಪ್ರತಿಯೊಂದು ಗುಂಪಿಗೆ ಪ್ರಾರಂಭದಲ್ಲಿ ಅಧ್ಯಯನಕ್ಕೆ ಸಂಬಂಧಿಸಿದ ಪ್ರಶ್ನೆ ಉತ್ತರಗಳನ್ನು, ಕಥೆಗಳು ಅಥವಾ ಗಣಿತ ಲೆಕ್ಕಗಳನ್ನು ಮತ್ತು ಮಗ್ಗಿಗಳನ್ನು, ಪಾಠಗಳನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳು ಆ ಪಾಠವನ್ನು ಪರಸ್ಪರ ಚರ್ಚಿಸಿ, ಅರ್ಥಮಾಡಿಕೊಳ್ಳುತ್ತಾರೆ ಮತ್ತು ನಂತರ ವಯಕ್ತಿಕವಾಗಿ ಓದುತ್ತಾರೆ. ಪಾಠದ ನಂತರ, ಮಕ್ಕಳಿಗೆ ಪ್ರಶ್ನೆಗಳು ಕೇಳಲಾಗುತ್ತದೆ, ಮತ್ತು ಅವರು ಅವುಗಳನ್ನು ಗುಂಪು ಚರ್ಚೆಯ ಮೂಲಕ ಉತ್ತರಿಸುತ್ತಾರೆ. ಒಬ್ಬರಾಗಿ ಮಗ್ಗಿಗಳನ್ನು ಚೆನ್ನಾಗಿ ಹೇಳುತ್ತಾರೆ. ಗುಂಪು ಓದುವು ಮಕ್ಕಳಲ್ಲಿ ಸಹಕಾರ ಹಾಗೂ ಸಮನ್ವಯವನ್ನು ಬೆಳೆಸುತ್ತದೆ. ಓದುವ ಸಂದರ್ಭದಲ್ಲಿ, ಅವರು ಪರಸ್ಪರ ಸಹಾಯ ಮಾಡಿಕೊಳ್ಳುತ್ತಾರೆ, ಇದು ಅವರ ಮನೋಭಾವ ಮತ್ತು ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ. ಈ ಅಭ್ಯಾಸವು ಮಕ್ಕಳಿಗೆ ಓದು ಬರುವಿಕೆಯನ್ನು ಸುಧಾರಿಸಲು ಮತ್ತು ಅಧ್ಯಯನದಲ್ಲಿ ಉತ್ತಮವಾಗಿ ಗಮನ ಹರಿಸಲು ಸಹಾಯ ಮಾಡುತ್ತದೆ. ಈ ರೀತಿಯ ಗುಂಪು ಓದುವ ಪ್ರಕ್ರಿಯೆಯ ಪ್ರಯೋಜನಗಳು ಮಕ್ಕಳಿಗೆ ಬಹಳ ಅನುಕೂಲಕರವಾಗಿದೆ.
ಧನ್ಯವಾದಗಳು
Comments
Post a Comment