ಸಚೇತನ ಸಂಕ್ರಾಂತಿ ಸುಗ್ಗಿ ಕಾರ್ಯಕ್ರಮ


            

                     ಈ ವಾರ ನಾವು ನಮ್ಮ ಶಾಲೆಯಲ್ಲಿ ಸಚೇತನ ಕಾರ್ಯಕ್ರಮ ಅಡಿಯಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಮಾಡಿದೆವು ಆ ಎಲ್ಲ ಚಟುವಟಿಕೆಗಳು ಸಂಕ್ರಾಂತಿ ಹಬ್ಬಕ್ಕೆ ಸಂಬಂಧಿಸಿದವು. ಈ ವಾರದ ಸಚೇತನ ಕಾರ್ಯಕ್ರಮಗಳು ಈ ಕೆಳಗಿನಂತಿವೆ

1) ಸಂಕ್ರಾಂತಿ ಹಬ್ಬದ ಪರಿಚಯ: ವಿದ್ಯಾರ್ಥಿಗಳು ಎಳ್ಳು ಬೆಲ್ಲವನ್ನು ತೋರಿಸುವುದರ ಮೂಲಕ ಸಂಕ್ರಾಂತಿ ಹಬ್ಬವನ್ನು ಪರಿಚಯಿಸಿದರು 

2) ಕೃಷಿ ಉಪಕರಣಗಳನ್ನು ಪರಿಚಯಿಸುವುದು: ವಿದ್ಯಾರ್ಥಿಗಳು ರೈತರ ಉಡುಪುಗಳನ್ನು ಧರಿಸಿ ಉಪಕರಣಗಳನ್ನು ಪ್ರದರ್ಶಿಸಿದರು. 

3) ಸಂಕ್ರಾಂತಿ ಸುಗ್ಗಿಯ ಹಾಡುಗಳು ಮತ್ತು ನೃತ್ಯ: ವಿದ್ಯಾರ್ಥಿಗಳು ಸುಮಧುರವಾಗಿ ಸಂಕ್ರಾಂತಿಯ ಹಾಡನ್ನು ಹಾಡಿದರು ಮತ್ತು ಸುಂದರವಾದ ನೃತ್ಯವನ್ನು ಮಾಡಿದರು.

4) ಸಂಕ್ರಾಂತಿ ಹಬ್ಬಕ್ಕೆ ಸಂಬಂಧಿಸಿದ ಚಿತ್ರಗಳನ್ನು ತೋರಿಸುವುದು: ನಮ್ಮ ಆರನೇ ತರಗತಿಯ ವಿದ್ಯಾರ್ಥಿಗಳು ಅಂಗವಾಗಿ ಚಿತ್ರಗಳನ್ನು ಬಿಡಿಸಿಕೊಂಡು ಬಂದು ಎಲ್ಲ ವಿದ್ಯಾರ್ಥಿಗಳ ಮುಂದೆ ತೋರಿಸಿದರು.

                    ಈ ಎಲ್ಲ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳು ಸಂಕ್ರಾಂತಿ ಹಬ್ಬದ ವಿಶೇಷತೆಯನ್ನು ತಿಳಿದುಕೊಂಡರು ಮತ್ತು ಹಬ್ಬದ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಂಡರು.

😊😊😊

Comments

Popular posts from this blog

Vidya Poshak - Yuva Internship 2024 - Application form

TPL - Teachers Premier League🏆🏆

Vidya Poshak Yuva Internship 2023