ಚಿಣ್ಣರ ದಸರಾ ಶಿಬಿರ ನಮ್ಮ ಚಿಣ್ಣರ ಚಿಲಿಪಿಲಿಯ ಜೊತೆ
ಚಿಣ್ಣರ ದಸರಾ ಮೊದಲನೇ ದಿನ
ಮೈಸೂರು ದಸರಾ ಎಷ್ಟೊಂದು ಸುಂದರಾ ಎನ್ನುತ್ತಾ ನಾವು ಮೊದಲನೇ ದಿನವನ್ನು ಪ್ರಾರಂಭ ಮಾಡಿದೆವು. ನಾನು ಮಕ್ಕಳಿಗೆ ಹೂವು ಕೊಡುವುದರ ಮೂಲಕ ಸ್ವಾಗತ ಕೋರಿದೆ. ನಂತರ ದಸರಾ ಹಬ್ಬದ ಇತಿಹಾಸ ತಿಳಿಸಿದೆ ಮತ್ತು ಮಕ್ಕಳಿಗೆ ದಸರಾ ಉತ್ಸವದ ವಿಡಿಯೋ ನೋಡಿ ತುಂಬಾ ಖುಷಿ ಪಟ್ಟರು. ನಂತರ ಎಲ್ಲರೂ ಮಣ್ಣನ್ನು ಬಳಸಿಕೊಂಡು ಅಂಬಾರಿ ಮತ್ತು ಆನೆ ತಯಾರಿಸಿದರು. ಅವರ ಆ ಖುಷಿ ನೋಡಲೆರಡು ಕಣ್ಣುಗಳು ಸಾಲದಾಯಿತು. ಕೆಲವೊಂದಿಷ್ಟು ಮಕ್ಕಳು ಹೂವು, ಎಲೆ ಬಳಸಿಕೊಂಡು ರಂಗೋಲಿ ಚಿತ್ರ ಬಿಡಿಸಿದರು. ಕೊನೆಯದಾಗಿ ಎಲ್ಲ ಮಕ್ಕಳು ಕಳೆದು ಹೋದ ಇಂಗ್ಲೀಷ್ ಪದಗಳನ್ನು ಕಂಡುಹಿಡಿಯುದರ ಮೂಲಕ ಮೊದಲನೇ ದಿನದ ದಸರಾ ಶಿಬಿರವನ್ನುಮುಕ್ತಾಯಗೊಳಿಸಿದೆವು.
Comments
Post a Comment