ನಾಡ ಹಬ್ಬ ದಸರಾ
ನಾಡ ಹಬ್ಬ ದಸರಾ
ನಮ್ಮ ಸಂಸ್ಥೆಯ ವತಿಯಿಂದ ಈ ದಸರಾ ರಜೆಯಲಿ ಮಕ್ಕ್ಕಳಿಗಾಗಿ ಒಂದು ಶಿಬಿರವನ್ನು4 ದಿನಗಳ ಕಾಲ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ನಮ್ಮ್ ಶಾಲೆಯಿಂದ ನಮ್ಮ ಮುಕ್ಯೋಪಾದ್ಯಾಯರು ಹಾಗೂ ಶಾಲಾ ಸಂಸತ್ತಿನ ಸದಸ್ಯರ ಪರವಾನಿಗೆ ತೆಗೆದುಕೊಂಡು ನಡೆಸಿದ್ದೆವು, ಅದರಲ್ಲಿ ಮೋದನೆಯ ದಿನ ನಮ್ಮ ನಾಡ ಹಬ್ಬ ದಸರಾ ಎನ್ನುವ ವಿಷಯ ಇಟ್ಟುಕೊಂಡಿದ್ದೆವು.
ನಾಡ ಹಬ್ಬ ದಸರಾ, ಈ ನಮ್ಮ ನಾಡ ಹಬ್ಬ ನಮ್ಮ ಕರ್ನಾಟಕದ ಜನತೆಯೂ ತುಂಬಾ ಅದ್ದೂರಿಯಾಗಿ ಆಚರಿಸುವ ಹಬ್ಬವಾಗಿದೆ. ದಸರಾ ಹಬ್ಬವನ್ನು ಮಹಾನವಮಿ ಎಂದು ಕೂಡ ಕರೆಯಲಾಗುತ್ತದೆ ಮಹಾನವಮಿ ಎಂದರೆ ೯ ದಿನಗಳ ಕಾಲ ದೇವಿಯರ ಪೂಜೆ ಮಾಡುವುದು ಮತ್ತು ೧೦ ನೇ ದಿನ ವೀಜಯದಶಮಿ ಆಚರಣೆ ಮಾಡಲಾಗುತ್ತದೆ. ದಸರಾ ಎಂದರೆ ಕೆಟ್ಟದ್ದು ನಾಶವಾಗಿ ಒಳ್ಳೆಯದಕ್ಕೆ ಜಯಶಾಲಿ ಆಗುವುದು.ಹಿಂತಹ ಒಂದು ಒಳ್ಳೆಯ ವಿಷ್ಯದೊಂದಿಗೆ ನಮ್ಮ ಮಕ್ಕಳಿಯೆಗೆ ಮೊದಲನೆಯ ದಿನದ ಚಿಣ್ಣರ ದಸರಾ ಪ್ರಾರಂಭ ಮಾಡಿ ಒಳ್ಳೆ ಒಳ್ಳೆ ವಿಷಯಗಳ ಬಗ್ಗೆ ಮಾಹಿತಿ ನೀಡಿ ನಂತರ ಮೈಸೂರು ದಸರಾ ಬಗ್ಗೆ ಯಲ್ಲ ತರಹದ ವಿಷ್ಯ ವಿಟಿಸಿ ಕೊಡಲಾಯಿತು ಹಾಗೆಯೇ ಮಕ್ಕಳಿಗೆ ಜಂಬೂ ಸವರಿ ಬಗ್ಗೆ ಮತ್ತು ಮೈಸೂರು ಅರಮನೆಯ ವಿಜೃಂಭಣೆ ಬಗ್ಗೆ ತಿಳಿಸಿ ಕೊಟ್ಟೆವು.
ಅನಂತರ ಮಕ್ಕಳಿಗೆ ಒಂದು ಚಟುವಟಿಕೆ ನೀಡಲಾಯಿತು ಅದರಲ್ಲಿ ಮಣ್ಣಿನಿಂದ ಮೈಸೂರು ದಸರಾಗೆ ಸಂಭಂದಿಸಿದ ಹಲವು ಪ್ರತಿಮೆಗಳನ್ನು ಮಾಡಿ ಮತ್ತು ಬಣ್ಣ ನೀಡಿ ಎಂದು ಹೇಳಿದೆ, ನಿಜವಾಗಿಯೂ ಮಕ್ಕಳು ಬಹಳ ಉತ್ಸುಕದಿಂದ ಈ ಚಟುವಟಿಕೆ ಮಾಡಿದರು. ಬೇರೆ ಬೇರೆ ಮಕ್ಕಳು ಬೇರೆ ಬೇರೆ ತರಹದ ಆಕೃತಿಗಳನ್ನು ಮಾಡಿದ್ದರು ಅದರಲ್ಲಿ ಮೈಸೂರು ಅರಮನೆ, ಆನೆ, ಅಂಬಾರಿ ಹೊತ್ತಿರುವ ಆನೆ ಹಾಗೆ ಸಣ್ಣ ಸಣ್ಣ ಗೊಂಬೆಗಳು. ಅರೇ ನೋಡಲು ತುಂಬಾ ಚನ್ನಾಗಿ ಮಾಡಿದ್ದರೂ.
ಅವರ ಈ ಒಳ್ಳೆಯ ಚಟುವಟಿಕೆಗೆ ನಾನು ಪ್ರಶಂಸೆ ಮಾಡಿ ಚಪ್ಪಾಳೆ ಮೂಲಕ ಅಭಿನಂದಿಸಿದೆ.ಮಕ್ಕಳು ತುಬಾ ಖುಷಿ ಪಟ್ಟರು, ಅವರಿಗೆ ಈ ತರಹದ ಪ್ರಶಂಸೆ ಹಾಗೂ ಅನೇಕ ಚಟುವಟಿಕೆ ಬಗ್ಗೆ ತುಂಬಾ ಆಸಕ್ತಿ ಏರುತ್ತದೆ ಅದನ್ನು ನಾವು ಹೊರಹಾಕಬೇಕು.
Comments
Post a Comment