ಸೊಬಗು ಹೆಚ್ಚಿಸೋ ನಮ್ಮ ಸಂಸ್ಕೃತಿ
ನಮ್ಮ ಸಂಸ್ಕೃತಿ, ನಮ್ಮ ಹೆಮ್ಮೆ
ಕೊನೆಯದಿನ ಮಕ್ಕಳಿಗೆ ನಮ್ಮ ಸಂಸ್ಕೃತಿ ಬಗ್ಗೆ ಅರಿವು ಮೂಡಿಸಲು ಈವತ್ತಿನ ದಿನ ಸಾಂಸ್ಕೃತಿಕ ಉಡುಪುಗಳನ್ನು ಧರಿಸಲು ಹೇಳಿದ್ದೆವು. ಎಲ್ಲ ಮಕ್ಕಳು ಮುದ್ದಾಗಿ ಕಾಣುತ್ತಿದ್ದರು. ನಾನು ನಮಸ್ತೆ ಏಕೆ ಮಾಡುತ್ತೇವೆ ಮತ್ತು ಅದರ ಉಪಯೋಗಗಳನ್ನು ಹೇಳಿದೆ. ಹೆಣ್ಣು ಮಕ್ಕಳು ಸಿಂದೂರ, ಬಿಂದಿ, ಕಾಲ್ಗೆಜ್ಜೆಗಳನ್ನ ಏಕೆ ಹಾಕ್ಬೇಕು ಮತ್ತು ಅದರ ಉಪಯೋಗಗಳನ್ನು ಕಲಿತರು
. ಆಮೇಲೆ ಎಲ್ಲ ಮಕ್ಕಳು ಹಾಡುಗಳನ್ನು ಹಾಡಿದರು. ನಂತರ ಭಾರತೀಯ ಹಬ್ಬಗಳ ಬಗ್ಗೆ ಹೇಳಿದೆ ಆಗ ಎಲ್ಲರು ಹಬ್ಬಗಳ ಪಟ್ಟಿ ಮಾಡಿದರು. ಆಮೇಲೆ ದೇವಸ್ಥಾನಗಳ ರಚನೆ ಮತ್ತು ಕೆಲವು ಸಂಗತಿಗಳನ್ನ ವಿವರಿಸಿದೆ. ಕೊನೆಯದಾಗಿ "ಓಂ" ಎಂಬ ಪದದ ಅರ್ಥ ಹೇಳಿ, ಓಂ ಬರೆದು ದೀಪದಿಂದ ಅಲಂಕರಿಸಿದೆವು. ಓಂಕಾರ ಉಚ್ಚಾರಣೆ ಮಾಡಿ ಚಿಣ್ಣರ ದಸರಾ ಶಿಬಿರವನ್ನು ಕೊನೆಗೊಳ್ಳಿಸಿದೆವು..
ಧನ್ಯವಾದಗಳು .........................
Comments
Post a Comment