ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ
GHPS MANGLAGATTI
ನಮ್ಮ ಶಾಲೆಯಲ್ಲಿ ಜನವರಿ 13 ರಂದು ಸ್ವಾಮಿ ವಿವೇಕಾನಂದ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಮಾಡಿ ನಮನ ಸಲ್ಲಿಸಲಾಯಿತು. ಪ್ರೇಮಾ ಶಿಕ್ಷಕಿ ಅವರು ಸ್ವಾಮಿ ವಿವೇಕಾನಂದರ ಜೀವನ, ಅವರ ತತ್ವಗಳು ಮತ್ತು ಯುವಕರಿಗೆ ನೀಡಿರುವ ಪ್ರೇರಣಾದಾಯಕ ಸಂದೇಶಗಳ ಬಗ್ಗೆ ಮಾತನಾಡಿದರು. ಮತ್ತು ವಿದ್ಯಾರ್ಥಿಗಳ ಸ್ವಾಮಿ ವಿವೇಕಾನಂದರ ಕುರಿತು ಭಾಷಣ ತುಂಬಾ ಚೆನ್ನಾಗಿ ಮಾಡಿದರು. ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಮತ್ತು ಚಿತ್ರಕಲೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ವಿಶೇಷವಾಗಿ, ಸ್ವಾಮಿ ವಿವೇಕಾನಂದರು ಚಿಕಾಗೋ ಭಾಷಣದಲ್ಲಿ ನೀಡಿದ ಭಾಷಣದ ನಾಟಕ ಎಲ್ಲರ ಮನಸ್ಸಿಗೆ ತಲುಪಿತು.
ಧನ್ಯವಾದಗಳು
Comments
Post a Comment