ಚಿಣ್ಣರ ದಸರಾ @ಹನಮನಕೊಪ್ಪ
ಎರಡನೆಯ ದಿನದ ಚಿಣ್ಣರ ದಸರಾ ಕಾರ್ಯಕ್ರಮದ ಪ್ರಯುಕ್ತ ಧ್ಯೆಯ ವಾಕ್ಯ ನಮ್ಮ ಭಾರತೀಯ ಪ್ಯಾರಾ ಒಲಂಪಿಕ್ ಆಟಗಾರರು ಫ್ರಾನ್ಸಿನ ಪ್ಯಾರಿಸಿನಲ್ಲಿ ನಡೆದ ಒಲಂಪಿಕ್ ಸ್ಪರ್ದೆಯಲ್ಲಿ 29 ಪ್ರಶಸ್ತಿಗಳು ಬಂದಿವೆ ಹಾಗೆಯೇ ಎಲ್ಲ ಭಾರತೀಯರು ಸಂಭ್ರಮಿಸುವ ಹಾಗೂ ಖುಶಿ ಪಡುವ ವಿಚಾರ್ ಹಾಗೆಯ ನಮ್ಮ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ಅದರಲ್ಲಿ ವಿದ್ಯಾರ್ಥಿಯ ಕಣ್ಣು ಕಟ್ಟಿ ಅವರ್ ಮನೆಗೆ ಹೋಗುವ ಸ್ಪರ್ಧೆ ಹಾಗೂ ಕುಂಟುವುದು ಹಾಗೆ ಕಣ್ಣು ಕಟ್ಟಿ ನಡೆಯುವುದು ಇನ್ನು ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಿ ಬಹಳ ಚೆನ್ನಾಗಿ ನಡೆದವು. ಹಾಗೆಯೇ ಎಲ್ಲ ವಿದ್ಯಾರ್ಥಿಗಳು ಮನೆಯಿಂದ ಊಟವನ್ನು ತೆಗೆದುಕೊಂಡು ಬಂದು ಶಾಲೆಯಲ್ಲಿ ಎಲ್ಲರೂ ಒಟ್ಟಾಗಿ ಕುಂತು ಹಂಚಿಕೊಂಡು ಊಟವನ್ನು ಮಾಡಿದರು ಈ ದಿನವೂ ಬಹಳ ವಿಶೇಷತೆಯಿಂದ ಕೂಡಿತ್ತು ಎಂದು ಹೇಳಬಹುದು
Comments
Post a Comment